ಚಳ್ಳಕೆರೆ: ತಾಲ್ಲೂಕಿನ ಗಡ್ಡದಾರಹಟ್ಟಿ ಸಮೀಪ ಬುಲ್ಲುಡ್ಲು ಶ್ರೀಬೋರಲಿಂಗೇಶ್ವರ ಸ್ವಾಮಿ ದೇವಾಲಯ ಮುಂಭಾಗ ಗುರುವಾರ ಬಯಲು ಪ್ರದೇಶದಲ್ಲಿ ನಡೆದ ಜೋಡೆತ್ತಿನಗಾಡಿ ಸ್ಪರ್ಧೆಯಲ್ಲಿ ರಾಸುಗಳು ನೊಗವತ್ತು ಜಿಗಿಯುತ್ತಿದರೆ, ರಾಸುಗಳ ಪ್ರಿಯರು ಸಿಳ್ಳು, ಕೇಕೆ ಹಾಕಿ ಸಂಭ್ರಮಿಸಿದರು.
ಗಡ್ಡದಾರಹಟ್ಟಿ ಸಮೀಪದ ಬುಲ್ಲುಡ್ಲು ಬೋರಲಿಂಗೇಶ್ವರಸ್ವಾಮಿ ದೇವಾಲಯದ ಮುಂಭಾಗ ನಡೆದ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಗಡ್ಡದಾರಹಟ್ಟಿ ಗ್ರಾಮದ ಮ್ಯಾಕಲು ಪಾಲಯ್ಯರವರ ಜೋಡೆತ್ತುಗಳು ಪ್ರಥಮ ಸ್ಥಾನ ಪಡೆದುಕೊಂಡಿವೆ. ಸ್ಪರ್ಧೆಯಲ್ಲಿ ಗೆದ್ದ ಜೋಡೆತ್ತುಗಳಿಗೆ 10 ಸಾವಿರ ನಗದು ಹಾಗೂ ಪಾರಿತೋಷಕ, ದ್ವಿತೀಯ ಬಹುಮಾನ ನಲಗೇತಮಹಟ್ಟಿ ಎನ್ಮಲ್ ಬೋರಯ್ಯ 5 ಸಾವಿರ ನಗಗದು ಪಾರಿತೋಷಕ, ತೃತೀಯ ಬಹುಮಾನ ದೊರೆಹಟ್ಟಿ ದೊರೆಸುರೇಶ ರಾಸುಗಳಿಗೆ ಲಭಿಸಿದ್ದು 3 ಸಾವಿರ ನಗದು, ಪಾರಿತೋಷಕ, ಚತುರ್ಥಿ ಬಹುಮಾನ ರಾಯಬಾರಹಟ್ಟಿ ಶ್ರೀಧರ್ ಜೋಡೆತ್ತುಗಳಿಗೆ ಲಭಿಸಿದ್ದು 2 ಸಾವಿರ ನಗದು, ಪಾರಿತೋಷಕ ನೀಡಲಾಗಿದೆ. ಜ.10ರಿಂದ ಆರಂಭವಾದ ಜೋಡೆತ್ತಿನ ಗಾಡಿ ಸ್ಪರ್ಧೆಗೆ ಗುರುವಾರ ತೆರೆಬಿದ್ದಿದೆ.
ಈ ವೇಳೆ ಗ್ರಾಪಂ ಸದಸ್ಯರಾದ ಚಿನ್ನಯ್ಯ, ಓಬಯ್ಯ ಹಾಗು ಗಡ್ಡದಾರಹಟ್ಟಿ, ಬಂಗಾರದೇವರಹಟ್ಟಿ ಗ್ರಾಮಸ್ಥರು ಇದ್ದರು