ಶಾಲೆಯ ಉತ್ತಮ ಬೆಳವಣಿಗೆಗೆ ಪೋಷಕರು ಹಾಗೂ ಗ್ರಾಮಸ್ಥರು ಸಹಕರಿಸಿ. ಶಾಲೆಯ ಕಾರ್ಯದರ್ಶಿ ಕೆ ಆರ್ ತಿಪ್ಪೇಸ್ವಾಮಿ ಮನವಿ.


ನಾಯಕನಹಟ್ಟಿ:: ಶಾಲೆಯ ಉತ್ತಮ ಬೆಳವಣಿಗೆಗೆ ಪೋಷಕರು ಹಾಗೂ ಗ್ರಾಮಸ್ಥರು ಸಹಕರಿಸಿ ಎಂದು ಶ್ರೀ ಮುಗಬಸವೇಶ್ವರ ಶಾಲೆಯ ಕಾರ್ಯದರ್ಶಿ ಕೆ ಆರ್ ತಿಪ್ಪೇಸ್ವಾಮಿ ಹೇಳಿದ್ದಾರೆ .

ಅವರು ಬುಧವಾರ ಸಮೀಪದ ಮಲ್ಲೂರಹಳ್ಳಿ ಗ್ರಾಮದ ಶ್ರೀ ಮೂಗಬಸವೇಶ್ವರ ಹೈಟೆಕ್ ಶಾಲೆಯಲ್ಲಿ ಇಂಗ್ಲಿಷ್ ಡೇ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದರು. ದೇಶದ ಯಾವುದೇ ಮೂಲೆಯಲ್ಲಿ ಕಲಿತರು ಒಂದೇ ಶಿಕ್ಷಣ ಸ್ಥಳೀಯ ಶಾಲೆಯಲ್ಲಿ ಪೋಷಕರು ಶಿಕ್ಷಣ ಕೊಡಿಸಿದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ ಎಂದರು.

ಇದೆ ವೇಳೆ ಶಾಲೆಯ ಮುಖ್ಯ ಶಿಕ್ಷಕಿ ಎಂ. ಸುನಿತಾ ಮಾತನಾಡಿ ಓದಿನ ಹಸಿವು ಇದ್ದವರಿಗೆ ಮಾತ್ರ ಜ್ಞಾನದ ಅಮೃತ ಒಲಿಯುತ್ತದೆ ಎನ್ನುವಂತೆ.
ಐದು ವರ್ಷದ ಮೇಲಿನ ಮಕ್ಕಳಿಗೆ ಶಿಕ್ಷೆ ಶಿಕ್ಷಣ ಪೋಷಕರ ಪ್ರೀತಿ ಎಲ್ಲಾ ಸಮನಾಗಿ ಸಿಗಬೇಕು ಮಗು ಎಲ್ಲಿ ತಪ್ಪು ಮಾಡುತ್ತಿದೆ ಅದನ್ನ ತಿದ್ದುವ ಕೆಲಸವನ್ನು ಪೋಷಕರು ಮಾಡಬೇಕು ಹಾಗಾದರೆ ಮಾತ್ರ ಮಗು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಶ್ರೀ ಮೂಗಬಸವೇಶ್ವರ ಶಾಲೆಯ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಮಲ್ಲೂರಹಳ್ಳಿ ಕ್ಲಸ್ಟರ್ ಸಿ ಆರ್ ಪಿ ಲಿಂಗರಾಜ್, ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಮಾಧ್ಯಮ ಶಿಕ್ಷಕ ವೀರಭದ್ರಪ್ಪ. ಶಿಕ್ಷಕರಾದ ಪಾಲಯ್ಯ, ಪಾಲಾಕ್ಷ, ಶಿಕ್ಷಕಿರಾದ ನಾಗವೇಣಿ, ಶಿಲ್ಪ ,ಸೌಂದರ್ಯ, ಲಕ್ಷ್ಮಿ. ಮಹಾದೇವಿ, ಸೇರಿದಂತೆ ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪೋಷಕರು ಗ್ರಾಮಸ್ಥರು ಇದ್ದರು

Namma Challakere Local News
error: Content is protected !!