ಕಾನೂನು ಅನ್ನುವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಮುದ್ರ ವಿದ್ದ ಹಾಗೆ ಯುವ ವಕೀಲರು ಕಾನೂನಾತ್ಮಕ ನಿಲುವನ್ನು ಮೈಗೂಡಿಸಿಕೊಳ್ಳಬೇಕು: ನ್ಯಾಯಮೂರ್ತಿ ಟಿ ವೆಂಕಟೇಶ್ ನಾಯಕ್,

ಚಳ್ಳಕೆರೆ:
ಯುವ ವಕೀಲ ವೃತ್ತಿಯಲ್ಲಿ ಬೆಳೆಯುತ್ತಿರುವ ವಕೀಲರು ಕಾನೂನಿನ ತತ್ವ ಸಿದ್ಧಾಂತವನ್ನು ಅರಿತು ಕಾನೂನಾತ್ಮಕವಾಗಿ ಅಧ್ಯಯನ ಮಾಡಬೇಕು,

ಇಂತಹ ಕಾನೂನು ಕಾರ್ಯಗಾರಗಳಲ್ಲಿ ಭಾಗವಹಿಸಿ ನ್ಯಾಯದ ಜ್ಞಾನ ಪಡೆಯಿರಿ ಎಂದು, ಕರ್ನಾಟಕದ ಉಚ್ಚ ನ್ಯಾಯಮೂರ್ತಿಗಳಾದ ಟಿ ವೆಂಕಟೇಶ್ ನಾಯಕ್ ಕಿವಿ ಮಾತು ಹೇಳಿದರು,

ಇವರು ನಗರದ ಸೋಮ ಗುದ್ದು ರಸ್ತೆಯಲ್ಲಿ ಬರುವ ಕೋರ್ಟ್ ಒಳಾಂಗಣದಲ್ಲಿ ಆಯೋಜಿಸಿರುವ ಕರ್ನಾಟಕ ರಾಜ್ಯ ವಕೀಲರು ಪರಿಷತ್ ಬೆಂಗಳೂರು ,ಹಾಗೂ ವಕೀಲರ ಸಂಘ ಕೆಳ್ಳಕೆರೆ ,ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಇವರು,

ಯುವ ವಕೀಲರು ಕಲಿಕೆಯ ಹಂತದಲ್ಲಿರುವ ವಕೀಲರು ಮೊದಲು ಹಿರಿಯ ವಕೀಲರಿಂದ ಕಾನೂನಿನ ಸಲಹೆ ಪಡೆಯಿರಿ,

ಅಲ್ಲದೆ ಕಕ್ಷಿದಾರರಿಗೆ ಯಾವ ರೀತಿ ನ್ಯಾಯ ಒದಗಿಸಿ ಕೊಡಬೇಕು ಕಾನೂನಿನ ಅಡಿಯಲ್ಲಿ ಯುವ ವಕೀಲರು ಸಮೂಹವು ಕೇಸ್ ಅಧ್ಯಯನ ಮುಖ್ಯವಾಗಿರುತ್ತದೆ ,

ಈ ಹಿನ್ನೆಲೆಯಲ್ಲಿ ಹಿರಿಯ ವಕೀಲರು ಕೂಡ ಹೆಚ್ಚಿನ ಕಾನೂನು ಅಧ್ಯಯನ ಮಾಡುವುದು ಅತ್ಯವಶ್ಯಕತೆ ಆಗಿರುತ್ತದೆ,,

ಈ ನಿಟ್ಟಿನಲ್ಲಿ ನಿಮ್ಮ ಆದರ್ಶಗಳೇ ಯುವ ವಕೀಲರಿಗೆ ಸಂದೇಶವಾಗಿರುತ್ತದೆ ಅಲ್ಲದೆ ಇಂತಹ ಕಾನೂನಿನ ಕಾರ್ಯಗಾರ ಯುವ ವಕೀಲರಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು,,

ಇನ್ನು ಈ ಸಂದರ್ಭದಲ್ಲಿ ವಕೀಲ ಸಂಘದ ತಾಲೂಕು ಅಧ್ಯಕ್ಷ ಕೆಎಂ ನಾಗರಾಜ್ ಮಾತನಾಡಿ,

ಕಾನೂನು ಅನ್ನುವುದು ಎಲ್ಲಾ ಸಮುದಾಯಗಳಿಗೆ ಪೂರಕವಾಗಿರುತ್ತದೆ,

ಈ ಒಂದು ನಿಟ್ಟಿನಲ್ಲಿ ಹಿರಿಯ ವಕೀಲರು ಯುವ ವಕೀಲರ ಜೊತೆ ಸಂಯೋಜಿತವಾಗಿ ಬೆರೆತು ಅವರ ಮಾರ್ಗಸೂಚಿಯಲ್ಲಿ ಕಾನೂನಿನ ಅಧ್ಯಯನ ಮಾಡಿ ಗ್ರಾಮಾಂತರದಿಂದ ಬರುವ ಕಕ್ಷಿದಾರರು ನಿಮ್ಮನ್ನು ದೇವರಂತೆ ಪೂಜಿಸುತ್ತಾರೆ,

ಅಂತವರ ನ್ಯಾಯಯುತವಾದ ಕರ್ತವ್ಯ ನಿಷ್ಠೆ ಇಟ್ಟುಕೊಂಡು ಎಲ್ಲ ಸಮುದಾಯಗಳಿಗೆ ಮಾರ್ಗಸೂಚಿಯಾಗಿ ಎಂದು ಯುವ ವಕೀಲರಿಗೆ ತಿಳಿಸಿದರು,

ಇನ್ನು ಈ ವೇಳೆ ಗೌರವಾನ್ಮತ ಜಿಲ್ಲಾ ನ್ಯಾಯಾಧೀಶರು ಬಿಕೆ ಗೀತಾ ನ್ಯಾಯಾಧೀಶರು, ಚಳ್ಳಕೆರೆ ಹಿರಿಯ ನ್ಯಾಯಾಧೀಶರು ರೇಷ್ಮಾ ಕಲಕಪ್ಪ ಗೋಣೆ, ಜೆಎಂಎಫ್‌ಸಿ ನ್ಯಾಯಾಧೀಶರು ಚಳ್ಳಕೆರೆ ಗೌಡ ಜಗದೀಶ್ ರುದ್ರೆ ,ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ ಎಮ್ ನಾಗರಾಜ್, ವಕೀಲರಾದ ಹನುಮಂತಯ್ಯ ಶ್ರೀನಿವಾಸ್ ಪ್ರಭಾಕರ್ ಸೇರಿದಂತೆ ಅನೇಕ ವಕೀಲರು ಭಾಗಿಯಾಗಿದ್ದರು,

Namma Challakere Local News
error: Content is protected !!