ನಾಯಕನಹಟ್ಟಿ:: ಶ್ರೀ ದೊಡ್ಲ ಮಾರಮ್ಮ ದೇವಿ ಈ ಭಾಗದ ಜನರಿಗೆ ಉತ್ತಮ ಮಳೆ ಬೆಳೆ ನೀಡಿ ಆಶೀರ್ವದಿಸಲಿ ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಹೇಳಿದ್ದಾರೆ.
ಬುಧವಾರ ಪಟ್ಟಣದಲ್ಲಿ ಎನ್ ದೇವರಹಳ್ಳಿ ಗ್ರಾಮದ ಶ್ರೀ ದೊಡ್ಲ ಮಾರಮ್ಮ ದೇವಿಯ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿ ಮಾತನಾಡಿ ದೊಡ್ಲ ಮಾರಮ್ಮ ದೇವಿ ಪ್ರತಿ ಐದು ವರ್ಷಕ್ಕೊಮ್ಮೆ ಗ್ರಾಮಕ್ಕೆ ತವರು ಮನೆಗೆ ಆಗಮಿಸಿ ಎರಡು ದಿನಗಳ ಕಾಲ ಇದ್ದು ಮುರಳಿ ಎನ್ ದೇವರಹಳ್ಳಿ ಗ್ರಾಮಕ್ಕೆ ಆಗಮಿಸುವುದು ಇಂದಿನಿಂದ ನೆಡೆದು ಬಂದಂತ ಪದ್ಧತಿ ಆದರಿಂದ ಶ್ರೀದೇವಿ ಈ ಭಾಗದ ಜನರಿಗೆ ಉತ್ತಮ ಮಳೆ ಬೆಳೆ ಸಮೃದ್ಧಿಯಾಗಿ ನೀಡಲಿ ಮತ್ತು ಈ ಭಾಗದ ಜನರಿಗೆ ಯಾವುದೇ ರೋಗರು ಜನಗಳು ಬಾರದಂತೆ ಕಾಪಾಡಲಿ ಎಂದರು.
ಇದೇ ಸಂದರ್ಭದಲ್ಲಿ ಬಂಡೆ ಕಪಿಲೆ ಓಬಣ್ಣ, ಪ್ರಭುಸ್ವಾಮಿ, ತಿಪ್ಪೇರುದ್ರಪ್ಪ, ಕುದಾಪುರ ಕೆ ಜಿ ಪ್ರಕಾಶ್, ಮಲ್ಲೂರಹಳ್ಳಿ ಜೆಸಿಬಿ ಮಲ್ಲಿಕಾರ್ಜುನ, ಬೋಸೆದೇವರಹಟ್ಟಿ ಧನಂಜಯ, ವಕೀಲರಾದ ಅಶ್ವಥ್ ನಾಯಕ್, ಉಮಾಪತಿ, ಹಿರೇಹಳ್ಳಿ ಮಲ್ಲೇಶ್,
ಗುಂತಕೋಲಮ್ಮಹಳ್ಳಿ ಮಲ್ಲೇಶ್, ನಾಯಕನಹಟ್ಟಿ ಓಬಳೇಶ್, ಜಿಲಾನಿ, ಇದ್ದರು,