ಚಳ್ಳಕೆರೆ ; ಸತತ ಪರಿಶ್ರಮ ಹಾಗು ಸಮಾಜದ ಕಳಿ ಕಳಿಯನ್ನು ಹೊಂದಿದ ಅಪ್ರತಿಮವೀರ, ಮಹಾರಾಜ ಎಂದೇ ಪ್ರಸಿದ್ದಿಯಾದ ಛತ್ರಪತಿ ಶಿವಾಜಿ ಸಮಾಜದ ಒಳಿತಿಗೆ ಶ್ರಮಿಸಿದವರು ಎಂದು ಸಣ್ಣ ಕೈಗಾರಿಕಾ ನಿಗಮದ ರಾಜ್ಯಾಧ್ಯಾಕ್ಷ ಅಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ತಾಲೂಕು ಆಡಳಿತ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಮಾರಾಠ ಸಮುದಾಯ ಹಮ್ಮಿಕೊಂಡಿದ್ದು ಛತ್ರಪತಿ ಶಿವಾಜಿ ಜಯಂತಿಯಲ್ಲಿ ಅವರು ಮಾತನಾಡಿದರು.
ನಿರಂತರ ಯುದ್ದದಲ್ಲಿ ತೊಡಗಿದವರು ಸಮಾಜದ ಒಳಿತಿಗೆ ದುಡಿದವರು, ಇವರು ಯುಧ್ದಗಳ ಮೂಲಕ ಆಡಳಿತಾತ್ಮಕ ನೀತಿಯನ್ನು ಜಾರಿಗೆ ತಂದವರು ಇವರು ಜಾತಿವಾರು ಸೈನಿಕರನ್ನು ಪರಿಗಿಸಿದೆ ಕೇವಲ ಸಾಮ್ರಾಜ್ಯವನ್ನು ವಿಸ್ತರಿಸುವ ಅಭಿಲಾಷೆ ಹೊಂದಿದ್ದರು. ಇವರ ಯುದ್ದ ಸೈನಿಕರಲ್ಲಿ ನೂರಕ್ಕೆ ಐವತ್ತರಷ್ಟು ಮುಸ್ಲಿಂ ಸಮುದಾಯದವರು ಇದ್ದರು ಎನ್ನಲಾಗಿದೆ.
ತಹಶೀಲ್ದಾರ್ ರೇಹಾನ್ ಒಆಷ ಪ್ರಸ್ತಾವಿಕವಾಗಿ ಮಾತನಾಡಿ, ಆದರ್ಶ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಶಿವಾಜಿ ಹುಟ್ಟುವಾಗಲೇ ತನ್ನ ತಾಯಿ ಗರ್ಭವಾಸ್ಥೆಯಲ್ಲೆ ತನ್ನ ಮಗನ ಶ್ರೇಯಸ್ಸು ಕಂಡ ದಿಮಂತ ಮಹಿಳೆ ಜೀಜಾಬಾಯಿ ಯಾಗಿದ್ದಳು, ಆದಕ್ಕೆ ರಾಜನಿಗೆ ಜಾತಿ, ಮತ, ಪಂಥಗಳನ್ನು ಪರೀಗಣ ಸದೆ ಕೇವಲ ಸಾಮ್ರಾಜ್ಯ ವಿಸ್ತರಣ ಯ ಗುರಿ ಮಾತ್ರ ಇತ್ತು ಎಂದರು.
ಉಪನ್ಯಾಸ ನೀಡಿದ ಬಿಇಓ ಕೆ.ಸುರೇಶ್ ಮಾತನಾಡಿ, ದೀನ ದಲಿತರಿಗೆ ರೈತಾಪಿ ವರ್ಗಕ್ಕೆ ಸಮಾನವಾದ ರೈತವಾರಿ ಪದ್ದತಿಯನ್ನು ಜಾರಿಗೆ ತಂದು ಸಾರ್ವಜನಿಕರಿಗೆ ಕಂದಾಯ ಪದ್ದತಿ ಜೊತೆಗೆ ಭೂಸುಧಾರಣೆ ಕಾಯ್ದೆಯನ್ನು ಹೊರ ತಂದು ರೈತಾಪಿ ವರ್ಗಕ್ಕೆ ಅನುಕೂಲ ಮಾಡಿದನು. ಸ್ವರಾಜ್ಯ ಪರಿಕಲ್ಪನೆಯನ್ನು ಮೊಟ್ಟ ಮೊದಲಿಗೆ ಹುಟ್ಟು ಹಾಕಿದ ಪ್ರಥಮ ರಾಜ ಎಂದರೆ ಅದು ಛತ್ರಪತಿ ಶಿವಾಜಿ ಎನ್ನಬಹುದು ಎಂದರು.
