ಚಳ್ಳಕೆರೆ: ಕೃಷಿ ಸಖಿ ಹಾಗೂ ಪಶು ಸಖಿ ಹುದ್ದೆಗಳಿಗೆ ಆಯ್ಕೆ ಮಾಡಿರುವುದನ್ನು ಖಂಡಿಸಿ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಇಓ ಶಶಿಧರ್ ಗೆ ಮನವಿ ನೀಡಿದರು.
ತಾಲೂಕಿನ ಓಬಳಾಪುರ ಗ್ರಾಮ ಪಂಚಾಯತಿಯಲ್ಲಿ 40ಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿದ್ದು ಈ ಸಂಘಗಳಲ್ಲಿ ಇರುವ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ, ಓಬಳಾಪುರ ಗ್ರಾಮ ಪಂಚಾಯತಿಯಲ್ಲಿ 40 ಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿದ್ದು ಈ ಸಂಘಗಳಲ್ಲಿ ಇರುವ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಎಂಬಿಕೆ ಶಿವಮ್ಮ ಮತ್ತು ಎಲ್‌ಸಿಆರ್ ಪಿ ರೂಪ ರವರು ಇತ್ತೀಚೆಗೆ ಖಾಲಿ ಇದ್ದ ಕೃಷಿ ಸಖಿ ಹುದ್ದೆಗೆ ಸವಿತಾ ಎಂಬುವರನ್ನು ಆಯ್ಕೆ ಮಾಡಿದ್ದು ಅನಾರೋಗ್ಯದ ಕಾರಣದಿಂದ ಎನ್ ಮಹದೇವಮ್ಮ ಎಂಬುವವರಿAದ ತೆರವಾಗಿದ್ದ ಪಶು ಸಖಿ ಹುದ್ದೆಗೆ ಬೇರೆಯವರನ್ನು ನೇಮಿಸಲಾಗಿದೆ ಇದನ್ನು ಸಂಘದ ಸದಸ್ಯರು ಪ್ರಶ್ನಿಸಿದಾಗ ನನಗೆ ಅಧಿಕಾರವಿದೆ ನಾವೇ ಆಯ್ಕೆ ಮಾಡುತ್ತೇವೆ ಎಂದು ದೌರ್ಜನ್ಯದಿಂದ ಮಾತನಾಡುತ್ತಿದ್ದಾರೆ.
ಈ ವೇಳೆ ಮಾತನಾಡಿದ ಶ್ರೀ ದಾರಾ ಬೇಂದ್ರೆ ಸಂಜೀವಿನಿ ಒಕ್ಕೂಟ ಸಂಘದ ಮಹಿಳಾ ಸದಸ್ಯರು ಹುದ್ದೆಗಳ ಆಯ್ಕೆ ವಿಷಯವಲ್ಲದೆ ಸಂಘಗಳಿಗೆ ಸಂಬAಧಪಟ್ಟ ಇನ್ನಿತರ ಯಾವುದೇ ವಿಷಯಗಳನ್ನು ತಿಳಿಸುವುದಿಲ್ಲ ಹಾಗೂ ಸಂಘಗಳಿಗೆ ಭೇಟಿಯನ್ನು ಸಹ ನೀಡುವುದಿಲ್ಲ ಆದ್ದರಿಂದ ಈ ಆಯ್ಕೆಯನ್ನು ರದ್ದುಪಡಿಸಬೇಕು ಮತ್ತು ಎಲ್ಲ ಸ್ವಸಹಾಯ ಸಂಘದ ಸದಸ್ಯರು ಸೇರಿ ಬೇರೆಯವರನ್ನು ಎಂಬಿಕೆ ಮತ್ತು ಎಲ್ ಸಿ ಆರ್ ಪಿ ರವರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಕೋರಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಶಿಧರ್ ರವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಶಿಧರ್ ಓಬಳಾಪುರ ಗ್ರಾಮೀಣ ಸಂಘಗಳಲ್ಲಿ ಆಗಿರುವ ಆಯ್ಕೆಗಳನ್ನು ರದ್ದುಪಡಿಸಲು ಪಿಡಿಒ ಗೆ ತಿಳಿಸಲಾಗುವುದು ಹಾಗೂ ಸಮಸ್ಯೆಯನ್ನು ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ಮಹಿಳಾ ಸಂಘದ ಸದಸ್ಯರುಗಳಾದ ರತ್ನಮ್ಮ ಎಲ್ಲಕ್ಕ ಮಂಜುಳಾ ತಿಪ್ಪಕ್ಕ ಯಶೋದಮ್ಮ ಶ್ರೀಮತಿ ತಿಮ್ಮಕ್ಕ ಭಾಗ್ಯಮ್ಮ ಲಕ್ಷ್ಮಮ್ಮ ಗೀತಮ್ಮ ಶಾಂತಮ್ಮ ಅನಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Namma Challakere Local News
error: Content is protected !!