ಚಳ್ಳಕೆರೆ ನ್ಯೂಸ್ : ಬಯಲುಸೀಮೆಯ ರೈತರು ಬೆಳೆ ಪರಿಹಾರ ಬರದೆ ಕಂಗಾಲಾಗಿದ್ದಾರೆ,
ಇನ್ನೂ ಸಾಲ ಸೋಲಾ ಮಾಡಿ ಬೆಳೆ ವಿಮೆ ಕಟ್ಟಿದ ರೈತರಿಗೆ ಇದುವರೆಗೂ ಕೈಗೆ ಸೇರಿಲ್ಲ.
ಇದರಿಂದ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ ಇದನ್ನು ಮನ ಗಂಡ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ತಾಲೂಕು ಕಚೇರಿ ಮುತ್ತಿಗೆ ಹಾಕಲಾಗುವುದು, ಎಂದು ಜಿಲ್ಲಾಧಿಕಾರಿಗಳ ಮುಂದೆ ಪ್ರಸ್ತಾಪಿಸಿದಾಗ ಜಿಲ್ಲಾಧಿಕಾರಿ ಇದೇ ಮಾರ್ಚ್ 22ರ ಒಳಗಾಗಿ ರೈತರ ಖಾತೆಗೆ ಹಣ ಹಾಕಲಾಗುವುದು ಎಂದು ಹೇಳಿದ್ದರು.
ಆದರೆ ಇದುವರೆಗೂ ಯಾವುದೇ ರೈತನ ಖಾತೆಗೆ ಬೆಳೆ ವಿಮೆ, ಬೆಳೆ ಪರಿಹಾರ ಬಂದಿಲ್ಲ ಆದ್ದರಿಂದ ಈ ಅಧಿಕಾರಿಗಳ ನಿರ್ಲಕ್ಷ್ಮದೋರಣೆಗೆ ತಾಲೂಕಿನ ರೈತರು ಚಳ್ಳಕೆರೆ ತಾಲೂಕು ಕಚೇರಿ ಮುಂದೆ ಧರಣಿ ಮಾಡಲಾಗುವುದು.
ಆದ್ದರಿಂದ ಧರಣಿಗೆ ಆಸ್ಪಾದನೆ ನೀಡದಂತೆ ರೈತರ ಖಾತೆಗಳಿಗೆ ಹಣ ನೀಡುವಂತೆ ತಹಶಿಲ್ದಾರ್ ರೇಹಾನ್ ಪಾಷ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಅವರಿಗೆ ಒತ್ತಾಯಿಸಿದರು ಇದೇ ಸಂದರ್ಭದಲ್ಲಿ ಉಪ ಕೃಷಿ ನಿರ್ದೇಶಕ ಪ್ರಭಾಕರ್, ಕೃಷಿ ಸಹಾಯಕ ನಿರ್ದೇಶಕ ಆರ್ ಅಶೋಕ್, ತೋಟಗಾರಿಕಾ ಸಹಾಯಕ ನಿರ್ದೇಶಕ ಆರ್ ವಿರೂಪಾಕ್ಷಪ್ಪ, ಹಾಗೂ ರೈತರು ಹಾಜರಿದ್ದರು