ಚಳ್ಳಕೆರೆ ನ್ಯೂಸ್ : ಶ್ರೀ ಚಳ್ಳಕೆರಮ್ಮ ದೇವಿ ಜಾತ್ರೆ ಮುಗಿದು ಮೂರು ದಿನಗಳು ಕಳೆದರು ಪೋಲೀಸ್ ಬ್ಯಾರಿಕೇಡ್ ತೆರುವುಗೊಳಿಸದೆ ಇರುವುದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.
ಹೌದು ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಬಳ್ಳಾರಿ ಮಾರ್ಗದ ರಸ್ತೆಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಜಾತ್ರೆಯ ಸಮಯದಲ್ಲಿ ಬೆಂಗಳೂರು ಮಾರ್ಗದಿಂದ ಬರುವ ವಾಹನಗಳು ಚಿತ್ರದುರ್ಗ ರಸ್ತೆಯ ಮೂಲಕ ಹಾದುಹೊಗಲು ಹಾಕಿದ ಬ್ಯಾರಿಕೇಡ್ ತೆರುವುಗೊಳಿಸದ ಕಾರಣ, ಅನ್ಯ ರಾಜ್ಯಗಳಿಂದ ಬಂದ ವಾಹನಗಳು ,ಟ್ರಕ್, ಲಾರಿ ಗೂಡ್ಸ್ , ದೊಡ್ಡ ದೊಡ್ಡ ವಾಹನಗಳು ಚಿತ್ರದುರ್ಗ ರಸ್ತೆಯಿಂದ ತಿರುವ ಮೂಲಕ ಮತ್ತೆ ಬಳ್ಳಾರಿ ಮಾರ್ಗ ತಲುಪಲು ಹರಸಾಹಸ ಪಡುವಂತಾಗಿದೆ.
ಇದರಿಂದ ಅನ್ಯ ರಾಜ್ಯದ ವಾಹನ ಸವಾರರಿಗೆ ಮಾರ್ಗ ಬದಲಾವಣೆ ಗೊತ್ತಿಲ್ಲದೆ ನೆಹರು ವೃತ್ತದಲ್ಲಿ ಸಾಕಷ್ಟು ಕಾಲ ಟ್ರಾಪಿಕ್‌ನಲ್ಲಿ ಉಳಿಯುವಂತಾಗಿದೆ.
ಇನ್ನದರೂ ಸುಗಮ ಸಂಚಾರಕ್ಕೆ ಪೊಲೀಸ್ ಬ್ಯಾರಿಕೇಡ್ ತೆರುವುಗೊಳಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡುವವರೋ ಕಾದುನೋಡಬೇಕಿದೆ.