ಚಳ್ಳಕೆರೆ::
ತಾಲೂಕಿನ ಹಿರೆಹಳ್ಳಿ ಗ್ರಾಮದ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ೭ ರ ಸಮಯದಲ್ಲಿ ನಡೆದಿದೆ.
ಮಹಿಳೆ ರೇಣುಕಮ್ಮ(25) ಮೃತ ದುರ್ದೈವಿ.
ಇಂದು ಬೆಳಿಗ್ಗೆ ಮನೆ ಮುಂದೆ ಇದ್ದ ತಂತಿ ಮೇಲೆ ಬಟ್ಟೆ ಒಣಗಿ ಹಾಕುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ರಕ್ಷಿಸಲು ಹೋದ ಮಹಿಳೆಯ ಗಂಡ ಮಲ್ಲೇಶ್ ಗೆ ವಿದ್ಯುತ್ ಶಾಕ್ ಹೊಡೆದು ಗಾಯಗೊಂಡಿದ್ದು, ಚಳ್ಳಕೆರೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮನೆಯ ಮೇಲ್ಚಾವಣಿಗೆ ವಿದ್ಯುತ್ ಪೈಪ್ ಅಳವಡಿಸಲಾಗಿದ್ದು, ತಗಡು ಶೀಟ್ ಗೆ ತಂತಿಯನ್ನು ಕಟ್ಟಿದ್ದರಿಂದ, ರಾತ್ರಿ ಮಳೆ ಬಂದ ಹಿನ್ನೆಲೆಯಲ್ಲಿ, ಗ್ರೌಂಡ್ ಆಗಿ ವಿದ್ಯುತ್ ಸ್ಪರ್ಶಿಸಿರಬಹುದು ಎಂದು ಶಂಕಿಸಲಾಗಿದೆ.
ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.