ಚಳ್ಳಕೆರೆ ನ್ಯೂಸ್ : 13ರ ಮಂಗಳವಾರ ಹಮ್ಮಿಕೊಂಡಿರುವ ನಾಯಕನಹಟ್ಟಿ ಪಟ್ಟಣ ಬಂದ್‌ಗೆ ನಾಯಕನಹಟ್ಟಿ ಹೋಬಳಿಯ ಮಾದಿಗ ಸೇವಾ ಟ್ರಸ್ಟ್ ಬೆಂಬಲ ನೀಡಲಿದೆ ಎಂದು ಟ್ರಸ್ಟ್ ಉಪಾಧ್ಯಕ್ಷ ಆರ್.ಬಸಪ್ಪ ಹೇಳಿದರು.

ಪಟ್ಟಣದ ಹಟ್ಟಿಮಲ್ಲಪ್ಪ ನಾಯಕ ಆಡಳಿತ ಕಚೇರಿಯಲ್ಲಿ ಭಾನುವಾರ ನಡೆದ ಜನಾಂಗದ ಸಭೆಯಲ್ಲಿ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಯು ಬಯಲು ಸೀಮೆಯ ಬಹುದಿನಗಳ ಬೇಡಿಕೆಯಾಗಿದ್ದು, ಮೂವತ್ತು ವರ್ಷಗಳಿಂದ ಕೃಷಿಯಲ್ಲಿ ನಷ್ಟವನ್ನು ಅನುಭವಿಸುತ್ತಿರುವ ನೊಂದ ರೈತರ ಕನಸಿನ ಯೋಜನೆಯಾಗಿದೆ.

ಅದರಲ್ಲೂ ನಾಯಕನಹಟ್ಟಿ ಹೋಬಳಿಯಲ್ಲಿ ಮಾದಿಗ ಜನಾಂಗಕ್ಕೆ ಅತ್ಯಂತ ಕಡಿಮೆ ಭೂಮಿಯಿದ್ದು, ಇರುವ ತುಂಡು ಭೂಮಿಯಲ್ಲಿ ಹಲವು ವರ್ಷಗಳಿಂದ ನೀರಾವರಿ ಪದ್ಧತಿಯಲ್ಲಿ ಬೆಳೆಬೆಳೆಯಲು ಉತ್ಸುಕರಾಗಿದ್ದಾರೆ. ಈ ಯೋಜನೆಯು ಅತ್ಯಂತ ತುರ್ತಾಗಿ ಕಾಮಗಾರಿ ಆರಂಭವಾಗಿ ಕೆರೆಗಳಿಗೆ ನೀರು ಪ್ರತಿವರ್ಷ ರಾಜ್ಯದ ಮಹಾನಗರಗಳತ್ತ ಜನಾಂಗದ ಯುವಕ-ಯುವತಿಯರು ಕೆಲಸವನ್ನರಸಿ ಗುಳೆ ಹೋಗುವುದು ತಪ್ಪುತ್ತದೆ. ಈ ಹಿನ್ನೆಲೆಯಲ್ಲಿ ಭದ್ರ ಮೇಲ್ದಂಡೆ ಯೋಜನೆಯನ್ನು ರಾಷ್ಟಿçÃಯ ಯೋಜನೆಯಾಗಿ ಘೋಷಿಸಬೇಕು ಮತ್ತು ನಮ್ಮ ಭಾಗದಲ್ಲಿ ಪೈಪ್‌ಲೈನ್ ಕಾಮಗಾರಿಯನ್ನು ಆರಂಭಿಸಿಬೇಕು ಎಂದು ರಾಜ್ಯ ಮತ್ತು ಕೇಂದ್ರಸರ್ಕಾರಗಳ ಮೇಲೆ ಒತ್ತಡ ಹಾಕುವ ಸಲುವಾಗಿ ಫೆ.13ರ ಮಂಗಳವಾರದಂದು ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ನಾಯಕನಹಟ್ಟಿ ಪಟ್ಟಣ ಬಂದ್‌ಗೆ ನಮ್ಮ ಟ್ರಸ್ಟ್ ಬೆಂಬಲ ನೀಡಲಿದೆ ಎಂದು ಹೇಳಿದರು.

ಇದೇವೇಳೆ ನಾಯಕನಹಟ್ಟಿ ಹೋಬಳಿಯ ಮಾದಿಗ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಬಂಗಾರಪ್ಪ, ಪದಾಧಿಕಾರಿಗಳಾದ ಡಿ.ಓಬಳೇಶ್, ಬಿ.ತಿಪ್ಪೇಸ್ವಾಮಿ, ಶಂಕರಸ್ವಾಮಿ, ರಾಜಣ್ಣ, ಆರ್.ತಿಪ್ಪೇಸ್ವಾಮಿ, ಬಿ.ರಾಮಚಂದ್ರಪ್ಪ, ಮಧು ಇದ್ದರು.

Namma Challakere Local News
error: Content is protected !!