ಚಳ್ಳಕೆರೆ ನ್ಯೂಸ್ : ರಾಜ್ಯಾಧ್ಯಾಂತ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ವಿಷಯ ಕನ್ನಡಕ್ಕೆ ವಿದ್ಯಾರ್ಥಿಗಳು ನಗುಮುಖದಲ್ಲೆ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ.
ಅದರಂತೆ ಚಳ್ಳಕೆರೆ ತಾಲೂಕಿನಾದ್ಯಾಂತ ಸುಮಾರು 18 ಪರೀಕ್ಷಾ ಕೇಂದ್ರಗಳಲ್ಲಿ ಸು.5387 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋದಾಯಿಸಿಕೊಂಡು ಇಂದು 62 ವಿದ್ಯಾರ್ಥಿಗಳು ಗೈರಾಗಿದ್ದು ಸುಮಾರು 5325 ವಿದ್ಯಾರ್ಥಿಗಳು ಕನ್ನಡ ವಿಷಯ ಪರೀಕ್ಷೆಯನ್ನು ಬರೆದಿದ್ದಾರೆ.
ಇನ್ನೂ ಸುಮಾರು 18 ಪರೀಕ್ಷಾ ಕೇಂದ್ರಗಳಲ್ಲಿ 17 ಮಾರ್ಗದ ಮೂಲಕ ಸುಮಾರು 303 ಸಿಬ್ಬಂದಿಗಳು ಕರ್ತವ್ಯದಲ್ಲಿ ನಿಯೋಜನಗೊಂಡಿದ್ದಾರೆ, ಅದರಂತೆ ಚಳ್ಳಕೆರೆ ತಾಲೂಕಿನ ತಾಲೂಕಿನಾದ್ಯಾಂತ ನಗರ ಪ್ರದೇಶದಲ್ಲಿ 6 ಕೇಂದ್ರಗಳು, ಗ್ರಾಮೀಣ ಪ್ರದೇಶಗಳಲ್ಲಿ 12 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದಾರೆ.
ಹೇಳಿಕೆ… :
ಇಂದಿನ ಕನ್ನಡ ವಿಷಯಕ್ಕೆ ವಿದ್ಯಾರ್ಥಿಗಳು ಉತ್ಸವಕದಿಂದ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆಯನ್ನು ಎದುರಿಸಿದ್ದಾರೆ, ಅದರಂತೆ ಯಾವುದೇ ಅವಗಡಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದ್ ಬಸ್ತ್ ಮೂಲಕ ಪ್ರಶ್ನೆ ಪತ್ರಿಕೆ ರವಾನೆ ಈಗೇ ಕನ್ನಡ ವಿಷಯದ ಪರೀಕ್ಷೆ ಸುಸೂತ್ರವಾಗಿ ಜರುಗಿದೆ. –ಕೆ.ಎಸ್.ಸುರೇಶ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಳ್ಳಕೆರೆ