ಚಳ್ಳಕೆರೆ: ನಗರದಲ್ಲಿ ಗುರುವಾರದಂದು ಹೆಚ್.ಪಿ.ಪಿ.ಸಿ. ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರೋವರ್ರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಜಾಥ ಮಾಡುವುದರ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಭಾರತದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಸ್ತೆಗಳು ಸಹ ನಿರ್ಣಾಯಕವಾಗಿವೆ. ಮಾರುಕಟ್ಟೆಗಳು, ಆರೋಗ್ಯ, ಶಿಕ್ಷಣ ಮತ್ತು ಇತರ ಸೇವೆಗಳನ್ನು ಪಡೆಯಲು ಗ್ರಾಮೀಣ ರಸ್ತೆಗಳ ಮೂಲಕ ಪ್ರವೇಶಿಸುತ್ತಿದ್ದು. ಇದರಿಂದ
ವಾಹನ ಚಾಲನೆ ಮಾಡುವಾಗ ಕಣ್ಣುಗಳು, ಕೈಗಳು ಮತ್ತು ಮನಸ್ಸಿನಿಂದ ಗೊಂದಲವನ್ನು ತೆಗೆದುಹಾಕಿ, ತಿರುವು ಸಂಕೇತಗಳನ್ನು ಬಳಸುವುದು ಮತ್ತು ವೇಗ ಅಥವಾ ದಿಕ್ಕಿನ ಬದಲಾವಣೆಗಳ ಸಿಗ್ನಲಿಂಗ್ ಅನ್ನು ಒಳಗೊಂಡಿರುವ ನಿಯಮಗಳನ್ನು ಅನುಸರಿಸಬೇಕು. ದೈನಂದಿನ ಜೀವನದಲ್ಲಿ ಸುರಕ್ಷತೆಯ ಜೊತೆಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಿದರೆ ನಮಗೆ ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ ಎಂದು ಪ್ರೊ.ಜಗನ್ನಾಥ್.ಎನ್ ತಿಳಿಸಿದರು.

ಇತರ ರಸ್ತೆ ಸುರಕ್ಷತಾ ನಿಯಮಗಳಾದ ಸ್ಟಾಪ್ ಚಿಹ್ನೆಗಳು, ಕೆಂಪು ದೀಪಗಳು ಇತ್ಯಾದಿಗಳಂತಹ ಎಲ್ಲಾ ಟ್ರಾಫಿಕ್ ಸಿಗ್ನಲ್‌ಗಳನ್ನು ಪಾಲಿಸುವುದು, ಸೀಟ್‌ಬೆಲ್ಟ್ / ಹೆಲ್ಮೆಟ್ ಧರಿಸುವುದು, ವೇಗ ಮಿತಿ ಮತ್ತು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವುದು, ಮದ್ಯಪಾನ ಮಾಡಿ ಮತ್ತು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಬೇಡಿ ಎಂದು ಪ್ರೊ.ಜಮುನಾರಾಣಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಪ್ರೊಫೆಸರ್ ಜಗನ್ನಾಥ್, ಜಮುನಾರಾಣಿ, ತಿಪ್ಪೇಸ್ವಾಮಿ, ವಿದ್ಯಾರ್ಥಿಗಳಾದ ಮಂಜುನಾಥ್, ಅಶೋಕ, ನರಸಿಂಹ ,ಶಿಲ್ಪ, ದಿವ್ಯ, ವರ್ಷಿತ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

Namma Challakere Local News
error: Content is protected !!