ಚಳ್ಳಕೆರೆ ನ್ಯೂಸ್: ಅಕ್ರಮ ಮಣ್ಣು ಸಾಗಾಟ ಎಗ್ಗಿಲ್ಲದೆ ಆಂದ್ರಗಡಿ ಭಾಗಕ್ಕೆ ಕೊಂಡೊಯ್ಯುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ
ಕೆರೆ ಮೂಲಗಳನ್ನು ಸಂರಕ್ಷಣೆಮಾಡಬೇಕಾದ ಅಧಿಕಾರಿಗಳು ಇಂತಹ ಅಕ್ರಮ ಮಣ್ಣು ಸಾಗಾಟಕ್ಕೆ ಬ್ರೇಕ್ ಹಾಕಬೇಕು ಇಲ್ಲವಾದರೆ ನಮ್ಮಮುಂದಿನ ಮಕ್ಕಳ ಭವಿಷ್ಯದಗತಿ ಏನು ಅದರಲ್ಲಿ ಆಂದ್ರಕ್ಕೆ ರವಾನೆಯಾಗುವ ಈ ಮಣ್ಣು ರಾತ್ರಿ ಹಗಲು ಎಗ್ಗಿಲ್ಲದೆ ನಡೆಯುತ್ತಿದೆ.
ಇಂತಹ ಮಣ್ಣು ಕಾನೂನು ಬಾಹಿರವಾಗಿ
ಕೆರೆಗಳಲ್ಲಿ ಕಾನೂನು ಬಾಹಿರವಾಗಿ ಮಣ್ಣು ಸಾಗಾಣಿಕೆ
ಮಾಡುತ್ತಿದ್ದರೂ, ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ
ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಚಳ್ಳಕೆರೆ
ತಾಲೂಕಿನ ಆಂದ್ರಗಡಿ ಭಾಗಕ್ಕೆ ಹೊಂದಿಕೊಂಡ ಗೌರಸಮುದ್ರ
ಮಾರಮ್ಮಪುಣ್ಯ ಕ್ಷೇತ್ರಕ್ಕೆ ಹೊಂದಿಕೊಂಡ ಕೆರೆಯಲ್ಲಿನ
ಕಪ್ಪು .ಕೆಂಪು, ಹಾಗೂ ಮರಳು ಮಿಶ್ರಿತ ಫಲವತ್ತಾದ ಮಣ್ಣನ್ನು ಪ್ರತಿ ನಿತ್ಯ ರಾತ್ರಿ
ವೇಳೆ ಇಟ್ಟಿಗೆ ಬಟ್ಟಿಗಳಿಗೆ, ಜೆಸಿಬಿ ಯಂತ್ರಗಳ ಸಹಾಯದಿಂದ ಬೃಹತ್
ಟಿಪ್ಪರ್ ವಾಹನಗಳ ಮೂಲಕ ಆಂದ್ರಪದೇಶ, ಬಳ್ಳಾರಿ ಸೇರಿದಂತೆ
ವಿವಿಧ ಕಡೆ ಎಗ್ಗಿಲ್ಲದೆ ಸಾಗಾಟ ಮಾಡುತ್ತಿದ್ದಾರೆ .
ತಾಲೂಕಿನ ಬಹುತೇಕ ಕೆರೆಗಳಲ್ಲಿ ಸರ್ಕಾರದ ನಿಯಮ ಪಾಲಿಸದೆ
ಮಣ್ಣು ಸಾಗಾಣಿಕೆ ಮಾಡುತ್ತಿದ್ದರು, ಸಂಬಂಧಿಸಿದ ಅಧಿಕಾರಿಗಳು
ಮಾತ್ರ ಯಾವ ಕ್ರಮಕ್ಕೂ ಮುಂದಾಗದೇ ಸುಮ್ಮನೇ ಕುಳಿತಿದ್ದಾರೆ.
ಅಕ್ರಮ ಮಣ್ಣು ಸಾಗಾಟದಿಂದ ಸರಕಾರದ ಬೊಕ್ಕಸಕ್ಕೆ ನಷ್ಟ
ಪ್ರಭಾವಿಗಳ ಖಜಾನೆ ಸೇರುತ್ತಿರುವ ಕಾಂಚಾಣವಾಗಿದೆ.
