ನಾಯಕನಹಟ್ಟಿ::ಸಮೀಪದ. ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ
ರೇಖಲಗೆರೆ ಲಂಬಾಣಿಹಟ್ಟಿ ಗ್ರಾಮದಲ್ಲಿ ಸೋಮವಾರ ಗ್ರಾಮಸ್ಥರ ಸಮ್ಮುಖದಲ್ಲಿ ಸಂತ ಶ್ರೀ ಸೇವಾಲಾಲ್ ಮರಿಯಮ್ಮ ದೇವಿಯ ಶೀಲ ಪ್ರತಿಷ್ಠಾಪನೆ ಹಾಗೂ ಮಹಾದ್ವಾರದ ಉದ್ಘಾಟನೆಯನ್ನು. ಉಪ ನಿರ್ದೇಶಕರು ಕೃಷಿ ಮಾರಾಟ ಇಲಾಖೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಆಡಳಿತ ಅಧಿಕಾರಿ ಎಪಿಎಂಸಿ ಚಳ್ಳಕೆರೆ ಎಸ್ ಶ್ಯಾಮ್ ನಾಯ್ಕ ಟೇಪ್ ಕತ್ತರಿಸುವ ಮೂಲಕ ಚಾಲನೆಯನ್ನು ನೀಡಿ ಮಾತನಾಡಿದ ಅವರು. ನನಗೆ ಜನ್ಮ ನೀಡಿದ ತಂದೆ ಸಕ್ರನಾಯ್ಕ. ತಾಯಿ ಲಕ್ಷ್ಮಿಬಾಯಿ ಸ್ವರ್ಣಾರ್ಥವಾಗಿ ಈ ಊರಿಗೆ ಸುಮಾರು 11 ಲಕ್ಷ ವೆಚ್ಚದಲ್ಲಿ ನನ್ನ ಪತ್ನಿ ಎಸ್ ಕುಮಾ ಇವರ ಸಹಕಾರದೊಂದಿಗೆ ರೇಖಲಗೆರೆ ಲಂಬಾಣಿಹಟ್ಟಿಗೆ ರಾಜಗೋಪುರ ಅರ್ಪಣೆ ಮಾಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಶಿವಪ್ರಕಾಶ ಸ್ವಾಮೀಜಿ ದುಬ್ಬದಳ್ಳಿ ಮಠ , ದೇನಾ ಭಗವಾನ್ ಸ್ವಾಮೀಜಿ ರಾಜ ಯೋಗಿ ಆಶ್ರಮ ಕೊಟ್ಟೂರು. ಮಹಾದ್ವಾರ ದಾನಿಗಳು. ಉಪನಿರ್ದೇಶಕರು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ಕೃಷಿ ಮಾರಾಟ ಇಲಾಖೆ ಆಡಳಿತ ಅಧಿಕಾರಿ ಎಪಿಎಂಸಿ ಚಳ್ಳಕೆರೆ ಎಸ್ ಶಾಮ್ಯನಾಯ್ಕ. ಎಸ್ .ಕುಮಾ,
ಗ್ರಾಮಸ್ಥರಾದ ಕೆ ಸಿ ತಿಪ್ಪೇಸ್ವಾಮಿ, ಪಿ ಸೋಮ್ಲ ನಾಯ್ಕ ಎಇಇ, ಕೃಷ್ಣ ನಾಯ್ಕ, , ಸೇರಿದಂತೆ ರೇಖಲಗೇರೆ ಲಂಬಾಣಿಹಟ್ಟಿ ಸಮಸ್ತ ಊರಿನ ಗ್ರಾಮಸ್ಥರು ಇದ್ದರು.