ಚಳ್ಳಕೆರೆ : ಕಳೆದ ಎರಡು ದಿನಗಳಿಂದ ಚಳ್ಳಕೆರೆ ನಗರಸಭೆಯ ಪೌರಕಾರ್ಮಿಕರು ನಡೆಸುತ್ತಿದ್ದ ಅನಿರ್ಧಿಷ್ಟಾವದಿ ಧರಣೆ ಇಂದು ತಾತ್ಕಲಿಕವಾಗಿ ಅಂತ್ಯಗೊAಡಿದೆ.
ನಗರಸಭೆ ಮುಂಬಾಗದಲ್ಲಿ ಅನಿರ್ಧಿಷ್ಟಾವದಿ ಧರಣೆಯಲ್ಲಿ ಕುಳಿತ ಸುಮಾರು 55 ಪೌರಾಕಾರ್ಮಿಕರು ಗುತ್ತಿಗೆ ಪದ್ದತಿ ರದ್ದುಗೊಳಿಸಿ ಖಾಯಂ ಹಾಗೂ ನೇರಪಾವತಿಗೆ ಒತ್ತಾಯಿಸಿ ತಮ್ಮ ಹಕ್ಕಿಗಾಗಿ ಅನಿರ್ಧಿಷ್ಟಾವಧಿ ಧರಣೆ ನಡೆಸುತ್ತಿದ್ದರು, ಇದನ್ನು ಮನಗಂಡ ಸ್ಥಳೀಯ ಶಾಸಕ ಟಿ.ರಘುಮೂರ್ತಿ ದೂರವಾಣಿ ಮೂಲಕ ಪೌರಾಕಾರ್ಮಿಕರನ್ನು ಮನಹೊಲಿಸಿ ನಿಮ್ಮ ಸಮಸ್ಯೆಗಳಿಗೆ ಸ್ಪಂಧಿಸುವುದಾಗಿ ನಿಮ್ಮ ಕಛೇರಿಯಲ್ಲಿ ಇದೇ ತಿಂಗಳ 25 ರಂದು ನಿಮ್ಮ ಬೇಡಿಕೆಗೆ ಇತ್ಯರ್ಥ ಪಡಿಸಲಾಗುವುದು ಎಂದು ಸಂದೇಶ ರವಾನಿಸಿದ್ದರಿಂದ ತಾತ್ಕಲಿವಾಗಿ ಧರಣಿಯನ್ನು ರದ್ದು ಮಾಡಿದ್ದಾರೆ ಎನ್ನಲಾಗಿದೆ.
ಇನ್ನೂ ನಗರಸಭೆ ಪೌರಾಯುಕ್ತ ಸಿ.ಚಂಪದ್ರಪ್ಪಗೆ ಮನವಿ ನೀಡಿ ತಾತ್ಕಲಿಕವಾಗಿ ಧರಣೆಯನ್ನು ಹಿಂಪಡೆದ್ದಿದ್ದೆವೆ ಶಾಸಕರ ಮಾತಿಗೆ ಗೌರವ ಕೊಟ್ಟಿದ್ದೆವೆ ಎಂದು ಪೌರಾಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಪೆನ್ನೆಶ್, ಮಂಜುನಾಥ್, ಮಾಧ್ಯಮದೊಟ್ಟಿಗೆ ಮಾಹಿತಿ ಹಂಚಿಕೊಟ್ಟಿದ್ದಾರೆ.
ಇದೇ ಸಂಧರ್ಭದಲ್ಲಿ ಪ್ರಸನ್ನಕುಮಾರ್. ಹನುಮಂತರಾಯ, ಮಂಜಣ್ಣ, ಮಂಜುನಾಥ, ದೇವರಾಜ್, ಸೇರಿದಂತೆ 55 ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.