ಚಳ್ಳಕೆರೆ
ವಿದ್ಯಾರ್ಥಿಗಳಲ್ಲಿರುವ ಕಲಿಕಾ ಕೊರತೆಯನ್ನು ನೀಗಿಸುವ ಪ್ರಕ್ರಿಯೆಯೇ ಪೂರಕ ಬೋಧನೆ ಅಥವಾ ಪರಿಹಾರ ಬೋಧನೆ ಎಂದು ಜೆಸಿಹಳ್ಳಿಗೊಲ್ಲರಹಟ್ಟಿ ಗ್ರಾಮದ ಸಹಿಪ್ರಾ ಶಾಲಾ ಮುಖ್ಯಶಿಕ್ಷಕ ಓ ಚಿತ್ತಯ್ಯ ಹೇಳಿದರು
ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯಲ್ಲಿನ ಗ್ರಾಮ ಸಂಸ್ಥೆಯ ಸಭಾಭವನದಲ್ಲಿ ಬುಧವಾರ ಟಾಟಾ ಪವರ್, ಹೆಲ್ಪ್ ಸಂಸ್ಥೆ ಹಾಗೂ ಗ್ರಾಮ ಸಂಸ್ಥೆಯ ವತಿಯಿಂದ ಅತಿಥಿ ಶಿಕ್ಷಕರಿಗೆ ಆಯೋಜಿಸಿದ್ದ ಪರಿಹಾರ ಬೋಧನೆ ಕುರಿತ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು
ಆಂಧ್ರ-ಕರ್ನಾಟಕ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿರುವ ಕಡೆಗಳಲ್ಲಿ ಟಾಟಾಪವರ್ ಮತ್ತು ಹೆಲ್ಪ್ ಸಂಸ್ಥೆಯು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಆಯಾ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪರಿಹಾರ ಶಿಕ್ಷಣ ನೀಡುವ ಮುಖೇನ ದಲಿತ ಮತ್ತು ಶೋಷಿತ ಸಮುದಾಯಗಳ ಕಲಿಕಾ ನ್ಯೂನತೆಯಿರುವ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆ ಮಾಡಿ ಅವರಲ್ಲಿ ಕನಿಷ್ಟ ಕಲಿಕಾ ಸಾಮರ್ಥ್ಯಗಳನ್ನು ವೃಧ್ದಿಸುವಂತೆ ಮಾಡುತ್ತಿರುವುದು ಉತ್ತಮವಾದ ಕಾರ್ಯ ಎಂದು ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆ, ಪೂರಕ ಬೋಧನೆ, ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳ ಕಲಿಕೆ ಉತ್ತಮಪಡಿಸುವ ಕುರಿತು ಉಪನ್ಯಾಸ ನೀಡಿದರು
ಹೆಲ್ಪ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಆರ್ ವೈ ಸ್ವಾಮಿ ನಾಯಕ್ ಪ್ರಾಸ್ತಾವಿಕ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಾಲಾ ಅವಧಿಯನ್ನು ಹೊರತುಪಡಿಸಿ ಪರಿಹಾರ ಶಿಕ್ಷಣವನ್ನು ನೀಡುತ್ತಿದೆ ಈ ಅತಿಥಿ ಶಿಕ್ಷಕರಿಗೆ ವೃತ್ತಿ ತರಬೇತಿ ನೀಡುವ ಮೂಲಕ ಅವರ ವೃತ್ತಿದಕ್ಷತೆಯನ್ನು ಹೆಚ್ಚಿಸಲು ಅನುವು ಮಾಡಿಕೊಡಲಾಗುತ್ತಿದೆ ಎಂದರು
ಸಂಯೋಜಕಿ ಲಕ್ಷಿö್ಮÃದೇವಿ ಮಾತನಾಡಿ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಬಂಜಗೆರೆ ಗ್ರಾಮವೂ ಸೇರಿದಂತೆ ವಿವಿಧ ಗ್ರಾಮಗಳ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಆಟಿಕೆಗಳು, ಕ್ರೀಡಾ ಸಾಮಗ್ರಿಗಳು ಶಾಲೆಯ ಅಗತ್ಯತೆಗಳನ್ನು ಪೂರೈಸಿ ಶಾಲಾ ಮಕ್ಕಳು ಯಾವುದೇ ಕೊರತೆಯಿಂದ ಕೊರಗಬಾರದು ಎಂಬುದಾಗಿದೆ ಎಂದರು
ಇದೇ ವೇಳೆ ಸಂಪನ್ಮೂಲ ವ್ಯಕ್ತಿ ಶಿಕ್ಷಕ ಓ ಚಿತ್ತಯ್ಯ ಅತಿಥಿ ಶಿಕ್ಷಕರಿಗೆ ಶಾಲೆಗಳಲ್ಲಿ ದಿನ ನಿತ್ಯ ಬೋಧನೆಯ ವೇಳೆ ಎದುರಾಗುವ ಸಮಸ್ಯೆಗಳ ಕುರಿತು ತಿಳಿವಳಿಕೆ ನೀಡಿ ಪರಿಹಾರ ಬೋಧನೆ ಕ್ರಮಗಳನ್ನು ತಿಳಿಸಿದರು
ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಆರ್ ವೈ ಸ್ವಾಮಿನಾಯ್ಕ, ಸಂಯೋಜಕಿ ಲಕ್ಷಿö್ಮದೇವಿ, ಶಿಕ್ಷಕರಾದ ಲಕ್ಷಿö್ಮÃದೇವಿ, ಮಹಾಲಿಂಗಪ್ಪ, ವೆಂಕಟೇಶ, ಮಂಜುನಾಥ, ಶಿವಣ್ಣ, ರಾಜು, ಲಕ್ಷಿö್ಮದೇವಿ, ವೃಂದಾ, ರಮ್ಯಾ, ಮಹಾಲಕ್ಷಿö್ಮÃ, ರಾಮಲಕ್ಷಿö್ಮÃ, ಸುವರ್ಣ, ಪ್ರಮಿಳಾ ಆಂಧ್ರ ಕರ್ನಾಟಕ ರಾಜ್ಯಗಳ ವಿವಿಧ ಗಡಿಪ್ರದೇಶಗಳ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರು ಇದ್ದರು
(ಪೋಟೋ ಸಿಎಲ್‌ಕೆ ಎಜುಕೇಷನ್ 27 )
ಚಳ್ಳಕೆರೆ ನಗರದ ಚಿತ್ರದುರ್ಗ ರಸ್ತೆಯಲ್ಲಿನ ಗ್ರಾಮ ಸಂಸ್ಥೆಯ ಸಭಾಭವನದಲ್ಲಿ ಬುಧವಾರ ಟಾಟಾ ಪವರ್, ಹೆಲ್ಪ್ ಸಂಸ್ಥೆ ಹಾಗೂ ಗ್ರಾಮ ಸಂಸ್ಥೆಯ ವತಿಯಿಂದ ಅತಿಥಿ ಶಿಕ್ಷಕರಿಗೆ ಆಯೋಜಿಸಿದ್ದ ಪರಿಹಾರ ಬೋಧನೆ ಕುರಿತ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ ಶಿಕ್ಷಕ ಓ ಚಿತ್ತಯ್ಯ ಉಧ್ಘಾಟಿಸಿದರು