ಚಿತ್ರದುರ್ಗ : ಭಾರತವೆಂದರೆ ಸಾಮರಸ್ಯದ ನಾಡು. ಗಾಂಧೀಜಿಯವರ ಆದರ್ಶಗಳು ನಮ್ಮಲ್ಲಿ ಇವೆ. ಅನೇಕ ಸಂತರು, ಶರಣರು, ದಾರ್ಶನಿಕರು ಆಗಿಹೋಗಿದ್ದಾರೆ. ಗ್ರಾಮೀಣ ಭಾಗದ ಜನರು ಇಂದು ಸಬಲೀಕರಣಗೊಂಡಿದ್ದು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಲು ಪ್ರೇರಣೆ ನೀಡಬೇಕೆಂದು ದಾವಣಗೆರೆ ವಿ.ವಿ. ರಾ.ಸೇ.ಯೋಜನಾಧಿಕಾರಿ ಡಾ. ಅಶೋಕ ವಿ. ಪಾಳೇದ ಹೇಳಿದರು.
ಸಮೀಪದ ತಮಟಕಲ್ಲು ಗ್ರಾಮದಲ್ಲಿ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಿಂದ ಆಯೋಜಿಸಲಾಗಿರುವ ಎನ್.ಎಸ್.ಎಸ್. ವಿಶೇಷ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತ, ಮಾತನಾಡಿ, ಪರಿಪೂರ್ಣ ವ್ಯಕ್ತಿತ್ವಕ್ಕೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಬದುಕು ಪರಿಪೂರ್ಣವಾಗುತ್ತದೆ. ಎನ್.ಎಸ್.ಎಸ್. ಸೇರಿದರೆ ಸದೃಢ ಸಮಾಜವನ್ನು ಕಟ್ಟುತ್ತೇವೆ. ನಮ್ಮಿಂದ ಸಮಾಜಕ್ಕೆ ಕೊಡುಗೆ ಏನು ಎಂಬುದನ್ನು ತಿಳಿಯಬೇಕು. 60-70ರ ದಶಕದಲ್ಲಿ ಗ್ರಾಮೀಣ ಪ್ರದೇಶದ ಜನರು ತುಂಬಾ ಹಿಂದುಳಿದಿದ್ದರು. ಅಂತಹ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕಲ್ಪನೆ ಕಂಡು 1960ರ ಸಂದರ್ಭದಲ್ಲಿ ಎನ್.ಎಸ್.ಎಸ್. ಪ್ರಾರಂಭವಾಯಿತು. ಭಾರತದಲ್ಲಿ ವಿವಿಧ ಸಂಸ್ಕೃತಿಯ ವೈವಿಧ್ಯತೆ ಇದೆ. ಹಾಗಾಗಿ ನಾವು ಸಮಗ್ರತೆ ತರಲು ತುಂಬಾ ಶ್ರಮ ವಹಿಸಬೇಕು. ಇದು ಯುವವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ಇಂದಿನ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಇದೊಂದು ಅಪಾಯಕಾರಿ ಸಂದರ್ಭ. ಎನ್.ಎಸ್.ಎಸ್. ಎಂದರೆ ಭಾವೈಕ್ಯತೆ. ಜಾತಿ, ಧರ್ಮದ ಎಲ್ಲೆಯನ್ನು ಮೀರಿದ್ದು. ನಾವು ಸಹ ಜಾತಿ, ಧರ್ಮದ ಎಲ್ಲೆಯನ್ನು ಮೀರಿ ಬೆಳೆಯಬೇಕೆಂದರು.
ಪ್ರೊ. ಪರಶುರಾಮ ಕಟಾವಕರ್ ಮಾತನಾಡಿ, ನಾವುಗಳು ಸಮೃದ್ಧ ಭಾರತವನ್ನು ಕಟ್ಟಬೇಕು. ನಾವು ಯಶಸ್ಸು ಕಾಣಬೇಕೆಂದರೆ ಎನ್‌ಎಸ್‌ಎಸ್ ಮುಖ್ಯ ಪಾತ್ರ ವಹಿಸುತ್ತದೆ. ಸರ್ವತೋಮುಖ ಬೆಳವಣಿಗೆಗೆ ಇದು ಕಾರಣವಾಗುತ್ತದೆ ಎಂದರು.
ಟಿ. ಕೆಂಚಪ್ಪ ಮಾತನಾಡಿದರು. ರಮೇಶ್, ಕೃಷ್ಣಮೂರ್ತಿ, ಜಿ.ಎಸ್.ನಾಗರಾಜ ಇದ್ದರು.
ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ತಮಟಕಲ್ಲು ಗ್ರಾಮದಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ ನಡೆಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮದಲ್ಲಿ ಶಿಬಿರಾರ್ಥಿಗಳು ಶ್ರಮದಾನ ಮಾಡಿದರು.
ವರ್ಷಿತ ಪ್ರಾರ್ಥಿಸಿದರು. ಪ್ರಿಯಾಂಕ ಸ್ವಾಗತಿಸಿದರು. ಶಾಂಭವಿ ನಿರೂಪಿಸಿದರು. ನಯನ ಜಿ. ವಂದಿಸಿದರು.

About The Author

Namma Challakere Local News
error: Content is protected !!