ಚಳ್ಳಕೆರೆ : ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಆರೋಗ್ಯದ ಹಿತದೃಷ್ಟಿಯಿಂದ ಸಾಕಷ್ಟು ಅನುದಾನವನ್ನ ಆರೋಗ್ಯ ಇಲಾಖೆಗೆ ನೀಡಿದರು ಸಹ ಇಲ್ಲಿಯ ಜನರಿಗೆ ಆರೋಗ್ಯದ ಸೌಲಭ್ಯಗಳು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹೌದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಕಥೆ ಇದಾಗಿದೆ.
ದಿನಬೆಳಗಾದರೆ ಈ ಪುಣ್ಯಕ್ಷೇತ್ರಕ್ಕೆ ಸಾವಿರಾರು ಜನರು ಬಂದು ಹೋಗುವ ಕ್ಷೇತ್ರ ಸರ್ಕಾರ ನೀಡುವ ಮೂಲಭೂತ ಸೌಕರ್ಯಗಳು ಸಿಗದೇ ಗ್ರಾಮೀಣ ಪ್ರದೇಶದ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಹೆಸರಿಗೆ ಮಾತ್ರ 30 ಹಾಸಿಗೆಯ ಸಾಮರ್ಥ್ಯವುಳ್ಳ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವು ಸುಸಜ್ಜಿತ ಕಟ್ಟಡ ಹೊಂದಿದ್ದರೂ ತಜ್ಞ ವೈದ್ಯರು ಅಂಬುಲೆನ್ಸ್ ಮತ್ತು ವೈದ್ಯಕೀಯ ಸೌಲಭ್ಯಗಳಿಂದ ಸೊರಗುತಿದೆ.
ಗ್ರಾಮೀಣ ಪ್ರದೇಶದ ಜನರ ಆರೋಗ್ಯವನ್ನು ಕಾಪಾಡುವ ಹಿತಾ ದೃಷ್ಟಿಯಿಂದ ಹೋಬಳಿಯ ಕೇಂದ್ರಬಿAದು ಆಗಿರುವ ಸಮುದಾಯ ಆರೋಗ್ಯ ಕೇಂದ್ರ 48 ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ ಇಡೀ ಹೋಬಳಿದ್ಯಂತ 60 ಸಾವಿರಕ್ಕೂ ಹೆಚ್ಚಿನ ಅಧಿಕ ಜನಸಂಖ್ಯೆ ಇದ್ದು ನಿರಂತರ ಬರಗಾಲದಿಂದ ತತ್ತರಿಸಿದೆ.
ಈ ಭಾಗದ ಜನರ ಆರ್ಥಿಕ ಪರಿಸ್ಥಿತಿ ದೊರಸ್ತಿಯಲ್ಲಿದೆ ಇಂತಹ ಸನ್ನಿವೇಶದಲ್ಲಿ ನಿತ್ಯ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಸಂಜೀವಿನಿಯAತೆ ಇರುವ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವೇ ಆಸರೆಯಾಗಿದೆ.
ಇತ್ತೀಚೆಗಷ್ಟೇ ನೂತನವಾಗಿ ₹ 9.ಕೋಟಿ ವೆಚ್ಚದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಆಸ್ಪತ್ರೆ ಆವರಣಕ್ಕೆ ಕಾಲಿಡುತ್ತಿದ್ದಂತೆ ಸಮಸ್ಯೆಗಳ ಸರಮಾಲೆಯಲ್ಲಿ ಆರಂಭವಾಗುತ್ತದೆ. ಪ್ರತಿನಿತ್ಯ ಆರೋಗ್ಯ ಕೇಂದ್ರಕ್ಕೆ 150 ರಿಂದ 300 ಹೊರರೋಗಿಗಳು ಭೇಟಿ ನೀಡುತ್ತಾರೆ ಒಳ ರೋಗಿಗಳು ಸರಾಸರಿ ಇದ್ದಾರೆ ಇಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಮತ್ತು ಆಂಬುಲೆನ್ಸ್ ಕೊರತೆ ಕಾಡುತ್ತಿದೆ.
ಈ ಭಾಗದ ಜನರಿಗೆ ಕಿರಿದಾದ ರಸ್ತೆಗಳು ಇರುವುದರಿಂದ ಪ್ರತಿದಿನ ಬೈಕೋ ಕಾರು ಲಾರಿ ಮೋಟರ್ ಸೈಕಲ್ ಸೇರಿದಂತೆ ಅಪಘಾತಗಳು ಅತಿ ಹೆಚ್ಚು ಆಗುವುದರಿಂದ ಇಲ್ಲಿನ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಆಸ್ಪತ್ರೆ ದಾಖಲಾಗುತ್ತಿದಂತೆ ವೈದ್ಯರು ಚಿತ್ರದುರ್ಗ- ಚಳ್ಳಕೆರೆ ದಾವಣಗೆರೆ- ಜಗಳೂರು ಪಟ್ಟಣಗಳಿಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸುತ್ತಾರೆ ಆದರೆ ಪ್ರಥಮಿಕವಾಗಿ ಸಿಗುವ ಸೌಲಭ್ಯ ಇಲ್ಲದೆ ಸೊರಗುತ್ತಿದೆ.
ಹೇಳಿಕೆ :
ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಗಾಗಲೇ ಇಬ್ಬರು ವೈದ್ಯರಗಳನ್ನು ನೇಮಕ ಮಾಡಿದೆ ಅವರು ಸೇವೆ ಕೂಡ ನೀಡುತ್ತಿದ್ದಾರೆ. ಇನ್ನೂ ಮೂರು ದಿನಗಳಲ್ಲಿ ಬಡ ರೋಗಿಗಳ ಸೇವೆಗೆ ಉಚಿತ ಅಂಬ್ಯೂಲೆನ್ಸ್ ಸೇವೆ ಸಿಗಲಿದೆ.- ಡಾ.ರೇಣುಪ್ರಸಾದ್,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು