ಚಳ್ಳಕೆರೆ
ಸಾಮಾಜಿಕ ನ್ಯಾಯಕ್ಕಾಗಿ ಒಕ್ಕೂಟದ ಸಂಗಡಿತ ಸುಮಾರು 40 ರಿಂದ 50 ವರ್ಷಗಳಿಂದ ದಲಿತರು ಹಿಂದುಳಿದ ವರ್ಗದವರು ಓಬಿಸಿ ಗಳು
ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಭೂ ರಹಿತ ಸಣ್ಣ ಅತಿ ಸಣ್ಣ ರೈತರ ಭೂಮಿಯನ್ನು ಸಕ್ರಮಗೊಳಿಸುವಂತಹ ಹೂನಾರಗಳು ನಡೆಯುತ್ತಿಲ್ಲ ಇದು ವಿಪರಾಸವೇ ಸರಿ ಎಂದು ದಲಿತ ಸಂಘದ ರಾಜ್ಯ ಸಂಚಾಲಕ ಭೀಮನಕೆರೆ ಶಿವಮೂರ್ತಿ ಹೇಳಿದರು

ಇವರು ನಗರದ ತಾಲೂಕು ಕಚೇರಿ ಆವರಣದಲ್ಲಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ, ಹಾಗೂ ಕರ್ನಾಟಕ ದಲಿತ ಸಂಘ, ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ, ಜಿಲ್ಲಾ ಮತ್ತು ತಾಲೂಕು ಸಮಿತಿ ಚಿತ್ರದುರ್ಗ ಇವರ ಸಂಯುಕ್ತಾಕ್ಷರದಲ್ಲಿ, ತಾಲೂಕು ಕಚೇರಿ ಮುಂಭಾಗ ಅನಿರ್ದಿಷ್ಟ ಧರಣಿ ಕೂತು ಮಾತನಾಡಿದ ಇವರು,
ಚಳ್ಳಕೆರೆ ತಾಲ್ಲೂಕು ಗೋಸಿಕೆರೆ ಕಾವಲ್ ಸರ್ವೇ ನಂಬರ್ 10 ರಿಂದ 52ರ ವರೆಗೆ ಟಿ ಎನ ಕೋಟಿ 71 72 ಮತ್ ಸಮುದ್ರ ಈ ಎಲ್ಲಾ ತಾಲೂಕಿನ ಇನ್ನಿತರ ಗ್ರಾಮಗಳ ಸರ್ವೆ ನಂಬರುಗಳಲ್ಲಿ ಸಲ್ಲಿಸುವ ತಯಾರಾದ ಕಡಿತವನ್ನು ಅರ್ಜಿಗಳಿಗೆ ಮತ್ತು ಸರ್ವೇರಿಂದ ಜಂಟಿ ಸಮೀಕ್ಷೆ ನಡೆಸಿ ಕಡಿತ ತಯಾರಿಸಬೇಕು ,ತಯಾರಾದ ಕಡಿತವನ್ನು ಸಕ್ರಮ ಸಮಿತಿಯಲ್ಲಿ ತೀರ್ಮಾನಿಸಿ ಕೂಡಲೇ ಸಾಗುವಳಿ ಚೀಟಿ ನೀಡಬೇಕು ,ಹಾಗೂ ಚಳ್ಳಕೆರೆ ಸ್ಲಮ್ ನಗರದಲ್ಲಿ ವಾಸ ವಿರುತ್ತಿರುವ ನಿವೇಶನ ರೈತರಿಗೆ ಚಳಕೆರೆ ಸರಕಾರಿ ಸರ್ವೇ ನಂಬರ್ ,103 ,ರಲ್ಲಿ ಭೂಮಿ ಮಂಜೂರಾತಿ ನೀಡಬೇಕು, ನಮ್ಮನ್ನಾಳುವ ಸರ್ಕಾರವು ನಮಗೆ ಹಕ್ಕುಪತ್ರವನ್ನು ನೀಡುತ್ತಿಲ್ಲ ಇನ್ನಿತರೆ ಜಾತಿಗೆ ಹಕ್ಕು ಪತ್ರ ಕೊಟ್ಟು ಸರ್ಕಾರ ಮೀನಾ ಮೇಷ ಮಾಡುತ್ತಿದೆ, ಅಲ್ಲದೆ ಸರ್ವೆ ನಂಬರ್ 102 ರಲ್ಲಿ 175 ಮನೆಗಳು ಕಳಪೆ ಗುಣಮಟ್ಟದಿಂದ ಕಾಮಗಾರಿ ನಡೆಯುತ್ತಿದೆ ,ಕಾಮಗಾರಿಯೂ ಕೂಡ ಮಂದಗತಿಯಲ್ಲಿ ಸಾಗುತ್ತಿದೆ, ಇದನ್ನೆಲ್ಲವುಗಳನ್ನು ಸರ್ಕಾರ ತಿಳಿದು ಭೂಮಿ ಹಕ್ಕಿಗಾಗಿ ಅನಿಷ್ಟ ಅವಧಿ ಧರಣಿಯನ್ನು ನಿಲ್ಲಿಸುವರೆ ಕಾದುನೋಡಬೇಕಾಗಿದೆ,

ಇನ್ನು ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಎನ್ ಪ್ರಕಾಶ್ ಪಿ ಜಯಣ್ಣ ರಾಜಣ್ಣ ಚಿಕ್ಕಮ್ಮನಹಳ್ಳಿ ಸತೀಶ್ ಭುಜನಹಳ್ಳಿ ಎಲ್ ತಿಮ್ಮಕ್ಕ ಬಂಗಾರಪ್ಪ ನಾಯಕನಹಟ್ಟಿ ಮಂಜುನಾಥ್ ವರೆಗೂ ಅನೇಕ ದಲಿತ ಮುಖಂಡರು ಭಾಗಿಯಾಗಿದ್ದರು,

Namma Challakere Local News
error: Content is protected !!