ಚಳ್ಳಕೆರೆ: ಸ್ವಾತಂತ್ರö್ಯ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕೆ ನೀಡಿದ ಸ್ಪೂರ್ತಿ ಈ 75ನೇ ಗಣರಾಜ್ಯೋತ್ಸವ ದೇಶದಲ್ಲಿ ಹರಿದು ಹಂಚಿಹೊಗಿದ್ದ ಪ್ರಾಂತ್ಯಗಳನ್ನು ಭಾಷೆಗೆ ಅನುಗುಣವಾಗಿ ರಾಜ್ಯಗಳನ್ನು ವಿಂಗಡಿಸಿದ ಮಹನೀಯರ ನೆನಯುವ ದಿನವಾಗಿದೆ ಎಂದು ಎಸ್‌ಆರ್‌ಎಸ್ ಸಂಸ್ಥೆಯ ಉಪಾಧ್ಯಕ್ಷರಾದ ಬಿಎಲ್ ಅಮೋಘ್ ಹೇಳಿದರು.
ಅವರು ನಗರದ ಎಸ್‌ಆರ್‌ಎಸ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ದಿನಾಚÀರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವರಾಜ್ಯದ ಪರಿಕಲ್ಪನೆಯನ್ನು ಜನಸಮಾನ್ಯರಲ್ಲಿ ಮೂಡಿಸಿ ಎಲ್ಲಾ ಯುವಜನರಲ್ಲಿ ಸ್ಪೂರ್ತಿ ತುಂಬಿದ ಮಹಾನ್ ಯುಗಪುರುಷರು ಮಹಾತ್ಮಗಾಂಧಿ, ಜವಹಾರ್‌ಲಾಲ್ ನೆಹರು, ಡಾ.ಬಿಆರ್.ಅಂಬೇಡ್ಕರ್ ಈಗೇ ಅನೇಕ ಮಂದಿ ತಮ್ಮ ಪ್ರಾಣವನ್ನು ಪಣಕಿಟ್ಟು ನಮಗೆ ಸ್ವತಂತ್ರö್ಯವನ್ನು ತಂದು ಜನ ಸಾಮಾನ್ಯರ ಏಳಿಗಗೆ ಕಾನೂನುಗಳ ತಂದು ಕೊಟ್ಟ ಸುದಿನ ಈ ಗಣರಾಜ್ಯೋತ್ಸವವಾಗಿದೆ ಎಂದರು.
ಎಸ್‌ಆರ್‌ಎಸ್ ಆಡಳಿತಾಧಿಕಾರಿಯದ ಕೃಷ್ಣಪ್ರಸಾದ್ ಮಾತನಾಡಿ, ಇಂದಿಗೆ ಸರಿಯಾಗಿ 75 ದಶಕಗಳು ಕಳೆದವು ಆದರೂ ತಮ್ಮ ತ್ಮಮ ಪ್ರಾಂತ್ಯಗಳಲ್ಲಿ ರಾಜ್ಯವಾರು ವಿಂಗಡಣೆ ಮಾಡಲು ಜನ ಸಾಮಾನ್ಯರ ಕೂಗಿಗೆ ಧ್ವನಿಯಾಗಿ ಅಂದು ಕಟ್ಟಿ ಕೊಂಡ ಗಣಗಳೆ ಇಂದು ಆಚರಣೆ ಮಾಡುತ್ತಿದ್ದೆವೆ. ಅಹಿಂಸಾ ಮಾರ್ಗದ ಹಾದಿಯಲ್ಲಿ ಈಡೀ ದೇಶದ ಜನತೆಯನ್ನೂ ಓಗ್ಗೂಡಿಸಿ ತಮ್ಮ ಜನತೆಯ ನೆಮ್ಮದಿಗಾಗಿ ರಾತ್ರಿ ಎನ್ನದೆ ಇರಳು ಎನ್ನದೆ ಅವಿರತಾವಾಗಿ ಹೋರಾಟಮಾಡಿ ಉದಾತ್ತ ಚಿಂತನೆಗಳೊAದಿಗೆ ವಿಶ್ವ ಬ್ರಾತೃತ್ವ ಹಾಗೂ ಶಾಂತಿ ಮತ್ತು ಸಹ ಬಾಳ್ವೆಯನ್ನು ಸಂಕೇತಿಸುವ ದಿನ ಈ ಸುಧಿನವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ನವೀನ್ ಸುಬ್ರಹ್ಮಣ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇನ್ನೂ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರವನ್ನು ರಕ್ಷಿಸುವ ಸೈನಿಕರ ಪರಿಹಾರ ನಿಧಿಗೆ 13501 /- ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದರು.
ಈ ಸಮಯದಲ್ಲಿ ಎಸ್ ಆರ್ ಎಸ್ ಸಂಸ್ಥೆಯ ಉಪಾಧ್ಯಕ್ಷರಾದ ಬಿಎಲ್ ಅಮೋಘ್ ಮತ್ತು ಆಡಳಿತಾಧಿಕಾರಿಯದ ಕೃಷ್ಣಪ್ರಸಾದ್ ಪ್ರಾಂಶುಪಾಲರಾದ ವಿಜಯ ಬಿಎಸ್ ಮತ್ತು ಸತ್ಯನಾರಾಯಣ ಹಾಗೂ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.