ಚಳ್ಳಕೆರೆ : ಚಳ್ಳಕೆರೆ ನಗರದ ಶ್ರೀಅಜ್ಜನ ಗುಡಿ ದೇವಸ್ಥಾನದ ಹತ್ತಿರ ಇರುವ ದೇವರ ಎತ್ತುಗಳಿಗೆ ಮೇವು ವಿತರಣೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ದೇವರ ಎತ್ತುಗಳಿಗೆ ಮೆವು ವಿತರಿಸಿ ಮಾತನಾಡಿದರು.
ತಾಲೂಕಿನಲ್ಲಿ ಬರದ ಚಾಯೆ ಮುಸುಕಿರುವುದರಿಂದ ಜಾನುವರುಗಳಿಗೆ ಮೇವಿನ ಕೊರತೆ ಉಂಟಾಗAದತೆ ತಾಲೂಕಿನಲ್ಲಿ ಸುಮಾರು ನಾಲ್ಕು ಹೋಬಳಿಗಳಲ್ಲಿ ಗೋಶಾಲೆ ತೆರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ, ದೇವರ ಎತ್ತುಗಳಿಗೆ ಯಾವುದೇ ರೀತಿಯಲ್ಲಿ ಮೇವಿನ ಕೊರೆತೆಯಾಗದಂತೆ ಕ್ರಮವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಣಾಧಿಕಾರಿ ಶಶಿಧರ, ಪಶವೈದ್ಯಾಧಿಕಾರಿ ರೇವಣ್ಣ, ಮುಖಂಡರುಗಳಾದ ರಾಜಣ್ಣ, ಅಪ್ಪಣ್ಣ, ನಾಗರಾಜ್, ರಂಗಸ್ವಾಮಿ, ಪ್ರಹ್ಲಾದ್, ಮುಖಂಡರು, ಕಾರ್ಯಕರ್ತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.