ಚಳ್ಳಕೆರೆ ನ್ಯೂಸ್ : ಬರಗಾಲವಿದೆ ಜನರಿಗೆ ಮೊದಲ ಆಧ್ಯತೆಯಾಗಿ ಕುಡಿಯುವ ನೀರು ಕೊಡಿ ಎಂದು ಸಣ್ಣ ಕೈಗಾರಿಕಾ ನಿಮಗದ‌ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ ಹೇಳಿದರು.

ಅವರು‌ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಆಯೋಜಿಸಿದ್ದ ಪ್ರಗತಿ ಪರೀಶಿಲನಾ ಸಭೆಯಲ್ಲಿ ಮಾತನಾಡಿದರು

ಸರ್ಕಾರದ ಅನುದಾನ ತಡವಾದರೆ ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಬರುವ ಇಲಾಖೆಗಳಲ್ಲಿ ಮುಂಗಡವಾಗಿ ಸಾಲ ಪಡೆದು, ಕುಡಿಯುವ ನೀರಿನ
ಸಮಸ್ಯೆಗಳ ದೂರು , ಮಾಧ್ಯಮಗಳಲ್ಲಿ ಸುದ್ದಿ ಬಂದರೆ ಆಯಾ ಅಧಿಕಾರಳೇ
ನೇರೆ ಹೊಣೆ ಗಾರರು ಎಂದರು.

ಬಯಲು ಸೀಮೆಯನ್ನು ಸರಕಾರ ಈಗಾಗಲೆ ಬರಗಾಲ ಎಂದು ಘೋಷಣೆ ಮಾಡಿದ್ದು ಕುಡಿಯುವ
ನೀರಿನ ನಿರ್ವಹಣೆಗೆ ೨೫ ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದು
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುಂಜಾಗೃತ ಕ್ರಮ
ವಹಿಸುವಂತೆ ಸೂಚನೆ ನೀಡಿದರು.

ತಾಲೂಕಿನಲ್ಲಿ
ಈಗಾಗಲೆ ಕೊರೆದ ೧೭೫ ಕೊಳವೆ ಬಾವಿಗಳ ಹಣ ಬಿಡುಗಡೆ ಮಾಡದೆ
ಇರುವುದರಿಂದ ಯಾರೂ ಬೋರು ಕೊರೆಯಲು ಮುಂದಾಗುತ್ತಿಲ್ಲ.
ಜಲಜೀವನ್ ಮಿಷನ್ ಯೋಜನೆ ಜಾರಿಯಲ್ಲಿರುವುದರಿಂದ ಹೊಸ
ಬೋರು ಕೊರೆಯಲು ಅವಕಾಶ ವಿಲ್ಲದೆ ಈಗಾಗಲೆ ಚಳ್ಳಕೆರೆ ವಿಧಾನ
ಸಭಾ ಕ್ಷೇತ್ರ ವ್ಯಾಪ್ತಿಯ ಕಸಬಾ ಹಾಗೂ ಪರಶುರಾಂಪುರ ಹೋಬಳಿಯಲ್ಲಿ
೨೫ ಹಳ್ಳಿಗಳನ್ನು ಅಂತರ್ಜಲ ಬತ್ತಿ ಹೋಗಿ ನೀರಿನ ಸಮಸ್ಯೆ ಇರುವ
ಹಳ್ಳಿಗಳನ್ನು ಗುರುತಿಸಲಾಗಿದೆ ಎಂದು
ಕುಡಿಯುವ ನೀರು ಸರಬರಾಜು ಎಇಇ ದಯಾನಂದ್ ಸಭೆಯ ಗಮನಕ್ಕೆ ತಂದರು.

ತಾಲೂಕಿನಲ್ಲಿ ಆಶ್ರಯ, ಸ್ಮಶಾನ, ಸೇರಿಂತೆ ಅಗತ್ಯ ಮೂಲ ಭೂತ ಸೌಲಭ್ಯಗಳ ಬಗ್ಗೆ
ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಅಧಿಕಾರಿ ಮಾಹಿತಿ‌ ನೀಡಿ ರೈತರು ಕೊಳವೆ ಬಾವಿ ನೀರು ಕೊಡಲು
ಮುಂದಾಗುತಿಲ್ಲ ಅಡಿಗೆ ಬೆಳೆ ಹಾಕಿರುವುದರಿಂದ ಅದಕ್ಕೆ ಸಾಕಾಗುತ್ತಿಲ್ಲ
ಎಂದು ರೈತರು ನೀರು ಕೊಡುವುದಿಲ್ಲ ಎನ್ನುತ್ತಾರೆ ಎಂದು ಉತ್ತರಿಸಿದರು.

