ಚಳ್ಳಕೆರೆ ನ್ಯೂಸ್ : ಇದೇ ಮಾರ್ಚ 15 ರಿಂದ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ ಆದ್ದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಎಂದು ಚುನಾವಣಾ ಕಾರ್ಯಕ್ಕೆ ಸಜ್ಜಾಗಿ ಎಂದು ಅಧಿಕಾರಿ ಬಿ.ಆನಂದ ಹೇಳಿದರು.
ಅವರು ನಗರದ ತಾಲೂಕು ಕಛೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ವಿದ್ಯುತ್ , ಇರುವಂತೆ ಮತಗಟ್ಟೆಯಲ್ಲಿ ಮುಂಜಾಗ್ರತ ಕ್ರಮವಹಿಸಿ, ಎಂಸಿಸಿ ನಿಯಮ ಉಲ್ಲಂಘನೆ ಯಾಗದಂತೆ ನೋಡಿಕೊಳ್ಳಬೇಕು, ಈಗಾಗಲೇ ರಾಜಕಾರಣಿಗಳು ಹೆಸರುಗಳು, ಪೋಟೋಗಳು, ಎಲ್ಲಿಯೂ ಇರದಂತೆ ಬಣ್ಣ ಬಳಿಯಬೇಕು, ಪ್ಲೆಕ್ಸ್, ಬ್ಯಾನರ್ ಹಾಕುವಾಗಿಲ್ಲ ಎಂದು ನೀತಿ ಸಂಹಿತೆ ಜಾರಿಯಾಗುತ್ತೆ, ಅಂದಿನ 24 ಗಂಟೆಯೊಳಗೆ ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಚುನಾವಣೆ ಪ್ರಾರಂಭವಾದ ದಿನದಿಂದ ಸ್ವೀಪ್ ಸಮಿತಿ ಪ್ರಾರಂಭ ಮಾಡಲಾಗುತ್ತದೆ ಎಂದರು.
ಇನ್ನೂ ತಾಲೂಕಿನಲ್ಲಿ ಕುಡಿಯುವ ನೀರಿಗೆ ಮೊದಲ ಆಧ್ಯತೆ ನೀಡಿ,
ಇಮಾಂಪುರದಲ್ಲಿ ಶೌಚಾಲಯ ದುರಸ್ತಿ ಇದೆ..ಕಾಮಗಾರಿಯನ್ನು ಅತೀ ತುರ್ತಾಗಿ ಮುಗಿಸಲು ತಾಕೀತು ಮಾಡಿದರು.
ತಹಶಿಲ್ದಾರ್ ರೇಹಾನ್ ಪಾಷ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 260, ಮತಗಟ್ಟೆಗಳು ಇವೆ, ಅದರಲ್ಲಿ ಸು. 78 ಮತಗಟ್ಟೆಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇವೆ, ಅವುಗಳನ್ನು ನೀತಿ ಸಂಹಿತೆ ಜಾರಿಯಾಗುವ ಮುಂಚೆಯೇ ಅಧಿಕಾರಿಗಳು ಗಮನಹರಿಸಬೇಕು
ಎಂದರು.
ಇದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಬಿಇಓ ಕೆಎಸ್.ಸುರೇಶ್, ತಾಪಂ ಇಓ, ಲಕ್ಷ್ಮಣ, ನಗರಸಭೆ ಪೌರಾಯುಕ್ತ ಜೀವನ್ ಕೆ, ಕುಡಿಯುವ ನೀರು ಇಲಾಖೆ ಎಇಇ ದಯಾನಂದ, ಚಿತ್ರದುರ್ಗ ತಾಲೂಕು ಪಂಚಾಯತ ಇಓ. ಅನಂತರಾಜ್,
ಚುನಾವಣೆ ಸಿರಸ್ತೆದಾರ್ ಪಾತಿಮಾ, ಸಿಬ್ಬಂದಿ ಪುಷ್ಪಲತಾ, ಗಿರೀಶ್, ನಗರಸಭೆ ಇಂಜಿನಿಯರ್ ದಾದಪೀರ್, ಕಸಬಾ ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್, ಇತರರು ಇದ್ದರು.