ಮರಾಠ ಸಮುದಾಯ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ಹಿಂದಿನ ಕಾಲದಲ್ಲಿ ಕಂದಾಯ ವಸೂಲಿಗೆ ಶ್ಯಾನ್ ಬೋಗ್, ಪಟೇಲ್ ಎಂಬ ಕರ ವಸೂಲಿಗಾರರನ್ನು ನೇಮಕ ಮಾಡಿದ್ದರು ಆದರೆ ಇದರಿಂದ ರೈತಾಪಿ ವರ್ಗಕ್ಕೆ ತುಂಬಾ ತೊಂದರೆ ಯಾಗುತಿರುವುದನ್ನು ಶಿವಾಜಿ ಮನಗಂಡು ಗ್ರಾಮದಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಸೃಷ್ಠಿಸಿ ನಿಶ್ಚಿತ ಕಂದಾಯವನ್ನು ಹೊರಡಿಸಿದ. ದೇಶದಲ್ಲಿ ಮೊಟ್ಟ ಮೊದಲಿಗೆ ಬಾರಿಗೆ ಗ್ರಾಮ ವಾಸ್ತವ್ಯ ಹುಟ್ಟು ಹಾಕಿದ ಮೊದಲಿಗರು ಇವರು ಆದ್ದರಿಂದ ಈಗೀನ ಆಧುನಿಕ ಯುಗಮಾನದಲ್ಲಿ ಸರ್ಕಾರದ ಹಂತದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಾ ಬರುತ್ತಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಪೌರಾಯುಕ್ತ ಸಿ ಚಂದ್ರಪ್ಪ,ತಾಪಂ. ಇಓ ಶಶಿಧರ್, ಬಿಇಓ ಕೆ.ಸುರೇಶ್, ಪಿಎಸ್ಐ ಕೆ ಸತೀಶ್ ನಾಯ್ಕ್, ಪಶು ಇಲಾಖೆ ಸಹಾಯಕ ಅಧಿಕಾರಿ ರೇವಣ್ಣ, ಅರಣ್ಯ ಇಲಾಖೆ ಅಧಿಕಾರಿ ಬಹುಗುಣ, ಸಿಡಿಪಿಓ ಹರಿಪ್ರಸಾದ್, ಬಿಸಿಎಂ ಅಧಿಕಾರಿ ದಿವಕಾರ್, ಆರೋಗ್ಯ ಇಲಾಖೆ ಸಹಾಯಕ ಅಧಿಕಾರಿ ಕುದಾಪುರ ತಿಪ್ಪೇಸ್ವಾಮಿ, ಅಬಕಾರಿ ನೀರೀಕ ನಾಗರಾಜ್, ನಗರಸಭೆ ಸ್ಥಾಯಿಬಸಮಿತಿ ಅಧ್ಯಕ್ಷ ಎಂಜೆ.ರಾಘವೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಶಶಿಧರ್, ರಾಜ್ಯ ವಿಶ್ವ ಪರಿಷತ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಮರಾಟ ಸಂಘಧ ಖಾರ್ಯದರ್ಶಿ ನಾಗರಾಜ್, ರಚಿತಾ, ಬಿಎಸ್ ನಾಗರಾಜ್, ಪ್ರಭು, ಅಪ್ಪಸ್ ಪವಾರ್, ಅಮಾನ್ , ದಿನೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಣ್ಣ, ಕಂದಾಯ ನೀರೀಕ್ಷ ಲಿಂಗೇಗೌಡ, ಶ್ರೀನಿವಾಸ್ ಇತರರು ಪಾಲ್ಗೊಂಡಿದ್ದರು.