ಬೊಮ್ಮನಕುಂಟೆ ರತ್ತಮ್ಮನವರಿಗೆ ವಾತ್ಸಲ್ಯ ಮನೆ ಹಸ್ತಾಂತರ
ಚಳ್ಳಕೆರೆ ::ತಾಲೂಕಿನ
ನಾಯಕನಹಟ್ಟಿ ಕಾರ್ಯಕ್ಷೇತ್ರದ ಬೊಮ್ಮನ ಕುಂಟೆ ಗ್ರಾಮದ ನಿರ್ಗತಿಕರಾದ ರತ್ನಮ್ಮನವರಿಗೆ ವಾತ್ಸಲ್ಯ ಮನೆ ಮಂಜೂರಾಗಿದ್ದು,ಈ ದಿನ ಜಗಳೂರು ಜಿಲ್ಲಾ ನಿರ್ದೇಶಕರಾದ ಗೌರವಾನ್ವಿತ ಜನಾರ್ಧನ್ ಉದ್ಘಾಟಿಸಿ ಮಾತನಾಡಿದರು.
ವಾತ್ಸಲ್ಯ ಕಾರ್ಯಕ್ರಮವು ಹೇಮಾವತಿ ಅಮ್ಮನವರ ಅತ್ಯಂತ ಪ್ರೀತಿಯ ಕಾರ್ಯಕ್ರಮವಾಗಿದ್ದು,ಈ ಸಮಾಜದಲ್ಲಿ ಅತ್ಯಂತ ನಿಕೃಷ್ಟ ಜೀವನವನ್ನು ನಡೆಸುವ, ಮೂಲಭೂತ ಸೌಕರ್ಯವಿಲ್ಲದ,ನೋಡಿಕೊಳ್ಳಲು ಯಾರು ಇಲ್ಲದ ಅಸಹಾಯಕ ಕುಟುಂಬಗಳನ್ನು ಗುರುತಿಸಿ ಅವರಿಗೆ ಪ್ರತಿ ತಿಂಗಳು ಮಾಸಾಶನ, ವಾತ್ಸಲ್ಯ ಮಿಕ್ಸ್ ಎಂಬ ಆಹಾರ, ದಿನ ಬಳಕೆಯ ವಸ್ತುಗಳು ಹಾಗೂ ವಾತ್ಸಲ್ಯ ಮನೆಯನ್ನು ನಿರ್ಮಿಸಿಕೂಡಲಾಗುತ್ತೀದೆ.ಹಾಗಾಗಿ ರತ್ನಮ್ಮನನ್ನು ಗುರುತಿಸಿ ಅವರಿಗೆ ಈ ದಿನ ವಾತ್ಸಲ್ಯ ಹಸ್ತಾಂತರ ಮಾಡುತ್ತಿದ್ದೇವೆ.ಇನ್ನು ಮುಂದಕ್ಕೆ ಇವರಿಗೆ ಶಾಶ್ವತ ಸಹಕಾರವನ್ನು ಗ್ರಾಮಸ್ಥರು ನೀಡಬೇಕೆಂದು ತಿಳಿಸಿದರು.
ಇನ್ನೂ ನಾಯಕನಹಟ್ಟಿ ತಾಲೂಕಿನ ಯೋಜನಾಧಿಕಾರಿಗಳಾದ ಅಣ್ಣಪ್ಪ ಅವರು ಮಾತನಾಡಿ ವಾತ್ಸಲ್ಯ ಮನೆ ರಚನೆಗೆ ಸಹಕಾರ ನೀಡಿದ ಎಲ್ಲಾರಿಗೂ ಧನ್ಯವಾದಗಳನ್ನು ಅರ್ಪಿಸಿ, ಈ ದಿನ ನಾವೆಲ್ಲ ಅತ್ಯಂತ ಪುಣ್ಯದ ಕೆಲಸದಲ್ಲಿ ಭಾಗಿಯಾಗಿದ್ದೇವೆ,ಈ ಸಹಕಾರ ಸದಾ ಹೀಗೆ ಇರಲಿ,ಈ ಕುಟುಂಬ ಈ ಮನೆಯಲ್ಲಿ ನೆಮ್ಮದಿಯ ಜೀವನ ನೆಡಸಲಿ ಎಂದು ಹಾರೈಸಿದರು.
ಸಂದರ್ಭದಲ್ಲಿ ಸಮನ್ವಯಾಧಿಕಾರಿ ಶ್ರೀಮತಿ ಪಿ. ಯಶೋಧ, ಮೇಲ್ವಿಚಾರಕರಾದ ಪ್ರದೀಪ್, ಸೇವಾ ಪ್ರತಿನಿಧಿ ಮಂಗಳಗೌರಿ , ಗ್ರಾಮಸ್ಥರು ಭಾಗವಹಿಸಿದ್ದರು