ಚಳ್ಳಕೆರೆ: ತಾಲೂಕಿನ ಕಮ್ಮತ್ ಮರಿಕುಂಟೆ ಗ್ರಾಮದಲ್ಲಿ ರೈತನೊಬ್ಬ ಕರ್ಬುಜ ಹಣ್ಣನ್ನು ಬೆಳೆದಿದ್ದಾನೆ. ಆದರೆ ಫಸಲು ಕೈ ಸೇರಬೇಕು ಅನ್ನುವಷ್ಟರಲ್ಲಿ, ಕರ್ಬುಜ ಹಣ್ಣುಗಳು ಹೊಸ ಬಗೆಯ ರೋಗಕ್ಕೆ ತುತ್ತಾಗಿ ಹಣ್ಣುಗಳು ಡ್ಯಾಮೇಜ್ ಆಗಿ ಹೋಗುತ್ತಿದ್ದು. ಇದರಿಂದ ಒಂದು ಹಣ್ಣನ್ನು ಸಹ ಮಾರಾಟ ಮಾಡದೆ ಕರ್ಬುಜ ಬೆಳೆಯನ್ನು ನಾಶಪಡಿಸಲು ರೈತ ಮುಂದಾಗಿದ್ದಾನೆ.
ರೈತನದ ಕಿರಣ್ ಗೌಡ ತನ್ನ ಮೂರು ಎಕರೆ ಜಮೀನಿನಲ್ಲಿ ಕರ್ಬುಜ ಹಣ್ಣನ್ನು ಬೆಳೆಯಲು, ಅನಂತಪುರದ ಶ್ರಾವಣಿ ಅಂಗಡಿಯಲ್ಲಿ, ಪಟಜಮ್ ತಳಿಯ ನಿರ್ಮಲಾ 24-24 ಬೀಜವನ್ನು ತಂದು ಬಿತ್ತನೆ ಮಾಡಿದ್ದಾನೆ. ಬೆಳೆಯು ಸಹ ಉತ್ತಮ ರೀತಿಯಲ್ಲಿ ಬಂದಿದ್ದು, ಫಸಲಿಗೆ ಬಂದAತಹ ಸಮಯದಲ್ಲಿ ಹಣ್ಣುಗಳು ಸಂಪೂರ್ಣವಾಗಿ ಹೊಸ ರೀತಿಯ ರೋಗಕ್ಕೆ ತುತ್ತಾಗುತ್ತಿದ್ದು. ಇದರಿಂದ ರೈತನ ಕೈ ಸೇರಬೇಕಿದ್ದ 25 ರಿಂದ 30 ಟನ್ ಹಣ್ಣು ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗಿದೆ.
ಬರಗಾಲದಲ್ಲಿ ಎರಡು ಲಕ್ಷಕ್ಕೂ ಅಧಿಕ ಸಾಲವನ್ನು ಮಾಡಿ ಕರ್ಬುಜ ಹಣ್ಣನ್ನು ಬೆಳೆಯಲು ಮುಂದಾಗಿದ್ದೇನೆ. ಆದರೆ ಫಸಲಿಗೆ ಬಂದ ಹಣ್ಣುಗಳು ಸಂಪೂರ್ಣವಾಗಿ ರೋಗಕ್ಕೆ ತುತ್ತಾಗಿ ಆಗಿ ಹೋಗುತ್ತಿವೆ. ಇದರಿಂದ ಅಂಗಡಿಯಿAದ ತಂದ ಬೀಜದ ಫಾಲ್ಟ್ ಅಥವಾ ಹೊಸ ತಳಿಯ ರೋಗ ಬಂದಿದೆಯಾ ಎಂಬುದು ತಿಳಿಯದೆ. ಬೆಳೆಯು ಸಂಪೂರ್ಣವಾಗಿ ನಷ್ಟವಾಗಿದ್ದು, ಇದರಿಂದ ಬೆಳೆಯನ್ನು ನಾಶಪಡಿಸಲು ರೈತ ಕಿರಣ್ ಗೌಡ ಮುಂದಾಗಿದ್ದೇನೆ.
ಇದರಿಂದ ಸಂಬAಧ ಪಟ್ಟ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು, ರೈತರ ಜಮೀನಿಗೆ ಬಂದು ಸಂಶೋಧನೆ ನಡೆಸಿ ರೈತರ ಕೈ ಸೇರಬೇಕಿದ್ದ ಬೆಳೆಗೆ ಏನು ತೊಂದರೆ ಆಗಿದೆ ಎಂಬುದನ್ನು ತಿಳಿಸಿ.ಇಲಾಖೆ ವತಿಯಿಂದ ಪರಿಹಾರ ಕೊಡಬೇಕು. ಎಂದು ಯುವ ರೈತ ಕಿರಣ್ ಗೌಡ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.