ಚಳ್ಳಕೆರೆ : ಅಕ್ರಮವಾಗಿ ಮಧ್ಯದ ಹರಾಜು ವ್ಯವಹಾರ ಮಾಡಿ ಮದ್ಯಮಾರಾಟ ಮಾಡುತ್ತಿರುವುದಾಗಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಷಯದ ಆಧಾರದ ಮೇಲೆ ಇಂದು ಚಳ್ಳಕೆರೆ ಅಬಕಾರಿ ನೀರಿಕ್ಷಕರಾದ ನಾಗರಾಜ್ ಚಳ್ಳಕೆರೆ ತಾಲೂಕು ತಳಕು ಹೋಬಳಿ ಕಾಟಂ ದೇವರಕೋಟೆ ಗ್ರಾಮಕ್ಕೆ ಬೇಟಿ ನೀಡಿ ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮ ಸಭೆ ನಡೆಸಿದರು.
ಅಕ್ರಮ ಮಧ್ಯೆ ಮಾರಾಟ ಹಾರಾಜು ಪ್ರಕ್ರಿಯೆ ಕುರಿತು ಚಿತ್ರದುರ್ಗ ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಹಾಗೂ ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ ರವರ ಮಾರ್ಗದರ್ಶನದಂತೆ ಸ್ಥಳಕ್ಕೆ ಬೇಟಿ ನೀಡಿದ ಅಧಿಕಾರಿಗಳ ತಂಡ ಪರೀಶಿಲನೆ ನಡೆಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್, ಕೃಷ್ಣಪ್ಪ ನಾಗೇಂದ್ರ, ನರಸಿಂಹಪ್ಪ, ದೇವಿರಪ್ಪ ಗ್ರಾಮದ ಮುಖಂಡ ಶಿವಣ್ಣ ಗ್ರಾಮದ ಯುವಕರನ್ನು ದೂರಿನ ಬಗ್ಗೆ ವಿಚಾರಿಸಲು ಸಾರ್ವಜನಿಕ ಸ್ಥಳವಾದ ಆಂಜನೇಯ ದೇವಸ್ಥಾನದ ಮುಂಬಾಗದಲ್ಲಿ ಗ್ರಾಮಸಭೆಯನ್ನು ನಡೆಸಿ ವರದಿ ಸಲ್ಲಿಸಲಾಗಿದೆ.
ಇನ್ನೂ ದೂರಿನ ಬಗ್ಗೆ ಗ್ರಾಮದ ಎಲ್ಲಾರು ಒಟ್ಟಾರೆಯಾಗಿ ದೂರಿನ ಅಂಶಗಳನ್ನು ಅಲ್ಲಗೆಳೆದು ಗ್ರಾಮದಲ್ಲಿ ಯಾವುದೇ ಅಬಕಾರಿ ಹರಾಜು ನಡೆದಿರುವುದಿಲ್ಲ, ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಇಂತಹ ಪ್ರಕರಣಗಳು, ಕಂಡು ಬಂದಲ್ಲಿ ಅಬಕಾರಿ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಲು ಅಬಕಾರಿ ಇಲಾಖೆಯ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.