ಚಳ್ಳಕೆರೆ ನ್ಯೂಸ್ : ತಾಲೂಕು ಒಂದೇ , ಜಿಲ್ಲೆನೂ ಒಂದೇ ಆದರೆ ಗೋವುಗಳ ಮೇವಿಗೆ ತಾರತಮ್ಯ ಯಾಕೆ ಎಂದು ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಆರೋಪ ಮಾಡಿದ್ದಾರೆ.
ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ವ್ಯಾಪ್ತಿಯಲ್ಲಿ ಬರುವ ಹಲವಾರು ಹಳ್ಳಿಗಳ ತಾಲ್ಲೂಕು ಕೇಂದ್ರ ಚಳ್ಳಕೆರೆಯಾದರೆ, ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರವಾಗಿದೆ ಆದರೆ ತಾಲೂಕು ಕೇಂದ್ರ ಒಂದೇ ಆದರೂ ಶಾಸಕರು ಮಾತ್ರ ಇಬ್ಬರು ಈಗೀದ್ದರೂ ಕೂಡ ಹಸುಗಳಿಗೆ ಮೇವು ನೀರಿಗಾಗಿ ಹಲೆಯುವ ಪರಿಸ್ಥಿತಿ ಎದುರಾಗಿದೆ.
ಗೋವುಗಳ ರಕ್ಷಣೆಗೆ ರಾಜ್ಯ ಸರ್ಕಾರದ ಗೋಶಾಲೆ, ಕುಡಿಯುವ ನೀರು ಈಗೇ ಮೂಲಭೂತ ಸೌಲಭ್ಯಗಳನ್ನು ನೀಡುವ ಸರ್ಕಾರ ತಾರತಮ್ಯ ಎಸಗುತ್ತಿದೆ.
ಇದರಿಂದ ಈ ಭಾಗದ ಗೋವುಗಳ ಖಾಸಾಯಿ ಖಾನೆಗೆ ಹೊಗುವ ಪರಿಸ್ಥಿತಿ ನಿರ್ಮಾಣವಾಗಿದೆ ಇದರಿಂದ ಅಧಿಕಾರಿಗಳು ಶಾಸಕರ ಕೈ ಗೊಂಬೆಯಂತೆ ಯಾಗದೆ ಚಳ್ಳಕೆರೆ ತಾಲೂಕಿನ ಎಲ್ಲಾ ನಾಲ್ಕು ಹೋಬಳಿ ಕೇಂದ್ರಗಳಲ್ಲಿ ಗೋಶಾಲೆ ತೆರೆದು ಸೌಲಭ್ಯ ಹೊದಗಿಸಬೇಕು.
ಜಿಲ್ಲಾಧಿಕಾರಿಗಳು ಇದರ ಬಗ್ಗೆ ಪರಿಗಣಿಸಬೇಕು.. ಇನ್ನೂ ಸ್ಥಳೀಯ ಶಾಸಕರ ಹಿತಾಸಕ್ತಿ ಇರಬೇಕು ಇದರ ಬಗ್ಗೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ವೈ.ಗೋಪಾಲಕೃಷ್ಣ ರವರು ಧ್ವನಿ ಎತ್ತಿ ಈ ಭಾಗದ ಗೋವುಗಳ ರಕ್ಷಣೆಗೆ ಮುಂದಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.