ಚಳ್ಳಕೆರೆ ನ್ಯೂಸ್ :
ಗ್ರಾಮದ ಸೊಸೆಯಂದಿರಿಂದ ದೇವರ ಮುಂದೆ
ಟಪಾಂಗುಚ್ಚಿ ನೃತ್ಯ
ಜಾತ್ರಾ ಮಹೋತ್ಸವ ಪ್ರಯುಕ್ತ ಗ್ರಾಮದ ಸೊಸೆಯಂದಿರು ಡಾನ್
ಮಾಡೋ ಮೂಲಕ ಗ್ರಾಮದೇವತೆ ದ್ಯಾಮಲಾಂಬ ದೇವಿಯ
ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು.
ಹೊಳಲ್ಕೆರೆ ತಾಲೂಕಿನ ಹಳೇಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ
ವಿಶಿಷ್ಟವಾಗಿ ದ್ಯಾಮಲಾಂಬ ದೇವಿ ಪಲ್ಲಕ್ಕಿ ಉತ್ಸವ
ಹಮ್ಮಿಕೊಳ್ಳಲಾಗಿತ್ತು.
ಈ ಗ್ರಾಮದಲ್ಲಿ ತಲೆ ತಲಾಂತರದಿಂದ
ನಡೆದುಕೊಂಡ ಬಂದ ಪದ್ಧತಿಯಂತೆ ಜಾತ್ರೆಯಲ್ಲಿ ಗ್ರಾಮದ
ಸೊಸೆಯಂದ್ರು ನೃತ್ಯ ಮಾಡುತ್ತಾರೆಂದು ಗ್ರಾಮದವರು ಹೇಳುತ್ತಾರೆ.