ಚಳ್ಳಕೆರೆ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೈಕಮಾಂಡ್
ಯಾರಿಗೆ ಟಿಕೆಟ್ ನೀಡಲಿ ಗೆಲುವಿಗೆ ಶ್ರಮಿಸಿ ವಿಶ್ವ ಮೆಚ್ಚಿದ ನಾಯಕ
ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ
ಮಾಡೋಣ ಎಂದು ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಎಂ.ಸಿ.ರಘುಚಂದನ್ ಹೇಳಿದರು.
ನಗರದ ಮಾಜಿ ಶಾಸಕ ಬಸವರಾಜ್ ಮಂಡಿಮಠ ಖಾಸಗಿ ಮನೆಯ ಸಭಾಂಗಣದಲ್ಲಿ ಬಿಜೆಪಿ ಪಕ್ಷದ ಮುಂಡರು ಹಾಗೂ
ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಮಾತನಾಡಿ ನಂತರ
ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಸರಕಾರದ
ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಆಧ್ಯತೆ ನೀಡಲಾಗಿತ್ತು, ಆದರೆ
ಕಾಂಗ್ರೆಸ್ ಶಾಸಕರು ಜೆಜೆಎಂ ಮನೆ ಮನೆಗೆ ಕುಡಿಯುವ ನೀರಿನ
ಕಾಮಗಾರಿ ಉದ್ಘಾಟನೆ ಬಿಟ್ಟರೆ ಯಾವುದೇ ಸಾಧನೆಯಿಲ್ಲ ಎಂದು
ಹೇಳಿದರು.
ಈಗಾಗಲೆ ಮೊಳಕಾಲ್ಕೂ ತಾಲೂಕು ಪ್ರವಾಸ ಮುಗಿಸಿದ್ದು ಉತ್ತಮ
ಪ್ರತಿಕ್ರಿಯೆ ಸಿಕ್ಕಿದೆ ನನ್ನ ತಂದೆ ಚಳ್ಳಕೆರೆ ತಾಲೂಕಿನವರಾದರೂ
ಹೊಳಲ್ಕೆರೆ ಕ್ಷೇತ್ರದಲ್ಲಿ ಐದು ಬಾರಿ ಕ್ಷೇತ್ರದ ಶಾಸಕರಾಗಿದ್ದಾರೆ ಮತ್ತೆ
ಅಧಿಕಾರದ ಆಸೆಗೆ ನಾನು ಬಂದಿಲ್ಲ ಬಿಜೆಪಿ ಪಕ್ಷದ ಸಂಘಟನೆ ಮಾಡಲು
ಪ್ರವಾಸ ಕೈಗೊಂಡಿದ್ದೇನೆ ಜಿಲ್ಲೆಯಲ್ಲಿ ಐದು ಕಾಂಗ್ರೆಸ್ ಒಂದು ಬಿಜೆಪಿ
ಶಾಸಕರಿದ್ದು ಕ್ಷೇತ್ರದ ಕಾರ್ಯಕರ್ತರಿಗೆ ಸಮಸ್ಯೆಯಾದರೇ ಕೇಳೋರು
ಯಾರು ಇಲ್ಲದಂತಾಗುದೆ ಆದ್ದರಿಂದ ಜಾತಿ ಬೇದ ಮರೆತು ಬಿಜೆಪಿ ಪಕ್ಷ
ಸಂಘಟಿಸುವ ಮೂಲಕ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮತ್ತೆ
ಬಿಜೆಪಿ ಬಾವುಟ ಹಾರಿಸೋಣ ಮತ್ತೆ ಯಾರೂ ಕ್ಷೇತ್ರಕ್ಕೆ ಸ್ಪರ್ಧಿಸಲು
ಮುಂದಾಗಬಾರದು.
ಈ ಸಂದರ್ಭದಲ್ಲಿ ಮಾಜಿಶಾಸಕ ಬಸವರಾಜ್
ಮಂಡಿಮಠ. ಜಯಪಾಲಯ್ಯ ಮಾತನಾಡಿದರು. ನಗರಸಭೆ ಸದಸ್ಯರಾದ
ಪಾಲಮ್ಮಸಾಕಮ್ಮ
ಭದ್ರಣ್ಣ, ವೆಂಕಟಪ್ಪ ಸಿ.ಎಸ್.ಪ್ರಸಾದ್.
ಶಿವಪುತ್ರಪ್ಪ ಮಾತೃಶ್ರೀಮಂಜುನಾಥ್, ಹೊಸಮನೆ ಮಂಜು,
ಇತರರಿದ್ದರು