ಚಳ್ಳಕೆರೆ
ಸುಳ್ಳು ದೂರಿನ ಮೇರೆಗೆ ರಾಮನಗರ ಐಜೂರು ಪೊಲೀಸರು ವಕೀಲರ ಸಂಘದ 45 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿರುವು ದನ್ನು ಖಂಡಿಸಿ ಚಳ್ಳಕೆರೆ ತಹಸಿಲ್ದಾರ್ರಿಗೆ ಮನವಿ ಪತ್ರ ಕೊಡುತ್ತಿದ್ದೇವೆ ಎಂದು ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಹೇಳಿದರು
ಇವರು ನಗರದ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಇವರು ರಾಮನಗರ ಜಿಲ್ಲಾ ವಕೀಲರ ಸಂಘದ 40 ಜನ ವಕೀಲರ ಮೇಲೆ ಮಾಡಿರುವ ಪೊಲೀಸರು ಠಾಣಾ ಧಿಕಾರಿ ಯಾದ ಸೈಟ್ ತನ್ವೀರ್ ಹುಸೇನ್ ಅವರನ್ನು ಅಮಾನತ್ತು ಮಾಡಬೇಕು ದಿನಾಂಕ 12.2.2024 ರಂದು 40 ವಕೀಲರ ಮೇಲೆ ಸುಳ್ಳು ಪ್ರಥಮ ವರ್ತಮಾನ ಅವಧಿಯ ಸಂಖ್ಯೆ 9/2024ರ ವಿರುದ್ಧ ಐ ಜೂ ರು ಪೊಲೀಸರು ಠಾಣೆಯ ಠಾಣಾಧಿಕಾರಿಯಾದ ಸೈಯದ್ ತನ್ವೀರ್ ರವರನ್ನು ಅಮಾನತ್ತು ಮಾಡುವಂತೆ ರಾಮನಗರ ಜಿಲ್ಲಾ ವಕೀಲರ ಸಂಘವು ನಿರಂತರವಾಗಿ ನ್ಯಾಯದ ಕಾರ್ಯಕಲಾಪಗಳಿಗೆ ತೊಂದರೆ ಮಾಡದಂತೆ ಶಾಂತಿಯುತವಾಗಿ ಸಂಘದ ಆವರಣದಲ್ಲಿ ಧರಣಿ ನಡೆಸಿದರು ಈ ಕಾರಣದಿಂದಾಗಿ ಫೇಸ್ಬುಕ್ ಪೇಜ್ ನಲ್ಲಿ ವಕೀಲರಿಗೆ ಅವ ಹೇಳನಕಾರಿ ಮಾತುಗಳನ್ನ ಹೇಳಿ ವಕೀಲ ವೃತ್ತಿಗೆ ಗೌರವ ತಂದಿದೆ ಎಂದು ತಿಳಿಸಿದರು ಇಂಥವರ ಮೇಲೆ ಕಾನೂನು ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದರೆ ಇನ್ನು ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು
ಇನ್ನು ಈ ಸಂದರ್ಭದಲ್ಲಿ ವಕೀಲ ಬೋರ ನಾಯಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು
ಇನ್ನು ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ಪಾಲಯ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ರಾಮಕೃಷ್ಣ ಎನ್ ಬೀರಣ್ಣ ನಾಗರಾಜ್ ಹನುಮಂತ ರಾಯ ಸೇರಿದಂತೆ ಅನೇಕ ವಕೀಲರು ಭಾಗಿಯಾಗಿದ್ದರು