ನಾಯಕನಹಟ್ಟಿ:: ಸಮೀಪದ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೋಗಿಹಟ್ಟಿ ಗ್ರಾಮದಲ್ಲಿ ಸಾಮಾಜಿಕ ನಾಟಕ ಪ್ರೇಮಪಂಜರ ಅರ್ಥಾರ್ಥ ರವಿಚಂದ್ರ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿ ಅವರು ಗ್ರಾಮೀಣ ಪ್ರದೇಶದಲ್ಲಿ ಇಂತಹ ಬರಗಾಲದ ನಡುವೆ ಕಲಾವಿದರು ಸಾಮಾಜಿಕ ನಾಟಕ ಪ್ರದರ್ಶನ ಮಾಡುವುದು ತುಂಬಾ ಕಷ್ಟ.
ಸಮಾಜದಲ್ಲಿ ಸಾಹಿತ್ಯ ಕಲೆ ಸಂಗೀತ ನೃತ್ಯ ಎಲ್ಲವನ್ನು ಉಳಿಸಿಕೊಳ್ಳಲು ಸಾಮಾಜಿಕ ನಾಟಕಗಳು ತುಂಬಾ ಮುಖ್ಯ ಎಂದರು.
ಸಭೆಯಲ್ಲಿ ನಾಯಕನಹಟ್ಟಿ ಹೋಬಳಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿಯ ಅಧ್ಯಕ್ಷ ಜಿ ಬಿ . ಮುದಿಯಪ್ಪ ಮಾತನಾಡಿ ಜೋಗಿಹಟ್ಟಿ ಗ್ರಾಮ ಬುಡಕಟ್ಟು ಸಂಸ್ಕೃತಿ ಆಚರಣೆಗಳು ಸೇರಿದಂತೆ ಕಲೆ ಮತ್ತು ಸಾಂಸ್ಕೃತಿಗೆ ಅಷ್ಟೇ ಹೆಸರುವಾಸಿ ಆದ ಗ್ರಾಮ ಗ್ರಾಮೀಣ ಪ್ರದೇಶದ ಕಲೆ ಇಂದಿನ ದಿನಮಾನಗಳಲ್ಲಿ ಅಳಿವಿನಂಚಿನಲ್ಲಿದೆ ಎಂದರು.
ಇದೇ ವೇಳೆ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಟಿ ಬಸಪ್ಪ ನಾಯಕ ಮಾತನಾಡಿ ನಮ್ಮ ಭಾರತ ದೇಶ ಸಾಹಿತ್ಯ ಕಲೆ ಸಂಸ್ಕೃತಿಗೆ ಶೌರ್ಯ ಪರಾಕ್ರಮಕ್ಕೆ ತನ್ನದೇ ಆದ ಇತಿಹಾಸವಿದೆ ಎಂದರು.
ಇನ್ನೂ ಸಭೆಯಲ್ಲಿ ನಾಯಕನಹಟ್ಟಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ಕಾರ್ಯಧ್ಯಕ್ಷ ಎಸ್ ಟಿ ಬೋರ್ ಸ್ವಾಮಿ, ಗೌಡಗೆರೆ ಗ್ರಾಮ ಪಂಚಾಯಿತಿ ಸದಸ್ಯ ಮಾಜಿ ಅಧ್ಯಕ್ಷ ಟಿ. ರಂಗಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಭೀಮಕೊಂಡನಹಳ್ಳಿ ಎಸ್ ಓ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮ ಬೋರಯ್ಯ, ಉಪಾಧ್ಯಕ್ಷ ಸಣ್ಣಪ್ಪ, ಸದಸ್ಯರಾದ ಎಸ್. ವೆಂಕಟೇಶ್ ದಳಪತಿ, ಎಸ್ ಸಿ ನಾಗಪ್ಪ, ಸದಸ್ಯೆ ಮಾಜಿ ಉಪಾಧ್ಯಕ್ಷೆ ರೇವಮ್ಮ ಡಿ ಕೆ ಬಸವರಾಜ್, ಬಿ ಮಂಜಮ್ಮ, ಮ್ಯಾನೇಜರ್ ಸೇರಿದಂತೆ ಸಮಸ್ತ ಜೋಗಿಹಟ್ಟಿ ಗ್ರಾಮಸ್ಥರು ವಿವಿಧ ಹಳ್ಳಿಗಳ ಕಲಾವಿದರು ಇದ್ದರು