ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದ ಶ್ರೀ ಬೋರಲಿಂಗೇಶ್ವರ ಸ್ವಾಮಿ (ಗುಗ್ಗರಿ ಹಬ್ಬ
ನಾಯಕನಹಟ್ಟಿ:: ಅಧುಕತೆಯ ಭರಾಟೆಯ ನಡುವೆಯೂ ಮ್ಯಾಸಬೇಡ ಬುಡಕಟ್ಟು ಜನರು ಆಚರಿಸುವ ಸಂಪ್ರದಾಯಗಳು ಇಂದಿಗೂ ಕೂಡ ಶ್ರೀಮಂತವಾಗಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ.
ಸಮೀಪದ ಎನ್ ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುದಾಪುರ ಗ್ರಾಮದ ಆರಾಧ್ಯ ದೈವ ಶ್ರೀ ಉದ್ಬವಲಿಂಗ ಶ್ರೀ ಚಿಂತಗುಟ್ಲು ಬೋರಲಿಂಗೇಶ್ವರ ಸ್ವಾಮಿ. ಗುಗ್ಗರಿ ಹಬ್ಬ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಶ್ರೀ ಸ್ವಾಮಿಗೆ ಗಂಗಾ ಪೂಜೆ ಮತ್ತು ರುದ್ರಾಭಿಷೇಕ ರಾತ್ರಿ ಎಂಟು ಗಂಟೆಗೆ ಕಾಸು ಮತ್ತು ಮೀಸಲು ಶ್ರೀ ಸ್ವಾಮಿಗೆ ಅರ್ಪಿಸುವುದು ರಾತ್ರಿ 11:30 ಕ್ಕೆ ಶ್ರೀ ಸ್ವಾಮಿಯೇ ಶಿವಪೂಜೆ ನಡೆಸಲಾಯಿತು.
ರಾತ್ರಿ ಒಂದು ಗಂಟೆಯಿಂದ ನಾಲ್ಕು ಗಂಟೆಯವರೆಗೆ ಶ್ರೀ ಸ್ವಾಮಿಗೆ ಭಕ್ತಾದಿಗಳು ಆರತಿ ಅರ್ಪಿಸಿದರು .
ಸೋಮವಾರ ಬೆಳಗ್ಗೆ ಐದು ಗಂಟೆಯಿಂದ ಆರು ಗಂಟೆವರೆಗೆ ಗುಗ್ಗರಿ ಪೂಜೆ ಬೆಳಿಗ್ಗೆ 9:00ಯಿಂದ 10 ಗಂಟೆಯವರೆಗೆ ಸಿದ್ದ ಬುಕ್ತಿ ಮತ್ತು ಮಂಡೆ ತೆಗೆಯುವುದು ಬೆಳಗ್ಗೆ 10 ಗಂಟೆಯಿಂದ
ಇನ್ನೂ ದೇವರ ಎತ್ತುಗಳ ಮೆರವಣಿಗೆ ಮತ್ತು ಮಣೇವು ಇಡುವುದು ಶ್ರೀ ಸ್ವಾಮಿಯ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ಸ್ವಾಮಿಯ ಮೆರವಣಿಗೆ ಗ್ರಾಮದ ಗುರುಹಿರಿಯರು ಹಾಗೂ ಸರ್ವ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
ಇದೇ ವೇಳೆ ಭಕ್ತಾಧಿಗಳಾದ ಜಿ. ಬಿ. ಉಮೇಶ್ ಮಾತನಾಡಿ ನಮ್ಮ ಪೂರ್ವಜರ ಕಾಲದಿಂದಲೂ ಬಡಕಟ್ಟು ಸಂಸ್ಕೃತಿ ಇನ್ನೂ ಜೀವಂತವಾಗಿದೆ ಎಂದರು.
ಇದೇ ವೇಳೆ ಚಿತ್ರದುರ್ಗ ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂದೀಪ್ ಮಾತನಾಡಿ ನಮ್ಮ ಚಿತ್ರದುರ್ಗ ಚಳ್ಳಕೆರೆ ಮೊಳಕಾಲ್ಮುರು ಬುಡಕಟ್ಟು ಸಂಸ್ಕೃತಿ ಆಚರಣೆಯ ತವರೂರು ಪ್ರತಿ ವರ್ಷ ಫೆಬ್ರವರಿಯಲ್ಲಿ ಹಿರೇಹಳ್ಳಿ ದೊಡ್ಡಸೂರ ನಾಯಕ ಜಾತ್ರೆಯಿಂದ ಪ್ರಾರಂಭವಾದ ನಮ್ಮ ಬುಡಕಟ್ಟು ಸಂಸ್ಕೃತಿ ಆಚರಣೆಯಂತೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಜಾತ್ರೆಗಳು ಮುಗಿದಿವೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಉದ್ಭವ ಲಿಂಗ ಚಿಂತ ಗುಟ್ಲು ಬೋರಲಿಂಗೇಶ್ವರ ಸ್ವಾಮಿಯ ಸಮಸ್ತ ಗುಡಿಕಟ್ಟಿನ ಅಣ್ಣ ತಮ್ಮಂದಿರು ಕುಲಸಾವರದವರು ಮ್ಯಾಸಮಂಡಲದ ಸಮೂಹ ಸೇರಿದಂತೆ ಮತ್ತು ಕುದಾಪುರ ಸಮಸ್ತ ಗ್ರಾಮಸ್ಥರು ವಿವಿಧ ಹಳ್ಳಿಗಳ ಭಕ್ತರು ಇದ್ದರು