ಚಳ್ಳಕೆರೆ ನ್ಯೂಸ್ : ಪ್ರೌಢಶಾಲಾ ಹಂತದಲ್ಲಿ ತಮ್ಮ ಉತ್ತಮ ಕೌಶಲ್ಯ ಬೆಳೆಸಿಕೊಂಡ ಸರ್ ಸಿವಿ.ರಾಮನ್ ರವರು ಇಂದು ನಮ್ಮ ದೇಶದಲ್ಲಿ ವಿಜ್ಞಾನದ ಕಿರ್ತಿಯನ್ನು ಹೆಚ್ಚಿಸಿ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಡಿ.ಲತೀಫ್ ಸಾಬ್ ಹೇಳಿದರು.
ಅವರು ನಗರದ ಎನ್.ಜಯಣ್ಣ ಶಿಕ್ಷಣ ಮಹಾವಿದ್ಯಾಲಯ ಬಿಇಡಿ ಕಾಲೇಜ್ ನಲ್ಲಿ ಹಮ್ಮಿಕೊಂಡ 2024ರ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಿಜ್ಞಾನದಿಂದ ವೈಚಾರಿಕ ನೆಲೆಯೆಡೆಗೆ ಸಾಗುವ ಮೂಲಕ ಇವರ ನಡೆ ಯಾವಗಲು ಕ್ರಿಯಾಶೀಲವಾಗಿ ಬೆಳೆಸಿಕೊಂಡಿರುವ ವ್ಯಕ್ತಿತ್ವ ಹೊಂದಿದ್ದರು, ಆದ್ದರಿಂದ ಈಡೀ ದೇಶದಲ್ಲೆ ವಿಜ್ಞಾನ ಆವಿಷ್ಕಾರ ಮಾಡಿದ ಹೆಗ್ಗಳಿಗೆ ನಮ್ಮ ಚಳ್ಳಕೆರೆ ನಗರಕ್ಕೆ ಇದೆ. ಬಾಬ ಅಣುಸ್ಥಾವರ, ಬಾರ್ಕ್ ಸಂಸ್ಥೆ, ಇಸ್ರೋ ಈಗೇ ಯುವ ವಿಜ್ಞಾನಿಗಳಿಗೆ ಬಯಲು ಸೀಮೆ ವರದಾನವಾಗಲಿದೆ ಎಂದರು.
ಇನ್ನೂ ಪ್ರಾಂಶುಪಾಲರಾದ ಎನ್.ಎಲ್.ಹೇಮಂತರಾಜ ಮಾತನಾಡಿ, ರಾಮನ್ ಪರಿಣಾಮ ಮತ್ತು ಅದರ ಮಹತ್ವ ಕಾಣುವುದಾದರೆ
ಸರ್ ಸಿ ವಿ ರಾಮನ್ ಅವರು ಸಂಶೋಧಿಸಿದ ರಾಮನ್ ಪರಿಣಾಮ ಒಂದು ಅಸಾಧಾರಣ ವೈಜ್ಞಾನಿಕ ಅನ್ವೇಷಣೆಯಾಗಿದ್ದು, ಭೌತಶಾಸ್ತ್ರದ ಕ್ಷೇತ್ರದಲ್ಲಿ ಅತ್ಯಂತ ಮಹತ್ತರವಾದ ಪ್ರಭಾವವನ್ನು ಬೀರಿದೆ. ವಿಜ್ಞಾನ ಕ್ಷೇತ್ರಕ್ಕೆ ಸರ್ ಸಿ ವಿ ರಾಮನ್ ಅವರ ಕೊಡುಗೆಯನ್ನು ಗುರುತಿಸಿ, ಈ ಅನ್ವೇಷಣೆಗೆ ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ. ರಾಮನ್ ಪರಿಣಾಮ ಹೇಗೆ ಬೆಳಕು ಯಾವುದಾದರೂ ವಸ್ತುವಿನೊಡನೆ ಪ್ರತಿಕ್ರಿಯಿಸಿದಾಗ ಚದುರುತ್ತದೆ ಎಂಬುದನ್ನು ವಿವರಿಸುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎನ್.ಎಲ್.ಹೇಮಂತರಾಜ್, ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಎಂ.ಡಿ.ಲತೀಫ್ ಸಾಬ್, ಉಪನ್ಯಾಸಕ ಜಿಎಸ್.ರಾಘವೇಂದ್ರ ನಾಯಕ, ಕೆ.ಬಿ.ರವಿಕುಮಾರ್, ಜಿ.ದೊರೆಸ್ವಾಮಿ, ವಿ.ವಿಶ್ವನಾಥ್ , ಬಿ.ಆರ್.ಕಲ್ಲೆಶ್, ಸಿಎಸ್.ಶಾಮಸುಂದರ್ , ಪ್ರಶಿಕ್ಷಣಾರ್ಥಿಗಳು ಇತರರು ಹಾಜರಿದ್ದರು.