ಚಳ್ಳಕೆರೆ ನ್ಯೂಸ್ :
ರೈತರ ಧರಣಿಗೆ ಬೆಂಬಲ ಸೂಚಿಸಿದ ಸ್ಲಂ ಸಂಘಟನೆ
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ
ಮಾಡುವಂತೆ ಆಗ್ರಹಿಸಿ ಕಳೆದ 17 ದಿನಗಳಿಂದ ಅನಿರ್ಧಿಷ್ಟಾವಧಿ
ಪ್ರತಿಭಟನೆಯನ್ನು ಚಿತ್ರದುರ್ಗ ಜಿಲ್ಲಾ ಪಂಚಾಯತ ಮುಂದೆ ನಡೆಸುತ್ತಿದ್ದು,
ಪ್ರತಿಭಟನೆಗೆ ಇಂದು ಸ್ಲಂ ಸಂಘಟನೆ ಬೆಂಬಲ ಸೂಚಿಸಿ ನೂರಾರು ಪ್ರತಿಭಟನಾಕಾರರು
ಪಾಲ್ಗೊಂಡರು.
ಇದೇ ವೇಳೆ ನೋಟ್ ಬ್ಯಾನ್ ನಿಂದ ಒಳ್ಳೇದಾಯ್ತ
ಇಲ್ಲ ಇಲ್ಲ, ಎಲ್ಲರ ಖಾತೆಗೆ 15 ಲಕ್ಷ ಬಂತ ಇಲ್ಲ ಇಲ್ಲ, ಅದಾನಿ
ಅಂಬಾನಿ ಉದ್ಧಾರ ಆದ್ರು, ಎರಡು ಕೋಟಿ ಉದ್ಯೋಗ ಸೃಷ್ಟಿ
ಆಯ್ತ ಇಲ್ಲ ಇಲ್ಲ, ಎಂದು ಘೋಷಣೆ ಕೂಗಿ ಆಕ್ರೋಶ ಹೊರ
ಹಾಕಿದರು.