ಚಳ್ಳಕೆರೆ : ದುಶ್ಚಟಗಳನ್ನು ತೆಜಸಿ ಸಮಾಜದಲ್ಲಿ ತನ್ನದೆಯಾದಂತೆ ಚಾಪು ಮೂಡಿಸಿದ ಮಹಾನ್ ವ್ಯಕ್ತಿ ವೇಮರೆಡ್ಡಿ ಮಲ್ಲಮ್ಮ ಅವರ ಮೈದುನಾ ಪರಿರ್ವತನೆಯಲ್ಲಿ ಜಗತ್ತೆ ನಿಬ್ಬೆರುಗಾಗುವಂತೆ ಅವರು ಮಾಡಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು…
ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೇಮನ ಜಯಂತಿ ಕಾರ್ಯಕ್ರಮದಲ್ಲಿ ವೇಮನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು… ಸರ್ವಜನಾಂಗAದ ಏಳಿಗೆಗೆ ಶ್ರಮಿಸುವಂತಹ ಕೆಲಸವನ್ನು ವೇಮನ ಅವರು ಮಾಡಿದ್ದಾರೆ, ಅವರ ಸಾಧನೆಗಳ ಸದಾ ನಮಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ರೆಡ್ಡಿ ಸಮುದಾಯದ ಹಿರಿಯ ಮುಖಂಡ ಚನ್ನಗಾನಹಳ್ಳಿ ತಿಮ್ಮಾರೆಡ್ಡಿ ಮಾತನಾಡಿ, ಎಲ್ಲಾ ಸಮುದಾಯಗಳ ಏಳಿಗೆಗಾಗಿ ಕ್ರಾಂತಿಕಾರಿಯಾದ ಅನುಭವನ ಮಂಟಪವನ್ನು 12ನೇ ಶತಮಾನದಲ್ಲಿ ಬಸವಣ್ಣರ ಕಟ್ಟಿ ಅದರ ಮಾರ್ಗದಲ್ಲೆ ಸಂವಿಧಾನವನ್ನು ರಚಿಸಿ ಸಮಾಜಕ್ಕೆ ಒಳಿತು ಮಾಡಿದಂತೆ 14ನೇ ಶತಮಾನದಲ್ಲಿ ವೇಮನವರು ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನ ತ್ಯಾಗ ಮಾಡಿ ಬದುಕಿನಲ್ಲಿ ತೊರಿಸಿಕೊಟ್ಟವರು, ಹೇಮರೆಡ್ಡಿ ಮಲ್ಲಮ್ಮರ ತ್ಯಾಗ ಮನೋಭಾವ ಇಂದಿನವರಿಗೆ ಪ್ರೇರಣೆ, ಅದ್ದರಿಂದ ಪರಿಸರ ಉಳಿಸಿ ಅದರ ನೆರಳು ನಾವು ಪಡೆಯಬೇಕು. ಅದರಂತೆ ಸಮಾಜದಲ್ಲಿ ಒಳ್ಳೆಯ ಕಾರ್ಯಗಳತ್ತಾ ಹೋಗಬೇಕಿದೆ ಎಂದರು.
ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ, ವೇಮನ ಅವರು ಹುಟ್ಟಿನಿಂದಲು ಬಹುಮುಖ ಪ್ರತಿಭೆಯಾಗಿ ಬೆಳೆದು ವಚನಕಾರನಾಗುತ್ತಾನೆ, ವೇಮನ ಆದರ್ಶಗಳನ್ನು, ತತ್ವಗಳನ್ನು ಈಗಿನ ಯುವ ಪೀಳಿಗೆಯು ಮೈಗೂಡಿಸಿಕೊಂಡು, ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದು ಹೇಳಿದರು.
ವೇಮನ ಸಮಾಜದ ತಾಲ್ಲೂಕು ಅಧ್ಯಕ್ಷ ರಘು, ಬಿಆರ್.ತಿಮ್ಮಾರೆಡ್ಡಿ, ದಿನೇಶ್ ರೆಡ್ಡಿ, ಕರಿಕೆರೆ ಭೀಮರೆಡ್ಡಿ, ಸಿರಿಯಪ್ಪ, ಗದ್ದಿಗೆ ತಿಪ್ಪೆಸ್ವಾಮಿ, ಗುಜ್ಜಾರಿ, ಬಗರ್ ಹುಕಂ ಸಮಿತಿ ಸದಸ್ಯರು, ಕೃಷಿ ಸಹಾಯಕ ನಿರ್ದೇಶಕ ಅಶೋಕ್, ಪಶು ಇಲಾಖೆ ರೇವಣ್ಣ, ಕಂದಾಯ ಇಲಾಕೆ ಶ್ರೀನಿವಾಸ್,ಲಿಂಗೇಗೌಡ, ಪ್ರಕಾಶ್ ಸೇರಿದಂತೆ ಮುಂತಾದವರು ಇದ್ದರು.