ಚಳ್ಳಕೆರೆ :
ನಗರದ ಛೇಂಬರ್ ಆಪ್‌ಕಾಮರ್ಸ್ನಲ್ಲಿ ಶ್ರೀರಾಮ್ ಪೌಂಡೆಷನ್‌ವತಿಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಪ್ರೋತ್ಸಹಧನ ವಿತರಣಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಕ್ಕಳಿಗೆ ಪ್ರೋತ್ಸಹಧನ ವಿತರಿಸಿದರು.
ನಂತರ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಮಕ್ಕಳಿಗೆ ಪ್ರತಿಭಾ ಪುರಸ್ಕಾರದಿಂದ ಅವರ ಮುಂದಿನ ವ್ಯಾಸಂಗಕ್ಕೆ ಸ್ಪೂರ್ತಿ ನೀಡಿದಂತಾಗುತ್ತದೆ, ಅದರಂತೆ ಚಾಲಕ ಮಕ್ಕಳಿಗೆ ಪ್ರತಿಭೆಯನ್ನು ಮತ್ತು ಅವರಿಗೆ ಸಿಗಬೇಕಾದ ಗೌರವವನ್ನು ಇಂತಹ ವೇದಿಕೆಗಳಿಂದ ಮಾತ್ರ ಸಾಧ್ಯವೆಂದು ಹೇಳಿದರು.
ಇನ್ನೂ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ಶ್ರೀರಾಮ್ ಪೌಂಡೆಷನ್‌ನಿಂದ ಪ್ರತಿವರ್ಷ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು, ಇವು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಹಾಗೂ ಚಾಲಕರ ಮಕ್ಕಳಿಗೆ ಸ್ಪೂತಿದಾಯಕವಾಗಿ ಮುಂದಿನ ವಿದ್ಯಾಭ್ಯಾಸಕ್ಕೆ ದಾರಿ ದೀಪವಾಗಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಷ್ಮಾ ಕಲಕಪ್ಪ ಗೋಣಿ, ಮಾತನಾಡಿ, ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಕ್ಕಳು ಮೊಬೈಲ್ ಪೋನ್‌ಗಳ ವ್ಯಸನಿಗಳಾಗಿದ್ದಾರೆ ದಿನದ ಅರ್ಧದಷ್ಟು ಕಾಲ ಮೊಬೈಲ್‌ಗಳಲ್ಲಿ ಕಾಲ ಕಳೆಯುತ್ತಾರೆ, ಆದ್ದರಿಂದ ಮೊಬೈಲ್ ಗೀಳುಬಿಟ್ಟು ಉತ್ತಮವಾದ ವ್ಯಾಸಂಗ ಮುಂದುವರಿಸಿದಲ್ಲಿ ಮಾತ್ರ ಇಂತಹ ಸಭೆಗಳಲ್ಲಿ ಪುರಸ್ಕಾರ ಸ್ವೀಕರಿಸಲಾಗುವುದು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ ಶ್ರೀರಾಮ ಪೌಂಡೆಷನ್ ಶ್ರೀಧರ್ ಮಠಮ್ ಮಾತನಾಡಿ, ಪ್ರತಿ ವರ್ಷ ನಮ್ಮ ಶ್ರೀರಾಮ್‌ಪೌಂಡೆಷನ್‌ನಿಂದ ಚಾಲಕರ ಮಕ್ಕಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಸ್ಪೂರ್ತಿಯಾಗಲು ಇಂತಹ ಪುರಸ್ಕಾರಗಳು ನಡೆಯುತ್ತಾವೆ ಅದರಂತೆ ಈ ವರ್ಷವೂ ಕೂಡ ಚಾಲಕ ಮಕ್ಕಳಿಗೆ ಪ್ರಥಮ ಶ್ರೇಣಿಯಲ್ಲಿ ಪಾಸಾದವರಿಗೆ ಸನ್ಮಾನ ಮಾಡಲಾಗುತ್ತಿದೆ ಎಂದರು.
ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ವಕೀಲರ ಸಂಘದ ಅಧ್ಯಕ್ಷ ಜಿ.ಎಂ.ಆನಂದಪ್ಪ, ಶ್ರೀರಾಮ್ ಟ್ರನ್ಸ್ ಪರ‍್ಟ್ ವಿಜಯ್ ಕುಮಾರ್, ರಾಘವೇಂದ್ರ, ಹುಸೇನಪ್ಪ, ಶೀವಕುಮಾರ್, ಚಳ್ಳಕೆರೆ ಬ್ರಾಂಚ್ ಮ್ಯಾನೆಜರ್ ಎ.ಶಿವಮೂರ್ತಿ, ಕಲೇಕ್ಷನ್ ಮ್ಯಾನೇಜರ್ ಆರ್.ಬಿ.ರಮೇಶ್, ಶ್ರೀರಾಮ್ ಪೈನಾನ್ಸ್ ರಘು, ಇತರರು ಇದ್ದರು.