ಚಳ್ಳಕೆರೆ : ರಾಜ್ಯ ಸರಕಾರದ ಮಹತ್ವದ ಯೋಜನೆಯಾದ ಯುವ ನಿಧಿ ಯೋಜನೆಗೆ ಇಂದು ಶಿವಮೊಗ್ಗದಲ್ಲಿ ಚಾಲನೆ ಸಿಗಲಿದೆ.
ಇದರ ಪ್ರಯುಕ್ತ ಚಳ್ಳಕೆರೆ ತಾಲೂಕಿನಿಂದ ಸುಮಾರು ಮೂವತ್ತು ಬಸ್ ಗಳಮೂಲಕ ವಿದ್ಯಾರ್ಥಿಗಳು ಅಧಿಕಾರಿಗಳು ತೆರಳುವ ಬಸ್ ಗಳಿಗೆ ತಹಶಿಲ್ದಾರ್ ರೇಹಾನ್ ಪಾಷ ಚಾಲನೆ ನೀಡಿದರು.
ಇನ್ನೂ ಮುಂಜಾನೆಯೇ ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕೆಎಸ್ ಆರ್ ಟಿಸಿ ಸಾರಿಗೆ ಬಸ್ ಗಳು ಆಗಮಿಸಿದ ತಕ್ಷಣ ನೊಂದಯಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಒಂದು ಬಸ್ ಗೆ ಐವತ್ತು ವಿದ್ಯಾರ್ಥಿಗಳಂತೆ ಮೂವತ್ತು ಬಸ್ ಗಳಲ್ಲಿ ತೆರಳಿದರು.
ಇನ್ನೂ ಪ್ರತಿ ವಿದ್ಯಾರ್ಥಿಗೆ ಬೆಳಗಿನ ಉಪಹಾರ ವನ್ನು ಹಾಗು ನೀರಿನ ಬಾಟಲಿಗಳನ್ನು ನೀಡುವ ಮೂಲಕ ಶಿವಮೊಗ್ಗದ ಕಡೆ ಪ್ರಯಾಣ ಬೆಳೆಸಿದರು.
ಅದರಂತೆ ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು, ಕೊಟೆ ಬೋರಮ್ಮ ಕಾಲೇಜು, ವಾಸವಿ ಕಾಲೇಜು ಬಾಪೂಜಿ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ
ಇದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಇಓ ಶಶಿಧರ್, ತಾಪಂ. ನರೇಗಾ ಸಹಾಯಕ ನಿರ್ದೇಶಕ ಸಂತೋಷ ಕುಮಾರ್, ಸಂಪತ್ ಕುಮಾರ್, ಸಿಡಿಪಿಓ ಹರಿಪ್ರಸಾದ್, ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ್, ಬಿಸಿಎಂ ದಿವಕಾರ್, ಕೆಎಸ್ ಆರ್ ಟಿಸಿ ಸಾರಿಗೆ ಅಧಿಕಾರಿ ಪ್ರಭು, ಎಇಇ ಕಾವ್ಯ, ಕಂದಾಯ ನಿರೀಕ್ಷಕ ಪಿ.ಲಿಂಗೇಗೌಡ, ಸದಾಶಿವಪ್ಪ, ಗಿರೀಶ್, ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು, ಹಾಗೂ ಕಾಲೇಜ್ ಪ್ರಾಶುಂಪಾಲರು ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.