ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಸಮೀಪದ ಚಿತ್ರದುರ್ಗ ಹಾಗೂ ಚಳ್ಳಕೆರೆ ರಸ್ತೆಯಲ್ಲಿ ರಸ್ತೆಯ ಪಕ್ಕ ಇದ್ದ ಹುಣಸೆ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಚಳ್ಳಕೆರೆಯ ವೆಂಕಟೇಶ( 55 )ವರ್ಷ. ಚಿತ್ರಯ್ಯನಟ್ಟಿ ವೆಂಕಟೇಶ್ (55 )ವರ್ಷ ಸ್ಥಳದಲ್ಲೇ ಮೃತಪಟ್ಟಿದ್ದು.
ಕಿಶೋರ್ ಎನ್ನುವ ವ್ಯಕ್ತಿ ಗೆ ಗಂಭೀರ ಗಾಯಗೊಂಡಿದ್ದ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಮಂಗಳವಾರ ರಾತ್ರಿ ನಡೆದಿರುವ ಘಟನೆ ಇದಾಗಿದ್ದು ಘಟನಾ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಚಳ್ಳಕೆರೆ ಡಿವೈಎಸ್ಪಿ ಟಿವಿ ರಾಜಣ್ಣ, ಪಿಐ ಆರ್.ಎಪ್ ದೇಸಾಯಿ ಹಾಗೂ 112.ಹೊಯ್ಸಳ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಯಲ್ಲಿ ಮೃತಪಟ್ಟವರು ಚಳ್ಳಕೆರೆ ಮೂಲದವರಾಗಿದ್ದು ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.