ಚಳಕೆರೆ ನ್ಯೂಸ್ :
ಚಳ್ಳಕೆರೆ
ನಗರದ ಕೃಷಿ ಮಾರುಕಟ್ಟೆಯಲ್ಲಿ ರೈತರು
ಬೆಳೆದ ಬೆಳೆಗೆ ಸೂಕ್ತದರ ಸಿಗುತ್ತಿಲ್ಲವೆಂದು.
ಆಕ್ರೋಶಗೊಂಡು ರೈತರು ಕೃಷಿ ಮಾರುಕಟ್ಟೆಗೆ ಬೀಗ
ಹಾಕಿ ಪ್ರತಿಭಟನೆ ನಡೆಸಿದ ರೈತರು.
ಚಳ್ಳಕೆರೆ ನಗರದಲ್ಲಿರುವ ಕೃಷಿ ಉತ್ಪನ್ನ
ಮಾರುಕಟ್ಟೆಯಲ್ಲಿ ರೈತರ ಹುಣಸೇಹಣ್ಣು ಬೆಳೆಗೆ
ನ್ಯಾಯಯುತವಾದ
ಬೆಲೆ ಸಿಗದೆ ಇದ್ದಾಗ ರೈತರು
ಸಿಟ್ಟಿಗೆದ್ದು, ಕೃಷಿ ಮಾರುಕಟ್ಟೆ ಮುಖ್ಯ ದ್ವಾರದ
ಗೇಟ್ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ
ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ರೈತ ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿ,
ರೈತರಿಗೆ ಫೋನ್ ಮಾಡಿ ಹುಣಸೆ ಹಣ್ಣಿನೊಂದಿಗೆ
ಬರುವಂತೆ, ಹಾಗೂ ಸೂಕ್ತ ಬೆಲೆ ನೀಡುತ್ತೇವೆ
ಎಂದು ಕರೆಸಿಕೊಂಡ ದಲ್ಲಾರು. ಕನಿಷ್ಠ ಬೆಲೆಗೆ
ಹುಣಸೆ ಹಣ್ಣು ಕೇಳುತ್ತಿದ್ದಾರೆ ಎಂದು ಆರೋಪಿ
ಸಿದರು.
ಹುಣಸೆ ಹಣ್ಣಿನ (ಕಡ್ಡಿಪುಡಿ) ಕ್ವಿಂಟಾಲಿಗೆ
9000 ಸಾವಿರ ಹುಣಸ ಹೂವಣಿಗೆ 5
ರಿಂದ 4 ಸಾವಿರ ಎಂದು ಬಾಯಿಗೆ ಬಂದ
ಬೆಲೆಗೆ ದಲ್ಲಾಳರು ಕೇಳುತ್ತಿದ್ದಾರೆ, ಇದೇ
ಕಡ್ಡಿಪುಡಿ ಹುಣಸೆಹಣ್ಣಿಗೆ ಪಕ್ಕದ ಸೀಮಾರಿದ್ರದ
ಹಿಂದೂಪುರದಲ್ಲಿ 23 ರಿಂದ 24 ಸಾವಿರ
ಬೆಲೆ ಯುಗಾದಿಯಾಗಿದ್ದು, ಇನ್ನು
ಹಣ್ಣು ಹುಳಿಸೆಹಣ್ಣಿನ ಬೆಲೆ 13
ಸಾವಿರದವರೆಗೆ ಬೆಲೆ ಸಿಕ್ಕಿದೆ ಎಂದು ರೈತರು
ಚಳ್ಳಕರೆ ಕೃಷಿ ಮಾರುಕಟ್ಟೆಯ ದಲ್ಲಾಲರ ವಿರುದ್ಧ ಕಿಡಿಕಾರಿದರು.