ನಾಯಕನಹಟ್ಟಿ:: ಜೋಡಿತ್ತಿನ ಗಾಡಿ ಸ್ಪರ್ಧಾಳುಗಳು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರುಹೇಳಿದ್ದಾರೆ.
ಸಮೀಪದ ಶ್ರೀ ಕಾವಲು ಚೌಡೇಶ್ವರಿ ದೇವಾಲಯದ ಪಕ್ಕದಲ್ಲಿ ಮಂಗಳವಾರ ಬಯಲು ಪ್ರದೇಶದಲ್ಲಿ ನಡೆದ ಜೋಡಿತ್ತಿನ ಗಾಡಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ್ದಾರೆ ಬಯಲು ಪ್ರದೇಶದಲ್ಲಿ ಜೋಡಿತ್ತಿನ ಗಾಡಿ ಸ್ಪರ್ಧೆ ಪ್ರಥಮ ಬಾರಿಗೆ ಏರ್ಪಡಿಸಿದ್ದು. ರಾಸುಗಳ ಪ್ರಿಯರು ಸ್ಪರ್ಧೆಯಲ್ಲಿ ಸೋಲು ಗೆಲುವು ಒಂದು ಮುಖದ ಎರಡು ನಾಣ್ಯ ವಿದ್ದಂತೆ ಪ್ರತಿಯೊಬ್ಬರೂ ಸ್ಪರ್ಧೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡು ಉತ್ತಮವಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಹಾಗೂ ಸ್ಪರ್ಧೆಯಲ್ಲಿ ಗೆಲುವನ್ನು ಸಾಧಿಸುವ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಇನ್ನೂ ಜೋಡಿತ್ತಿನ ಗಾಡಿ ಸ್ಪರ್ಧೆಯಲ್ಲಿ ಸುಮಾರು 49 ಜೋಡಿತ್ತಿನ ಗಾಡಿ ಭಾಗವಹಿಸಿದ ರಸುಗಳ ನೊಗವೂತ್ತು. ಜಿಗಿಯುತ್ತಿದ್ದರೆ ರಾಸುಗಳ ಪ್ರಿಯರು, ಸಿಳ್ಳೆ ಕೇಕೆ ಹಾಕಿ ಸಂಭ್ರಮಿಸಿದರು.
ನಾಳೆ ಬುಧವಾರ ಜೋಡಿತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಿದ ಒಟ್ಟು 49 ಫೈನಲ್ ಸ್ಪರ್ಧಿಯನ್ನು ಏರ್ಪಡಿಸಲಾಗಿದೆ.
ಇದೇ ಸಂದರ್ಭದಲ್ಲಿ ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ, ಶ್ರೀ ಕಾವಲು ಚೌಡೇಶ್ವರಿ ದೇವಿ ಸಮಿತಿ ಕಾರ್ಯದರ್ಶಿ ಎಂವೈಟಿ ಸ್ವಾಮಿ, ಭೀಮಗೊಂಡನಹಳ್ಳಿ ಹನುಮಣ್ಣ, ಎತ್ತನಹಟ್ಟಿ ದೇವರಾಜ್, ನಾಯಕನಹಟ್ಟಿ ಹೋಬಳಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿಯ ಅಧ್ಯಕ್ಷ ಜಿ ಬಿ ಮುದಿಯಪ್ಪ, ಟಿ ಬಸಪ್ಪ ನಾಯಕ, ಎಸ್ ಟಿ ಬೋರ್ ಸ್ವಾಮಿ , ನಲಗೇತನಹಟ್ಟಿ ನಲ್ಲನ ದೊಡ್ಡ ಬೋರಯ್ಯ, ಗ್ರಾಮ ಪಂಚಾಯತಿ ಸದಸ್ಯ ಗೌಡ್ರು ಬೋರಯ್ಯ, ಶಿಕ್ಷಕ ಜಿ ವೈ ತಿಪ್ಪೇಸ್ವಾಮಿ, ಆರ್ ಪಾಲಯ್ಯ, ಗುಂತುಕೋಲಮ್ಮನಹಳ್ಳಿ ಎಸ್ ಶಿವತಿಪ್ಪೇಸ್ವಾಮಿ , ಶ್ರೀ ಕಾವಲು ಚೌಡೇಶ್ವರಿ ದೇವಿ ಸಮಿತಿಯ ಸರ್ವ ಸದಸ್ಯರು ನಲಗೇತನಹಟ್ಟಿ ಗ್ರಾಮಸ್ಥರು, ಹಾಗೂ ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಭಾಗವಹಿಸಿದ್ದರು