ಕೆರೆಗಳ ಸ್ವರೂಪವೇ ನಾಶ:
ಇಟ್ಟಿಗೆ ಬಟ್ಟಿ ಮಾಲಿಕರು
ನೂತನ ನಿವೇಶನ ಬಡಾವಣೆ, ರಸ್ತೆ ಕಾಮಗಾರಿ ಸೇರಿದಂತೆ ವಿವಿಧ
ಉದ್ದೇಶಕ್ಕೆ ಕೆರೆಗಳಲ್ಲಿ ಸುಮಾರು 20-30 ಅಡ್ಡಿಯ ಅಳದ ವರೆಗೂ
ಮಣ್ಣು ತೆಗೆಯುವ ಮೂಲಕ ಕೆರೆಯ ಸ್ವರೂಪವೇ ಬದಲಿಸಿದ್ದಾರೆ.
ಇನ್ನೊಂದು ಕಡೆ ಕೆರೆಯಲ್ಲಿ ಅಳದವರೆಗೂ ಮಣ್ಣು ತೆಗೆದಿದ್ದು,
ಗೌರಸಮುದ್ರ ಕೆರೆ ಗ್ರಾಮಕ್ಕೆ ಹಾಗೂ ಮಾರಮ್ಮ ದೇವಸ್ಥಾನಕ್ಕೆ
ಹೊಂದಿಕೊಂಡಿದ್ದು ಮಳೆಗಾಲದ ಸಮಯದಲ್ಲಿ ತಗ್ಗುಗಳಲ್ಲಿ ನೀರು
ತುಂಬುವುದರಿಂದ ಅಪಾಯ ತಪ್ಪಿದ್ದಲ್ಲ.
ಅಕ್ರಮ ಮಣ್ಣು ಸಾಗಾಟಕ್ಕೆ ರಸ್ತೆಗಳು ಹಾಳು :
ಬೃಹತ್ ಗಾತ್ರದ ವಾಹನಗಳಲ್ಲಿ ಅಕ್ರಮ ಮಣ್ಣು ಸಾಗಾಟ
ಮಾಡುತ್ತಿರುವುದರಿಂದ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಸಂಪೂರ್ಣ ಕಿತ್ತುಹೋಗಿ ಗುಂಡಿಗಳು ಬಿದ್ದಿವೆ, ಇನ್ನು ಕೆಲವು ರಸ್ತೆಗಳಲ್ಲಿ
ಸಂಚಾರಕ್ಕೂ ತೊಂದರೆಯಾಗುತ್ತಿದೆ. ವಾಹನ ಸಂಚಾರಕ್ಕೆ ತೊಂದರೆ
ಯಾಗುತ್ತಿದ್ದು, ಅಲ್ಪ-ಸ್ವಲ್ಪ ಮಳೆ ಬಂದರೆ ಮಾತ್ರ ರಸ್ತೆಯೂ ಕೆಸರು
ಗದ್ದೆಯಾಗುತ್ತದೆ, ಇದರಿಂದ ವಾಹನಗಳು ಹಾಗೂ ಸಾರ್ವಜನಿಕರು
ಸಹ ಸಂಚರಿಸಲು ಹರಸಾಹಸ ಪಡುವಂತಾಗಿದೆ.
ಗ್ರಾಮೀಣ ಮಾರ್ಗದ
ಆಟೋ ಚಾಲಕರು, ವಾಹನ ಸಂಚಾಲಕರು ಹಾಗೂ ಶಾಲಾ
ವಿದ್ಯಾರ್ಥಿಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಹ ರಸ್ತೆಯನ್ನು
ಸರಿ ಪಡಿಸಬೇಕು ಹಾಗೂ ಕೆರೆಗಳಲ್ಲಿ ಅಕ್ರಮಮಣ್ಣು ಸಾಗಾಟ
ಮಾಡುವ ಕೆರೆಗಳ ಸ್ಥಳಕ್ಕೆ ಕಂದಾಯ.ಸಣ್ಣ ನೀರಾವರಿ ಇಲಾಖೆ ಹಾಗೂ
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ
ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಕ್ರಮ ಮಣ್ಣು
ಸಾಗಾಣಿಕೆಗೆ ಕಡಿವಾಣ ಗೌರಸಮುದ್ರ ಗ್ರಾಮಸ್ಥರು ಆಗ್ರಹಿಸಿದ್ದಾರೆ