ಚಳ್ಳಕೆರೆ : 75ನೇ ಗಣರಾಜ್ಯೋತ್ಸವದ ಪ್ರಯುಕ್ತ ಕಿರಣ್ ರಾಜ್ ಸ್ನೇಹ ಬಳಗದ ವತಿಯಿಂದ ಚಳ್ಳಕೆರೆಯ ಶ್ರೀ ಬೆಳಕು ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಶಾಲೆಯಲ್ಲಿರುವ ಎಲ್ಲಾ ಮಕ್ಕಳಿಗೂ 60ಕ್ಕೂ ಹೆಚ್ಚು ಎಕ್ಸಾಮ್ ಪ್ಯಾಡ್ ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಗಣರಾಜ್ಯೋತ್ಸವವನ್ನು ಅರ್ಥಗರ್ಭಿತವಾಗಿ ಆಚರಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಸ್ನೇಹ ಬಳಗದ ಕಿರಣ್ ರಾಜ್ ಮಾತನಾಡಿ, ನಮ್ಮ ಕಾಯದಲ್ಲಿ ನಾವು ನಮ್ಮ ಶ್ರೇಯಸ್ಸನ್ನು ಕಾಣಬೇಕು ಸಾವಿರಾರು ಹೋರಾಟ ತ್ಯಾಗ ಬಲಿದಾನಗಳ ಮೂಲಕ ನಮಗೆ ಸ್ವಾತಂತ್ಯ ಸಿಕ್ಕಿತು ಅದಾದ ನಂತರ ರಾಜ್ಯಗಳನ್ನು ಪ್ರಾಂತ್ಯಗಳನ್ನು ವಿಭಾಗಿಸುವ ನಿಟ್ಟಿನಲ್ಲಿ ಇಲ್ಲಿಗೆ ಸುಮಾರು 75 ವರ್ಷಗಳು ಕಳೆದಿವೆ ಎಂದರು.
ಇದೇ ಸಂಧರ್ಭದಲ್ಲಿ ಕಿರಣ್‌ರಾಜ್ ಸ್ನೇಹ ಬಳಗದ ವತಿಯಿಂದ ಚಳ್ಳಕೆರೆಯ ಅಗ್ನಿಶಾಮಕದಳದ ಹಿರಿಯ ಅಧಿಕಾರಿಗಳಾದ ಜಯಣ್ಣ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಶುಭಾಷಯ ತಿಳಿಸುವ ಮೂಲಕ ಸನ್ಮಾನ ಮಾಡಿ ಗಣರಾಜ್ಯೋತ್ಸವವನ್ನು ಆಚರಿಸಿದರು.

ಇದೇ ಸಂಧರ್ಭದಲ್ಲಿ ಸ್ನೇಹ ಬಳಗದ ಕಿರಣ್ ರಾಜ್, ಅನಿಲ್, ಪಾಲಯ್ಯ, ಬಸವರಾಜ್, ಸ್ವಾಮಿ, ತ್ಯಾಗರಾಜ್, ನಾಗೇಂದ್ರ ಮತ್ತು ಸಂಗಡಿಗರು ಇದ್ದರು.

About The Author

Namma Challakere Local News
error: Content is protected !!