ಚಳ್ಳಕೆರೆ

ಹಸು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ವಾಹನವನ್ನು ಹಿಂಬಾಲಿಸಿ ಹಸುವನ್ನು ರಕ್ಷಿಸಿಕೊಂಡ ರೈತ ನಾಗರಾಜು

ಚಳ್ಳಕೆರೆ: ತಾಲೂಕಿನ ಹೊಟ್ಟಪ್ಪನಹಳ್ಳಿಯ ನಂದಾಪುರ ನಗರದ ರೈತ ನಾಗರಾಜ್ ಅವರ ಹಸುವನ್ನು ಯಾರೂ ಕಳ್ಳರು ಅಶೋಕ್ ಲೇಲ್ಯಾಂಡ್ ವಾಹನದಲ್ಲಿ ಕದ್ದು ಪರಾರಿಯಾಗಲು ಯತ್ನಿಸಿದು, ನಾಗರಾಜ್ ಅವರ ಕುಟುಂಬದ ಸಮಯಪ್ರಜ್ಞೆಯಿಂದ ಹಸುವನ್ನು ಕದ್ದುಪರಾರಿಯಾಗುತ್ತಿದ್ದ ವಾಹನವನ್ನು ಹಿಂಬಾಲಿಸಿ ತಮ್ಮ ಹಸುವನ್ನು ರಕ್ಷಿಸಿ ಕೊಂಡಿದ್ದಾರೆ.

ಹಸುವನ್ನು ಕದ್ದು ಪರಾರಿಯಾಗುತ್ತಿದ್ದ ವಾಹನದ ಶಬ್ದವನ್ನು ಕೇಳಿದ ರೈತ ನಾಗರಾಜ್ ಮತ್ತು ಮಗ ಮಂಜುನಾಥ್ ಅಳಿಯ ಲೋಕೇಶ್ ಗಾಬರಿಯಿಂದ ಎಚ್ಚರಗೊಂಡು. ಲೋಕೇಶ್ ಅವರ ಗೆಳೆಯರ 2 ಕಾರಿನಲ್ಲಿ ಹಸುವನ್ನು ಕದ್ದು ಪರಾರಿ ಆಗುತ್ತಿದ್ದ, KA51-AA-6295 ವಾಹನವನ್ನು 15ಕಿಲೋಮೀಟರ್ ಚೇಂಜ್ ಮಾಡಿದು, ಗೋಪನಹಳ್ಳಿಯ ಬಿಎಸ್ಎನ್ಎಲ್ ಆಫೀಸಿನ ಹತ್ತಿರ ಕಳ್ಳರು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಈ ಘಟನೆಯು ಶನಿವಾರ ತಡರಾತ್ರಿ ನಡೆದಿದೆ.

ಮಧ್ಯರಾತ್ರಿ 12:50 ರಲ್ಲಿ ವಾಹನದಲ್ಲಿ ಕಳ್ಳರನ್ನು ಹಿಡಿಯಲು ಕಿರುಚಿಕೊಂಡು ಬಂದ ಕಾರಿನವರ ಶಬ್ದ ಕೇಳಿ ಬಂದಂತ ಕೆಆರ್‌ಎಸ್ ಪಕ್ಷದ ಮಣಿಕಂಠ, ರೈತರು ಜೀವನಕ್ಕೆ ಹಸುಗಳನ್ನು ಸಾಕುತ್ತಿದ್ದಾರೆ. ಆದರೆ ಸರ್ಕಾರದ ಸಬ್ಸಿಡಿಯ ಮೂಲಕ ವಾಹನವನ್ನು ಪಡೆದು ದುರ್ಬಳಕೆ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ಸಾರಿಗೆ ಸಚಿವರೇ, ಇಂತಹ ಅಹಿತಕರ ಘಟನೆಗಳು ನಡೆಯದಂಗೆ ಸೂಕ್ತ ಕ್ರಮ ಕೈಗೊಳ್ಳಿ ರೈತರನ್ನು ರಕ್ಷಿಸಿ ಎಂದು ಹೇಳಿ.112 ಪೊಲೀಸರಿಗೆ ಮಾಹಿತಿ ನೀಡಿ ಹಸುವನ್ನು ಕದ್ದು ತಂದ ವಾಹನವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Namma Challakere Local News
error: Content is protected !!