ಚಳ್ಳಕೆರೆ: ರಸ್ತೆ ಅಪಘಾತ ತಡೆಗೊಂದು ಜಾಗೃತಿ ಮೂಡಿಸಲು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಅನ್ನು ನಿರ್ಮಿಸಿಕೊಂಡ ರಂಗಸ್ವಾಮಿ ಮತ್ತು ಸ್ನೇಹಿತರು ಅನೇಕ ರೀತಿಯ ಸಾಮಾಜಿಕ ಕಾರ್ಯಗಳನ್ನು ಇತ್ತೀಚಿನ ದಿನಗಳಲ್ಲಿ ನಿರ್ವಹಿಸುತ್ತಿದ್ದಾರೆ.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಎಲ್ಲೇ ಅಪಘಾತ ಸಂಭವಿಸಿದರು ಅಂತಹ ಸ್ಥಳಗಳಿಗೆ ಸಂಜೀವಿನಿ ತಂಡದ ಸದಸ್ಯರು ತೆರಳಿ, ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕೆಲಸ ಮಾಡುತ್ತಿದ್ದು. ಅದೇ ರೀತಿ
ಸಂಜೀವಿನಿ ತಂಡದ ಯುವಕರು ತನ್ನ ಊರಿನ ರಸ್ತೆಗಳ ಗುಂಡಿಗಳನ್ನು ಕಂಡು.ಇಂದು ಅವುಗಳನ್ನು ಮುಚ್ಚುವ ಮುಖಾಂತರ ಸಾರ್ವಜನಿಕರ ಜೀವ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಓಬಯನಟ್ಟಿಯಿಂದ ನಾಯಕನಹಟ್ಟಿ ವರೆಗೆ ತೆರಳುವ ರಸ್ತೆಯು ತಗ್ಗು ಗುಂಡಿಗಳಿಂದ ಕೂಡಿದ್ದು ಅನೇಕ ಅಪಘಾತಗಳು ಸಂಭವಿಸುತಿದ್ದು ಇದನ್ನು ಮನಗಂಡಂತಹ ಸಂಜೀವಿನಿ ಟ್ರಸ್ಟಿನ, ಪ್ರೇಮ್ ಕುಮಾರ್, ನವೀನ್, ತಿಪ್ಪೇಶ್, ರಸ್ತೆ ಗುಂಡಿಗಳನ್ನು ಮುಚ್ಚಿ ಮಾನವೀಯತೆ ಮರಿದಿದ್ದಾರೆ.