ರಾಮಾಂಜನೇಯ ಚನ್ನಗಾನಹಳ್ಳಿ
ಚಳ್ಳಕೆರೆ : ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಹೆಂಗಳೆಯರ ಆರಾಧ್ಯ ದೈವ ಶ್ರೀಚಳ್ಳಕೆರೆಯಮ್ಮ ದೇವಿ ಜಾತ್ರೆಯ ನಾಲ್ಕನೆ ದಿನವಾದ ಗುರುವಾರ ಸಿಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.
ಪ್ರತಿ ನಾಲ್ಕು ವರುಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ ಆಂಧ್ರ ಪ್ರದೇಶದಿಂದಲೂ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆದರು. ಬುಧವಾರ ಮತ್ತು ಗುರುವಾರ ದೇವಿಯ ಜಾತ್ರೆಗೆ ಬಂದ ನೆಂಟರಿಷ್ಟರಿAದ ನಗರ ತುಂಬಿತ್ತು. ಸಿಡಿಯ ಇಡೀ ದಿನ ಎಲ್ಲೆಡೆ ಸಂಭ್ರಮ ಸಡಗರ ಭಕ್ತರಲ್ಲಿ ಮನೆ ಮಾಡಿತ್ತು.
ಈ ಜಾತ್ರೆಯ ವೀಶೆಷವೆಂದರೆ ಸಿಡಿ ಉತ್ಸವ. ಈ ಉತ್ಸವವನ್ನು ನೋಡಲು ದೇವಸ್ಥಾನದಿಂದ ನೆಹರೂ ವೃತ್ತದವರೆಗೂ ಭಕ್ತಾಧಿಗಳು ಸಾಲು ಸಾಲುಗಟ್ಟಿ ಉತ್ಸವದ ಬಂಡಿಯನ್ನು ವೀಕ್ಷಿಸಿದರು. ಹರೆಕೆ ಹೊತ್ತ ಮಹಿಳೆಯರು, ಮಕ್ಕಳು. ಪುರುಷರು ಸಿಡಿ ಕಂಬವನ್ನೇರಿ ದೇವಿಯ ಹರಿಕೆ ತೀರಿಸಿದರು. ಉತ್ಸವ ನಡೆಯುವ ಉದ್ದಕ್ಕೂ ಡೊಳ್ಳು ಕುಣಿತ, ವೀರನಾಟ್ಯ, ಕೋಲಾಟ, ಪೋತರಾಜರ ವೀರನಾಟ್ಯ, ನಂದಿಕೋಲು ವಿವಿಧ ಜಾನಪದ ಕಲಾತಂಡಗಳು ಜನರ ಗಮನ ಸೆಳೆದವು. ಸಿಡಿ ಉತ್ಸಕ್ಕೂ ಮುನ್ನ ಮುಕ್ತಿ ಬಾವುಟ ಹರಾಜು, ಪ್ರಕ್ರಿಯೆ ನಡೆಯಿತು ಹಳೆನಗರದ ಎಂ.ಸುಧಾಕರ್ ರವರಿಗೆ ಸು.25 ಸಾವಿರ ರೂಪಾಯಿಗಳಿಗೆ ಹರಾಜು ಪಡೆದು ದೇವಿ ಕೃಪೆಗೆ ಪಾತ್ರರಾದರು. ನಂತರ ದೇವಿಗೆ ಹರಕೆ ಹೊತ್ತ ಭಕ್ತರು ಒಪ್ಪೊತ್ತಿನಿಂದ ಸಿಡಿ ಉತ್ಸವದ ಕಂಬ ಹೇರುವ ಮೂಲಕ ದೇವಿ ಹರಕೆಯನ್ನು ತೀರಿಸಿದರು.