ಗ್ರಾಮಪಂಚಾಯಿಗಳಲ್ಲಿ ಕುಡಿಯುವ ನೀರು ನೈರ್ಲಲ್ಯಕ್ಕೆ ಅನುದಾನದ
ಕೊರತೆಯಿದೆ ಒಂದೇ ಕಂತು ಅನುದಾನ ಬಿಡುಗಡೆ
ಮಾಡಿರುವುದರಿಂದ ರೀಬೋರು ಮಾಡಲು ಅನುದಾನದ ಕೊರತೆಯಿದೆ
ಎಂದು ತಾಪಂ ಇಒ ಹನುಮಂತಪ್ಪ ಶಶಿಧರ್‌ ಸಭೆಯ ಗಮನಕ್ಕೆ ತಂದರು.

ಶಾಸಕರು, ಜನರು ಹಣ ಇದೆ ಇಲ್ಲ ಎಂದು
ಕೇಳುವುದಿಲ್ಲ ಬಿಡಿಗಡೆಯಾಗಿರುವ ೨೫ ಲಕ್ಷ ಆದರೂ ನೀರು
ಕೊಡಬೇಕು ಎಂದು ಕೇಳುತ್ತಾರೆ ಗ್ರಾಮೀಣ ಜನರ ಮಸ್ಯೆಗಳನ್ನು ಅರಿತು
ಅಧಿಕಾರಿಗಳು ಕರ್ತವ್ಯ ನಿರ್ವಹಿಸ ಬೇಕು ಜನರಿಗೆ ನೀರಿನ ಸಮಸ್ಯೆ
ಉಲ್ಬಣವಾಗದಂತೆ ಅಗತ್ಯ ಮುಂಜಾಗೃತೆ ವಹಿಸುವಂತೆ ಸೂಚನೆ
ನೀಡಿದರು.

ಬರಗಾಲದ ಹಿನ್ನೆಯಲ್ಲೆ
ಕುಡಿಯುವ ನೀರಿನ ಸಮಸ್ಯೆಯಾಗಬಾರದು ಎಂದು ವಿಧಾನ ಸಭಾ
ಕಲಾಪಕ್ಕೆ ಒಂದು ಗೈರಾಗಿ ಕ್ಷೇತ್ರದ ಜನರಿಗೆ ನೀರಿನ ಕೊರತೆ ನೀಗಿಸಲು
ಅಗತ್ಯ ಕ್ರಮ ಕೈಗಳ್ಳಲು ಅಧಿಕಾರಿಗಳ ಸಭೆ ಕರೆದಿದ್ದು ಅಧಿಕಾರಿಗಳು
ಒಬ್ಬರ ಮೇಲೆ ಒಬ್ಬರು ಉತ್ತರ ನೀಡದೆ ಜನರಿಗೆ ನೀರನ್ನು ಒದಗಿಸ
ಬೇಕು, ಖಾಸಗಿ ಬೋರ್ ವೆಲ್, ಪಡೆದು ತಾತ್ಕಾಲಿಕವಾಗಿ ಟ್ಯಾಂಕರ್
ಮೂಲಕ ನೀರು ನೀಡ ಬೇಕು ಹಣ ಇದ್ದರೂ ಕೆಲವು ಕಾನೂನು
ತೊಡಕುಗಳನ್ನು ಮುಂದಿಟ್ಟು ಜನರಿಗೆ ನೀರಿನ ಸಮಸ್ಯೆಯಾಗಬಾರದು
ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿ ಕಾರ್ತೀಕ್, ಚಿತ್ರದುರ್ಗ
ತಹಶೀಲ್ದಾರ್ ನಾಗವೇಣಿ, ಚಳ್ಳಕೆರೆ ತಹಶೀಲ್ದಾರ್ ರೇಹಾನ್ ಪಾಷ,
ಚಳ್ಳಕೆರೆ ತಾಪಂ ಇಒ ಶಶಿಧರ್, ಚಿತ್ರದುರ್ಗ ತಾಪಂ ಇಒ ಹನುಮಂತಪ್ಪ, ನಾಗರಾಜ್,
ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು
ತುರುನೂರು, ಪರಶುರಾಂಪುರ, ಕಸಬಾ ಹೋಬಳಿ ವ್ಯಾಪ್ತಿಯ
ಪಿಡಿಒಗಳು ಉಪಸ್ಥಿತರಿದ್ದರು.

Namma Challakere Local News
error: Content is protected !!