ಚಳ್ಳಕೆರೆ :
ಚಳ್ಳಕೆರೆ :
ರೈತನಿಗೂ ಮತ್ತು ನೇಗಿಲಿಗೂ
ಅವಿನಾಭಾವ ಸಂಬಂಧ ಇರುವುದರಿಂದ ವಸಂತ ಮಾಸದಲ್ಲಿ ಮುಂಗಾರು ಹಂಗಾಮು ಪ್ರಾರಂಬವಾದ ನಂತರ ರೈತನು ತನ್ನ ಜಮೀನನ್ನು ಹಸನು ಮಾಡಲು ಆರಂಭಿಸುತ್ತಾನೆ.
ಇದನ್ನೇ ಹಳ್ಳಿಗಾಡಿನಲ್ಲಿ ನೇಗಿಲು ಮನೆ ಮಾಡುವ ಕಾರ್ಯಕ್ರಮ ಅಥವಾ ಹೊನ್ನಾರು ಹೂಡುವ ಕಾರ್ಯಕ್ರಮ ಎಂದು ಮಧ್ಯಕರ್ನಾಟಕದಲ್ಲಿ ಪುರಾತನಕಾಲದಿಂದಲ್ಲೂ ನಡೆದ ಬಂದ ಪದ್ದತಿ.
ಇತಂಹ ಹೊನ್ನಾರ ಹುಡುವ ಕಾರ್ಯಕ್ರಮವನ್ನು ಚಳ್ಳಕೆರೆ ತಾಲ್ಲೂಕು ರೈತ ಸಂಘ ತಾಲೂಕಾಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಈ ನೇಗಿಲು ಮನೆ ಮಾಡುವ ಅರ್ಥಾತ್ ಹೊನ್ನಾರು ಹೂಡುವ ಕಾರ್ಯಕ್ರಮವನ್ನು
ಏಪ್ರಿಲ್ 27 ರಂದು ನನ್ನಿವಾಳ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದ ಹೇಳಿದರು.
ಚಳ್ಳಕೆರೆ ನಗರದ ತಾಲೂಕ ಕಚೇರಿಯಲ್ಲಿ ವಿವಿಧ ರೈತ ಸಂಘಟನೆಗಳು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ
ಕಾರ್ಯಕ್ರಮದಲ್ಲಿ ಆಯ್ದ 9 ಜೊತೆ ಹೋರಿ ಜೋಡೆತ್ತುಗಳು ಮತ್ತು ನೇಗಲಿ ಗಳೊಂದಿಗೆ ಭೂಮಿ ಮನೆ ಮಾಡುವಂತ ಕಾರ್ಯಕ್ರಮ ಪ್ರಾರಂಭವಾಗುತ್ತದೆ .
ತದನಂತರ ಆಯ್ದ ರೈತರೊಂದಿಗೆ ಭೂಮಿಯ ಬಳಕೆ ಹಂಗಾಮಿನಲ್ಲಿ ಬಿತ್ತನೆ ಮತ್ತು ನೀರಿನ ಸದ್ಬಳಕೆ ವಿಚಾರದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ಇರುತ್ತದೆ ಸಮಾರಂಭವನ್ನು ಚಳ್ಳಕೆರೆ ಶಾಸಕರು ಟಿ.ರಘುಮೂರ್ತಿ ಉದ್ಘಾಟಿಸಲಿದ್ದು
ಚಳ್ಳಕೆರೆ ತಾಲೂಕಿನ ಪ್ರಗತಿಪರ ರೈತರು ರೈತ ಮುಖಂಡರುಗಳು ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಬೇಕೆಂದು ಕೋರಿದರು
ರೈತ ಸಂಘದ ಮುಖಂಡ ಸೋಮಗುದ್ದು ರಂಗಸ್ವಾಮಿ, ಕೆಪಿ ಭೂತಯ್ಯ , ಮತ್ತು ರೆಡ್ಡಿಹಳ್ಳಿ ವೀರಣ್ಣ , ಸಹಾಯಕ ಕೃಷಿ ನಿರ್ದೇಶಕರಾದ ಅಂತ ಅಶೋಕ್, ತೋಟಗಾರಿಕೆ ಸಹಾಯಕ ನಿರ್ದೇಶಕರಾದ ವಿರುಪಾಕ್ಷಪ್ಪ ,ರೈತರುಗಳ ಆದಂತ ಹಂಪಣ್ಣ, ತಿಪ್ಪೇಸ್ವಾಮಿ ,ಹನುಮಂತಪ್ಪ, ಚಂದ್ರಣ್ಣ, ರಾಜಣ್ಣ ,ತಿಪ್ಪಣ್ಣ,ರೈತ ಮುಖಂಡರು ಹಾಗೂ ರೈತರು ಇದ್ದರು.