ಸಿಡಿ ದೇವಿಯ ಪವಾಡ :
ಸಂಪ್ರದಾಯದAತೆ ದೇವಿಯ ಸಿಡಿ ಕಂಬವನ್ನು ಹರಿಜನ ಮಹಿಳೆಯೇ ಹೇರಿದ ನಂತರವೇ ಮುಂದಿನ ಭಕ್ತರು ಹೇರುವುದು ವಾಡಿಕೆ ಇದೆ. ಇನ್ನೂ ಪ್ರತಿ ವರ್ಷ ಈ ದೇವಿ ವರವನ್ನಿತ ಮಹಿಳೆ ಒಪ್ಪತ್ತಿನಿಂದ ಸಿಡಿ ಕಂಬವೆರಲು ಸಜ್ಜಾಗುತ್ತಾರೆ, ಮನೆಯಿಂದ ದೇವ ಸ್ವದೃಪದಿಂದ ಅಲಂಕಾರಗೊAಡ ಈ ದೇವಿ ಮಹಿಳೆ ನಗರದ ಹಳೆಟೌನ್‌ನಿಂದ ನಗರದ ಎಲ್ಲಾ ಮುತೈದೆಯರ ಸಮ್ಮುಖದಲ್ಲಿ ಪವಾಡ ಎಂಬAತೆ ದೇವಿಯ ಸ್ವರೂಪದಲ್ಲಿ ಪೂಜೆಗೈದು ನಂತರ ದೇವಾಸ್ಥನಕ್ಕೆ ತೆರಳಿ ದೇವರ ಹರಕೆ ಕೇಳಿ ನಂತರ ಸಿಡಿ ಕಂಭವನ್ನೆರಿ ಸಾವಿರಾರ ಭಕ್ತರ ಹರ್ಷದ್ಗೋರಕ್ಕೆ ಉದೋ ಚಳ್ಳಕೆರಮ್ಮ ಎಂಬ ಜಯ ಘೋಷಗಳು ಮೊಳಗುತ್ತಾವೆ, ನಂತರ ದೇವಿಗೆ ವಿವಿಧ ಮಹಿಳಾ ಸಂಘ, ಸಂಸ್ಥೆಯವರು ಹಾಗೂ ಗ್ರಾಮದ ಮುತ್ಯೆöÊದೆಯರು ದೇವಿಗೆ ಉಡಿಯಕ್ಕಿ, ಕುಪ್ಪಸ, ಸೀರೆ, ಹಸಿರುಬಳೆ, ಅರಶಿನ, ಕುಂಕುಮವನ್ನು ನೀಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿದರು. ದೇವಿಗೆ ವಿವಿಧ ಹೂಗಳಿಂದ ಅಲಂಕರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಇದರ ಜೊತೆಯಲ್ಲಿ ಗ್ರಾಮ ದೇವರುಗಳಾದ ಶ್ರೀವೀರಭದ್ರಸ್ವಾಮಿ, ಓರಗಲ್ಲಮ್ಮ, ಬಿಡಾರದಮ್ಮ, ಸಿದ್ದರಾಮೇಶ್ವರ, ಉಡಿಸಲಮ್ಮ ಮುಂತಾದ ದೇವರುಗಳು ಚಳ್ಳಕೆರೆ ದೇವಸ್ಥಾನದಲ್ಲಿ ಕುಳಿತು ಸಾವಿರಾರು ಭಕ್ತರಿಗೆ ದರ್ಶನ ನೀಡಿದವು.
ಪೋಟೋ1 ಚಳ್ಳಕೆರೆ ನಗರದ ಗ್ರಾಮ ದೇವತೆ ಶ್ರೀಚಳ್ಳಕೆರೆಯಮ್ಮ ದೇವಿ ಜಾತ್ರೆ ಅಂಗವಾಗಿ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಿಡಿ ಉತ್ಸವ ಜರುಗಿತು.
ಪೋಟೋ2. ಚಳ್ಳಕೆರೆ ನಗರದಲ್ಲಿ ಗುರುವಾರ ನಡೆದ ಶ್ರೀಚಳ್ಳಕೆರೆಯಮ್ಮ ದೇವಿ ಜಾತ್ರೆಯ ಸಿಡಿ ಉತ್ಸವದಲ್ಲಿ ಭಾಗವಹಿಸಿದ್ದ ವಿವಿಧ ಜಾನಪದ ಕಲಾ ತಂಡಗಳು

Namma Challakere Local News
error: Content is protected !!