ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿಷ್ಠಿತ ಚಳ್ಳಕೆರೆ ನಗರದ ವಾಸವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಜೆ ಡಬಲ್ ಇ (ಎಇಇ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ
ಫೆ.13ರAದು ನಡೆದ ಜೆ ಡಬಲ್ ಇ (ಎಇಇ) ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಪ್ರತಿಷ್ಠಿತ ವಾಸವಿ ಪದವಿ ಪೂರ್ವ ಕಾಲೇಜಿನ 16 ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಯಶಸ್ವಿಗೊಂಡಿದ್ದಾರೆ. ಇನ್ನೂ ಟಾಪ್ ಐದರಲ್ಲಿ ನಿತೀನ್ ಎ, ವರ್ಷಿತಾ, ಸುಸ್ಮಿತಾ, ಸುರೇಂದ್ರಬಾಬು, ಹಾಗೂ ಪೂಜೀತ ಪಿ. ಜೆ ಡಬಲ್ ಇ (ಎಇಇ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಸವಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶಿವಾರೆಡ್ಡಿರವರು ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಂದ ಜಯವೆಂದು ಅಭಿಪ್ರಾಯಪಟ್ಟು ವಿದ್ಯಾರ್ಥಿಗಳಿಗೂ ಹಾಗೂ ಬೋಧನಾವೃಂದಕ್ಕೆ ಅಭಿನಂದನೆ ಸಲ್ಲಿಸಿದರು.
ಹಾಗೂ 2024-25ರ ಜೆಡಬಲ್ ಇ (ಎಇಇ) ಮತ್ತು ನೀಟ್ (ಜೆಇಇ) ಪರೀಕ್ಷೆಗಳಿಗೆ ತರಗತಿಗಳು ಪ್ರಾರಂಭವಾಗಿದ್ದು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುತ್ತಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು, ಒಟ್ಟಾರೆ ಕಾಲೇಜಿನಲ್ಲಿ ಸುಮಾರು 50 ವಿದ್ಯಾರ್ಥಿಗಳು ನೊಂದಾಯಿಸಿಕೊAಡಿದ್ದರು, ಅದರಲ್ಲಿ ಸುಮಾರು 16 ವಿದ್ಯಾರ್ಥಿಗಳು ತೆರ್ಗಡೆಹೊಂದಿದ್ದಾರೆ.
ವಾಸವಿ ಪದವಿ ಕಾಲೇಜಿನ ಪ್ರಾಶುಂಪಾಲರಾದ ಶ್ರೀರಾಮುಲು, ಉಪನ್ಯಾಸಕರಾದ ಹೆಂಮೆAಬರ್‌ನಾಯ್ಡು, ಮಂಜುನಾಥ್, ವಿನಯ್ , ಗಿರೀಶ್, ಇತರರು ಹಾಗೂ ವಿದ್ಯಾರ್ಥಿಗಳು ಇದ್ದರು.

About The Author

Namma Challakere Local News
error: Content is protected !!