ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಭಾಷಾ ಶಿಕ್ಷಕರು ಆಂಗ್ಲಭಾಷೆಯನ್ನು ಇಂಗ್ಲೀಷ್ ಮಾಸಾಚರಣೆಯ ವಿವಿಧ ಚಟುವಟಿಕೆಗಳ ಮೂಲಕ ಕಲಿಸಬೇಕು ಎಂದು ಪ್ರಭಾರಿಮುಖ್ಯಶಿಕ್ಷಕ ಪಗಡಲಬಂಡೆಮAಜುನಾಥ ಎಂದು
ಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್‌ನಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಕಲಿಕಾ ಬಲವರ್ಧನಾ ಅಭ್ಯಾಸಪುಸ್ತಕಗಳಲ್ಲಿನ ವಿವಿಧ ಚಟುವಟಿಕೆಗಳಡಿ ಅಕ್ಷರಗಳು, ಪದಗಳು, ವಾಕ್ಯಗಳು, ಚಿತ್ರಪದ, ಚಿತ್ರಸಹಿತ ವಾಕ್ಯ ಕಥೆಗಳು ದಿನ ನಿತ್ಯ ಜೀವನದಲ್ಲಿ ಎದುರಿಸುವ ಸಮಸ್ಯೆಗಳ ಕುರಿತು ಸಂವಹನಾ ಕೌಶಲ್ಯಗಳ ಅಳವಡಿಕೆ ಕುರಿತ ಪ್ರತಿಭಾವಂತ ಮಕ್ಕಳ ಕಲಾ ಪ್ರದರ್ಶನದ ವೇಳೆ ಮಾತನಾಡಿದರು
ಆಂಗ್ಲಭಾಷಾ ಶಿಕ್ಷಕಿ ಶಿವಮಂಗಳಾ ಮಾತನಾಡಿ ಕರೊನಾ ಹಿನ್ನೆಲೆ ಕಳೆದೆರೆಡು ವರ್ಷಗಳಿಂದ ಮಕ್ಕಳಲ್ಲಿ ಕಲಿಕೆ ಸಮರ್ಪಕವಾಗಿ ಆಗಿಲ್ಲದ ಕಾರಣ ಕಲಿಕಾ ಚೇತರಿಕೆ, ಕಲಿಕಾ ಬಲವರ್ಧನಾ ಚಟುವಟಿಕೆಗಳ ಪುಸ್ತಕಗಳನ್ನು ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ನೀಡಿ ಶಿಕ್ಷಕರು ಬೋಧನಾ ವೇಳೆ ಕಲಿಕಾ ಬಲವರ್ಧನಾ ಅಭ್ಯಾಸಪುಸ್ತಕಗಳನ್ನು ಬಳಸಿಕೊಂಡು ಮಾರ್ಗದರ್ಶನ ನೀಡುತ್ತಿದ್ದೇವೆ ಎಂದರು
ಇದೇ ವೇಳೆ ವಿದ್ಯಾರ್ಥಿನಿಯರು ವಿವಿಧ ವೃತ್ತಿಗಳ ಕುರಿತ ಕೈಬರಹದ ಡ್ರಾಯಿಂಗ್‌ಶೀಟ್‌ಗಳನ್ನು ಬಳಸಿಕೊಂಡು ಮಾಹಿತಿ ನೀಡಿದರು
ಸಂದರ್ಭದಲ್ಲಿ ಮುಖ್ಯಶಿಕ್ಷಕ ಪಿಬಂಡೆ ಮಂಜುನಾಥ, ಶಿಕ್ಷಕರಾದ ಮಮತಾ, ಉಷಾ, ಶಶಿಕುಮಾರ, ರಂಗಸ್ವಾಮಿ, ವಿದ್ಯಾರ್ಥಿನಿಯರಾದ ತೇಜಸ್ವಿನಿ, ಶಿವಮ್ಮ, ಸಂಜನಾ, ಸ್ಪೂರ್ತಿ, ಕೃತಜ್ಞ, ಸುನಂದ, ಭುವನ, ಅರ್ಚನಾ ಶಾಲಾ ವಿದ್ಯಾರ್ಥಿಗಳು ಶಾಲಾ ಸಿಬ್ಬಂದಿ ಇದ್ದರು

About The Author

Namma Challakere Local News
error: Content is protected !!