ಚಳ್ಳಕೆರೆ : ಹೊಸದಾಗಿ ಮತದಾನದ ಹಕ್ಕು ಪಡೆಯುವ ಅರ್ಹ ಯುವ ಮತದಾರರು ಕಳೆದ ಜನವರಿಯಿಂದ ಡಿಸೆಂಬರ್ ತಿಂಗಳ ಇಲ್ಲಿಯವರೆಗೆ ಸುಮಾರು 4915 ಯುವ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ತಹಶೀಲ್ದಾರ್ ರೇಹಾನ್ ಪಾಷ ಹೇಳಿದ್ದಾರೆ.
ಅವರು ನಗರದ ವಾಲ್ಮಿಕಿ ನಗರದಲ್ಲಿ ಮತದಾರರ ಸೂಪರ್ ಚೆಕ್ಕಿಂಗ್ ನಲ್ಲಿ ಮನೆ ಮನೆಗೆ ಬೇಟಿ ನೀಡಿ ಪತದಾರರ ನೈಜತೆಯನ್ನು ಪರೀಶೀಲಿಸುವ ಮೂಲಕ ಮತದಾನದ ಹಕ್ಕು ನೀಡಲು ಜಿಲ್ಲಾಧಿಕಾರಿಗಳ ಆದೇಶದ ಮೆರೆಗೆ ಇಂದು ಕ್ಷೇತ್ರದ ಸುಮಾರು 6 ಕಡೆಗಳಲ್ಲಿ ನಿಗಧಿ ಪಡಿಸಿದ್ದ ಸ್ಥಳಗಳಿಗೆ ಬೇಟಿ ನೀಡಿ ಯುವ ಮತದಾರರ ಮನೆಗಳನ್ನು ಪರೀಶಿಲಿಸಿ ನಂತರ ಮಾತನಾಡಿದರು.
ಚಳ್ಳಕೆರೆ ತಾಲೂಕು ಎರಡು ವಿಧಾನಸಭಾ ಕ್ಷೇತ್ರಗಳ ಮೂಲಕ ಮತದಾರರನ್ನು ಸೆಳೆಯುತ್ತದೆ ಇನ್ನೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,22,935 ಮತದಾರರು ಇದ್ದರೆ, ಈ ಬಾರಿ ಹೊಸದಾಗಿ ಮತದಾನದ ಹಕ್ಕು ಪಡೆಯಲು ಆಗಸ್ಟ್ ಹಾಗೂ ನವೆಂಬರ್ ತಿಂಗಳಲ್ಲಿ ಸುಮಾರು 3465 ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ, ಇನ್ನೂ ಇಂದು ಅನುಸೂಯಮ್ಮ, ಹಾಗೂ ಮಂಗಳ ಬಿ. ಇವರ ಮನೆಗೆ ಬೇಟಿ ನೀಡಿ ಸ್ಥಳ ಪರೀಶಿಲನೆ ನಡೆಸಲಾಗಿದೆ, ಅದರಂತೆ ಕಸಬಾ ಹೋಬಳಿಯಲ್ಲಿ ಎರಡು ಕಡೆ ಹಾಗೂ ಪರುಶುರಾಂಪುರ 2ಸ್ಥಳ, ತುರುವನೂರು ಎರಡು ಕಡೆಗಳಲ್ಲಿ ಬೇಟಿ ನೀಡಿ ವರದಿ ಸಲ್ಲಿಸಲಾಗುತ್ತದೆ ಎಂದರು.

ಇದೇ ಸಂಧರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಮತಗಟ್ಟೆ ಮೇಲ್ವಿಚಾರಕರಾದ ಕಸಬಾ ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್, ನಗರಸಭೆ ಅಧಿಕಾರಿ ವೀರಭದ್ರಿ, ಮತಗಟ್ಟೆ ಅಧಿಕಾರಿ ರೇವಣ್ಣ, ಚುನಾವಣೆ ಶಾಖೆಯ ಸಿಬ್ಬಂದಿ ಓಬಳೇಶ್ ಇನ್ನಿತರರು ಇದ್ದರು.

About The Author

Namma Challakere Local News
error: Content is protected !!