ನಾಯಕನಹಟ್ಟಿ:: ಮಾ.12. ಹಿರೆಕೆರೆ ಕಾವಲು ಗೋಶಾಲೆಯಲ್ಲಿ ರೈತರ ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಮೇವನ್ನು ವಿತರಿಸಲಾಗುತ್ತದೆ ಎಂದು ನಲಗೇತನಹಟ್ಟಿ ಗ್ರಾಮ ಲೆಕ್ಕಾಧಿಕಾರಿ ಹರೀಶ್ ಹೇಳಿದ್ದಾರೆ.
ಮಂಗಳವಾರ ಸಮೀಪದ ಹಿರೆಕೆರೆ ಕಾವಲು ಪ್ರದೇಶದ ಗೋಶಾಲೆಯಲ್ಲಿ ರೈತರ ಜಾನುವಾರುಗಳಿಗೆ ಭತ್ತದ ಹುಲ್ಲನ್ನು ವಿತರಣೆ ಮಾಡಿ ಮಾತನಾಡಿದ ಅವರು
ಚಳ್ಳಕೆರೆ ತಾಲೂಕು ಅತ್ಯಂತ ಬರಪೀಡಿತ ಪ್ರದೇಶ ಆಗಿರುವುದರಿಂದ 202324ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಚಳ್ಳಕೆರೆ ತಾಲೂಕನ್ನು ಬರಪೀಡು ಪ್ರದೇಶ ಎಂದು ಘೋಷಣೆ ಮಾಡಿರುವುದರಿಂದ ಹಿರೇಕೆರೆ ಕಾವಲಿನಲ್ಲಿ ಮಾರ್ಚ್ 6 ರಂದು ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ರವರು ಗೋಶಾಲೆಯನ್ನ ಪ್ರಾರಂಭಿಸಿದ್ದಾರೆ ಈ ಭಾಗದ ರೈತರ ಜಾನುವಾರುಗಳು ಗೋಶಾಲೆಗೆ ಸುಮಾರು 2500 ರಿಂದ 3000 ಜಾನುವಾರಗಳು ಇಲ್ಲಿಗೆ ಬರುತ್ತವೆ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಬರೆದ ಛಾಯಾ ಆವರಿಸಿದೆ ಇಲ್ಲಿನ ರೈತರ ಜಾನುವಾರುಗಳಿಗೆ ಭತ್ತದ ಹುಲ್ಲನ್ನು ನೀಡಲಾಗುತ್ತದೆ ದೊಡ್ಡ ಎತ್ತು ಅಥವಾ ಹಸುಗೆ 6 ಕೆ ಜಿ. ಚಿಕ್ಕ ಎತ್ತು ಅಥವಾ ಹಸುಗೆ 3 ಕೆಜಿ ಮೇವನ್ನು ವಿತರಿಸಲಾಗುತ್ತದೆ. ರೈತರು ಮೆಕ್ಕೆಜೋಳ ಸಪ್ಪೆಯನ್ನು ಕೇಳುತ್ತಿದ್ದಾರೆ ಶೀಘ್ರದಲ್ಲೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಮೆಕ್ಕೆಜೋಳ ಸಪ್ಪೆಯನ್ನು ವಿತರಣೆ ಮಾಡಲಾಗುತ್ತದೆ ಎಂದರು.
ಇದೆ ವೇಳೆ ಎತ್ತಿನಹಟ್ಟಿ ರೈತ ಬೋರೇಗೌಡ ಮಾತನಾಡಿ ಶಾಸಕ ಎನ್ ವೈ ಗೋಪಾಲಕೃಷ್ಣ ರವರು ಈ ಭಾಗದ ರೈತರ ನೋವನ್ನು ಆಲಿಸಿ ಜಾನುವಾರುಗಳಿಗೆ ಗೋಶಾಲೆಯನ್ನು ಪ್ರಾರಂಭಿಸಿರುವುದು ತುಂಬಾ ಸಂತೋಷದ ವಿಷಯ ಈ ಗೋಶಾಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿ ಟಿ ವೆಂಕಟೇಶ್ ತಹಶೀಲ್ದಾರ್ ರೇಹಾನ್ ಪಾಷಾ ಭೇಟಿ ನೀಡಿದ್ದರು ಮತ್ತು ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಉತ್ತಮವಾಗಿ ರೈತರಿಗೆ ಗೋಶಾಲೆಯಲ್ಲಿ ಮೇವು ನೀರು ನೆರಳು ಸೇರಿದಂತೆ ರೈತರಿಗೆ ಸಹಕಾರ ನೀಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನೇರಲಗುಂಟೆ ಗ್ರಾಮ ಲೆಕ್ಕಾಧಿಕಾರಿ ಶಶಿಕಲಾ, ಗ್ರಾಮ ಸಹಾಯಕ ಚನ್ನಬಸಪ್ಪ. ಕುಮಾರ್ ನಾಗರಾಜ್ ಹೇಮಂತ್ ನಾಯ್ಕ ಇದ್ದರು.