ಚಳ್ಳಕೆರೆ : ಸರಕಾರದ ನಿಯಮವಳಿಗಳ ಪ್ರಕಾರ ಜಯಂತಿಗಳನ್ನು ಅರ್ಥಗರ್ಭಿತವಾಗಿ ಆಚರಿಸೊಣ ಇದರಿಂದ ಮಹಾನಿಯರನ್ನು ಗುರುತಿಸುವ ಮೂಲಕ ಅವರ ತತ್ವ ಆದರ್ಶಗಳನ್ನು ಪಾಲಿಸೊಣ ಎಂದು ತಶೀಲ್ದಾರ್ ರೇಹಾನ್ ಪಾಷ ಹೇಳಿದರು,
ಅವರು ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗಣ ರಾಜ್ಯೋತ್ಸವ ಆಚರಣೆ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಪ್ರತಿ ವರ್ಷದಂತೆ ಈ ಬಾರಿವೂ ಜನವರಿ 26ರಂದು ಗಣ ರಾಜ್ಯೋತ್ಸವನ್ನು ಸರಳವಾಗಿ ಅರ್ಥಗರ್ಭಿತವಾಗಿ ಆಚರಿಸೊಣ, ಇನ್ನು ಅಂದಿನ ದಿನ ತಾಲೂಕಿನಲ್ಲಿ ಅಗ್ರಗಣ್ಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಅಭಿನಂಧಿಸಲಾಗುವುದು, ಅದ್ದರಿಂದ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಾಧಕರ ಆಯ್ಕೆ ಸಮಿತಿ ರಚಿಸಿ ಸನ್ಮಾನಿತರನ್ನು ಗುರುತಿಸಲಾಗುವುದು. ಅದರಂತೆ ಆಯ್ಕೆ ಸಮಿತಿಯಲ್ಲಿ ಐದು ಕ್ಷೇತ್ರಗಳನ್ನು ಪರಿಗಣಿಸಿ ಸಾಧಕರನ್ನು ಗುರುತಿಸಲಾಗುವುದು, ಇನ್ನು ಪ್ರತಿ ವರ್ಷದಂತೆ ಮಕ್ಕಳ ಕಾರ್ಯಕ್ರಮಗಳು, ಗಣ್ಯರ ಭಾಷಣ ಒಳಗೊಂಡಿರುತ್ತದೆ ಎಂದರು.

ಈದೇ ಸಂಧರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ತಾಪಂ.ನರೇಗಾ ಸಹಾಯಕ ನಿರ್ದೇಶಕ ಸಂತೋಷ ಕುಮಾರ್, ಸಿಡಿಪಿಓ ಹರಿಪ್ರಸಾದ್, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಬೆಸ್ಕಾಂ ಇಲಾಖೆ ರಾಜಣ್ಣ, ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಶಿವರಾಜ್, ರೇಷ್ಮೆ ಇಲಾಖೆ ಮೋಹನ್ ಕುಮಾರ್, ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ್, ಅರಣ್ಯ ಅಧಿಕಾರಿ ಬಹುಗುಣ, ಎಇಇ ಕಾವ್ಯ, ಬಿಸಿಎಂ ಅಧಿಕಾರಿ ದಿವಕಾರ್, ಪಶು ಇಲಾಖೆ ಡಾ.ರೇವಣ್ಣ, ಕೃಷಿ ಇಲಾಖೆ ಅಧಿಕಾರಿಗಳು, ಅಬಕಾರಿ ಇಲಾಖೆ ಸಿಬ್ಬಂದಿ ಆರ್.ಕುಮಾರ್, ಅಕ್ಷರ ದಾಸೋಹ ತಿಪ್ಪೆಸ್ವಾಮಿ, ದೈಹಿಕ ಶಿಕ್ಷಕರಾದ ಪ್ರಣೇಶ್, ಕಂದಾಯ ಅಧಿಕಾರಿ ಲಿಂಗೇಗೌಡ, ವಿಎ.ಪ್ರಕಾಶ್, ಶ್ರೀನಿವಾಸ್ ಇತರ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

About The Author

Namma Challakere Local News
error: Content is protected !!